Advertisement

ಕೀರ್ತಿ ಬೈಂದೂರ್

ಯಾವುದರಲ್ಲಿದೆ ಸುಖ?: ಎಸ್. ನಾಗಶ್ರೀ ಅಜಯ್ ಅಂಕಣ

ನಿರಂತರ ದುಡಿಮೆ ಹಾಗೂ ಹಣಗಳಿಕೆಯ ಓಟಕ್ಕೆ ಬಿದ್ದು, ಸ್ವಂತ ಸುಖವನ್ನೇ ಕಡೆಗಣಿಸುವುದು, ಅರ್ಥವಿಲ್ಲದ ತ್ಯಾಗದ ಹೊರೆಯನ್ನು ಹೊತ್ತು ಮನೆಯವರ ಹೊಟ್ಟೆ ಉರಿಸುವುದು ಯಾವ ಪುರುಷಾರ್ಥಕ್ಕಾಗಿ? ಸದಾ ತನ್ನ ಸುಖದ ಹುಡುಕಾಟದಲ್ಲೇ ಉಳಿದು ಬೇರೆಯವರ ಭಾವನೆಗಳನ್ನು ನಿರ್ಲಕ್ಷಿಸುವುದು ಎಷ್ಟು ಸರಿ? ಹಣವೊಂದೇ ಕಾಡುವ ಬಗೆಯಲ್ಲಿ ಎಷ್ಟೊಂದು ವೈವಿಧ್ಯವಿದೆ ಅಲ್ಲವೇ?
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ

Read More

ಮನಸ್ಸಿನಂತೆ ಮಹದೇವ: ಎಸ್.‌ ನಾಗಶ್ರೀ ಅಜಯ್‌ ಅಂಕಣ

ಸ್ವಲ್ಪ ಯಾಮಾರಿದರೂ, ಯಾರನ್ನಾದರೂ ನಿರಾಶೆ, ನಕಾರಾತ್ಮಕ ಮನಃಸ್ಥಿತಿಯ ಕುಳಿಯೊಳಗೆ ಸೆಳೆಯುವ ತಾಕತ್ತು ಅವರಿಗಿರುತ್ತದೆ. ಕೆಟ್ಟವರಲ್ಲ. ಬೇರೆಯವರಿಗೆ ಕೆಟ್ಟದ್ದನ್ನು ಹಾರೈಸುವುದಿಲ್ಲ. ಪರೋಪಕಾರಿಗಳಾಗಿಯೇ ಕಾಣುತ್ತಾರೆ. ಆದರೆ ನಿರಂತರ ನಿರಾಶೆ, ನೋವು, ದುಃಖದ ಕಥೆಗಳನ್ನೇ ನೆನಪು ಮಾಡಿಕೊಳ್ಳುತ್ತಾ, ಒಳ್ಳೆಯ ಬದಲಾವಣೆಯ ಸಾಧ್ಯತೆಯನ್ನೇ ಅಲ್ಲಗೆಳೆಯುತ್ತಾ ಬದುಕುವವರ ನಡುವೆ ಸಂತೋಷಪರ ವ್ಯಕ್ತಿಗಳು ಹೆಚ್ಚುಕಾಲ ಉಳಿಯಲಾಗುವುದಿಲ್ಲ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ

Read More

ಕೈ ಜೋಡಿಸಿದರೆ ಹಬ್ಬವೂ ಹಗುರ: ಎಸ್.‌ ನಾಗಶ್ರೀ ಅಜಯ್‌ ಅಂಕಣ

ಸಂಸ್ಕೃತಿಯ ರಕ್ಷಣೆ, ಆಚರಣೆಗಳ ಹೊಣೆಯನ್ನು ಹೆಣ್ಣಿನ ಕುತ್ತಿಗೆಗೆ ನೇತುಹಾಕಿ, ತಾವು ಮಾತ್ರ ಹಾಯಾಗಿ ಮೊಬೈಲ್, ಲ್ಯಾಪ್ ಟಾಪ್‌ಗಳಲ್ಲಿ ಕಾಡುಹರಟೆ, ಕಛೇರಿ ಕೆಲಸದಲ್ಲಿ ಕಳೆದುಹೋದರೆ, ಚಿಕ್ಕವರು ಮಾಡುವ ಕೆಲಸದಲ್ಲಿನ ಲೋಪ ಹುಡುಕುವುದರಲ್ಲೇ ಹಿರಿಯರು ನಿರತರಾದರೆ, ಓದು ಮಾತ್ರ ಸಾಕೆಂದು ಮಕ್ಕಳನ್ನು ಕೆಲಸಕ್ಕೆ ಹಚ್ಚದಿದ್ದರೆ, ಹಬ್ಬದ ಸೊಗಸು ಅರಿವಿಗೆ ಬರುವುದೇ ಇಲ್ಲ. ಒಂದು ಕಾಲಕ್ಕೆ ಮನೆಯ ಸುತ್ತಮುತ್ತ ಅನಾಯಾಸವಾಗಿ ದೊರೆಯುತ್ತಿದ್ದ ಪತ್ರೆ, ಪುಷ್ಪ, ಮಾವು, ಬೇವು, ಬಾಳೆಕಂದು, ಹೊಂಬಾಳೆ ಇವತ್ತಿಗೆ ಚಿನ್ನದ ಬೆಲೆ ಹೊತ್ತುಕೊಂಡು, ಮಾರ್ಕೆಟ್ ಸೇರಿವೆ. ಹೊಸಕಾಲದ ತಿನಿಸಿನ ರುಚಿಕಂಡ ಮಕ್ಕಳಿಗೆ ಪಾರಂಪರಿಕ ಆಹಾರ ತಮಾಷೆಯಾಗಿ ಕಾಣುತ್ತಿದೆ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ

Read More

ಆರೋಗ್ಯವನ್ನೂ ದುಡ್ಡಿನಿಂದ ಕೊಳ್ಳುವ ಹಾಗಿದ್ದಿದ್ದರೆ!: ಎಸ್.‌ ನಾಗಶ್ರೀ ಅಜಯ್‌ ಅಂಕಣ

ಸಂಬಳ ಕೊಡುವ ಕೆಲಸವನ್ನು, ಹುದ್ದೆ ನೀಡುವ ಅಧಿಕಾರವನ್ನು, ಹಣ ತಂದುಕೊಡುವ ಸವಲತ್ತನ್ನು, ಸುಲಭಕ್ಕೆ ಬೆರಳತುದಿಗೆ ದಕ್ಕಿಸುವ ಆಧುನಿಕ ಜೀವನಶೈಲಿಯನ್ನು ಪ್ರೀತಿಸುವ, ಅದನ್ನು ಉಳಿಸಿಕೊಳ್ಳಲು ವಿಶ್ವಪ್ರಯತ್ನ ಮಾಡುವ ನಮಗೆ ಆರೋಗ್ಯ ಕಾಡಿಸುವ ಮರೀಚಿಕೆ. ಆರೋಗ್ಯವನ್ನೂ ಹಣ ಕೊಟ್ಟು ಕೊಳ್ಳುವ ಹಾಗಿದ್ದರೆ, ಸರಿಯಾಗುತ್ತಿತ್ತೇನೋ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ

Read More

ಎದೆ ಹಿಂಡುವ ನೆನಪು…: ಎಸ್. ನಾಗಶ್ರೀ ಅಜಯ್ ಅಂಕಣ

ಮಧ್ಯಾಹ್ನದ ಊಟಕ್ಕೆ ಆರಾಮಾಗಿ ಮನೆಗೆ ಹೋಗಿ ಬರಬಹುದಿತ್ತು. ಕೆಲವು ಮಕ್ಕಳ ತಾಯಂದಿರು ಮಾತ್ರ ಪ್ರತಿದಿನ ತಮ್ಮ ಮಕ್ಕಳ ಡಬ್ಬಿ ಹಿಡಿದು ಮಧ್ಯಾಹ್ನ ಶಾಲೆಗೆ ಬಂದು ತಿನ್ನಿಸಿ ಹೋಗುತ್ತಿದ್ದರು. ಒಂದು ಮಳೆಮಧ್ಯಾಹ್ನ ನನ್ನ ಅಮ್ಮನೂ ಡಬ್ಬಿ ತಂದು, ತಿನ್ನುವವರೆಗೂ ಜೊತೆಯಿದ್ದು ಹೋದಾಗ ಒಂದು ಬಗೆಯ ಜಂಬ. ಸಂತೋಷ. ನನ್ನ ಗೆಳತಿಯೊಬ್ಬಳನ್ನು ಕೇಳಿದ್ದೆ, “ಇವತ್ತು ನಮ್ಮಮ್ಮ ಬಂದಿದ್ರು. ನೋಡಿದ್ಯೇನೇ?” ಅವಳು ಅಷ್ಟೇ ಸಹಜವಾಗಿ, “ಎಷ್ಟು ಜೋರು ಮಳೆ ಬಂದರೂ ನಮ್ಮಮ್ಮ ಬರಲ್ಲ ಕಣೆ. ನಾನು ಹುಟ್ಟಿದಾಗಲೇ ಅವರು ಸತ್ತೋದ್ರು.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ