ಇದು ಆಸ್ಟ್ರೇಲಿಯನ್ ಮಹಿಳಾ ಕ್ರೀಡಾಪಟುಗಳಿಗೆ ಸೇರಿದ ವರ್ಷ!
ಇಪ್ಪತ್ತೊಂದನೇ ಶತಮಾನದಲ್ಲಿ ಕೂಡ ಹೊರದೇಶದವರಿಗೆ ಆಸ್ಟ್ರೇಲಿಯ ಅಂದರೆ ಆಂಗ್ಲೋ-ಆಸ್ಟ್ರೇಲಿಯಾ ಎಂಬ ಏಕತ್ವ ಮಾತ್ರ ಕಾಣುವುದು. ಎಲ್ಲವೂ ಆಂಗ್ಲೋ-ಯೂರೋಪಿಯನ್-ಅಮೇರಿಕನ್ ಆಗಿರುವ ಈ ದೇಶದಲ್ಲಿ ಈ ಮಣ್ಣಿನ ಮಕ್ಕಳಾದ ಅಬೊರಿಜಿನಲ್ ಜನರ ಸಂಸ್ಕೃತಿ ಮತ್ತು ತಿಳಿವಳಿಕೆಯ ಮಹತ್ವ ಬೆಳಕಿಗೆ ಬರಲು ಸಾಕಷ್ಟು ಅವಕಾಶವಾಗಿಲ್ಲ. ಇಂಥಾ ಸನ್ನಿವೇಶದಲ್ಲಿ ಮಹಿಳಾ ಕ್ರೀಡಾಪಟುವೊಬ್ಬರು ರೂಪುಗೊಳ್ಳುವುದು ಸರಳ ಮಾತಲ್ಲ.
ವಿನತೆ ಶರ್ಮಾ ಬರೆದ ‘ಆಸ್ಟ್ರೇಲಿಯ ಪತ್ರ’ ಇಲ್ಲಿದೆ.