ಸಂಬಂಧ ಸೂಕ್ಷ್ಮಗಳ ಗಾಢ ಸ್ಪಂದನೆಯ ‘ನೀಲಿ ನಕ್ಷೆ’: ಸುನಂದಾ ಕಡಮೆ ಬರಹ
ದಿಕ್ಕನ್ನು ನೆನಪಿನಲ್ಲಿಟ್ಟುಕೊಳ್ಳುವಂತಿದ್ದ ಬೋರ್ಗರೆವ ನೀಲಿ ಕಡಲಿನ ಬಾಲ್ಯದ ಸಂಗಾತಿ ಸರಯೂ ನಂತರ ಹೋಗಿ ಸೇರಿದ ಮುಂಬೈ ನಗರದ ಮೂರೂ ಕಡೆಗಳಲ್ಲಿ ಸಮುದ್ರ ಕಂಡು ದಿಕ್ಕು ಗುರುತಿಸಲು ಬಾರದೇ ಗಲಿಬಿಲಿಗೊಂಡವಳು. ಮೊದಲನೇ ತರಗತಿಯಲ್ಲೇ ಮೂರನೇ ರ‍್ಯಾಂಕ್ ಬಂದಾಗ ಊರಿಗೆಲ್ಲ ಪೇಡೆ ಹಂಚಿ ಅಪ್ಪನಿಂದ ಹೊಡೆಸಿಕೊಂಡ ಅಮ್ಮನನ್ನು ಕಾಣುತ್ತ ಬೆಳೆದ ಸರಯೂ ಸದಾ ತನ್ನಪ್ಪ ತನ್ನನ್ನು ಕಡೆಗಣಿಸುತ್ತಿದ್ದಾನೆಯೇ ಎಂದು ವಾರಗಣ್ಣಲ್ಲೇ ಗಮನಿಸುತ್ತ ಬಂದವಳು.
ಅಮಿತಾ ಭಾಗವತ್ ಕಾದಂಬರಿ ‘ನೀಲಿ ನಕ್ಷೆ’ಯ ಕುರಿತು ಸುನಂದಾ ಕಡಮೆ ಬರಹ ನಿಮ್ಮ ಓದಿಗೆ