Advertisement
ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

ಹಲ್ಲಿ, ಹಾವು, ಚೇಳುಗಳ ಸ್ವರ್ಗ!: ಡಾ.ವಿನತೆ ಶರ್ಮಾ ಅಂಕಣ

“ಹೇಳಿಕೇಳಿ, ಆಸ್ಟ್ರೇಲಿಯಾದ ಪರಿಸರ ಬಹು ಸೂಕ್ಷ್ಮವಾದದ್ದು, ಬೇರೆ ಖಂಡಗಳಿಗಿಂತ ಭಿನ್ನವಾದದ್ದು. ಪರದೇಶದಿಂದ ಆಮದಾಗಿ ಬಂದ ಕಪ್ಪೆ ಈ ದೇಶದ ಸ್ವಾಭಾವಿಕ ಪರಿಸರಕ್ಕೆ ಮತ್ತು ಜೀವಚರಗಳಿಗೆ ದುಃಸ್ವಪ್ನವಾಗಿಬಿಟ್ಟಿತು. ಈ ಕಪ್ಪೆಯ ವಂಶಾಭಿವೃದ್ದಿಯನ್ನ ತಡೆಗಟ್ಟಲು, ಅದನ್ನು ಧೈರ್ಯದಿಂದ ಎದುರಿಸಿ ನುಂಗಿ ನೀರುಕುಡಿಯಲು ಇಲ್ಲಿ ಯಾವುದೇ ಪರಭಕ್ಷಕ ಪ್ರಾಣಿ ಇರಲಿಲ್ಲ. ಕಪ್ಪೆಗೆ ಆಸ್ಟ್ರೇಲಿಯಾದಲ್ಲಿ ಯಾವ ಎದುರಾಳಿಯೂ ಇಲ್ಲವಾಗಿ, ಇಲ್ಲಿನ ಸ್ವಾತಂತ್ರ್ಯ ಅದಕ್ಕೆ ತುಂಬಾ ಇಷ್ಟವಾಗಿಹೋಯ್ತು.”

Read More

ರಾಣಿರಾಜ್ಯದಲ್ಲಿ ಬೆಂಕಿ ವಿಕೋಪ, ಪ್ರವಾಹ ತಾಪ: ವಿನತೆ ಶರ್ಮ ಅಂಕಣ

“ಬೆಂಕಿ ಬಂದಾಗ ಮನೆ ತೊರೆಯುವುದಿಲ್ಲ, ಸತ್ತರೆ ಇಲ್ಲೇ ಎನ್ನುತ್ತಾ ಹಠಹಿಡಿದು ಕುರ್ಚಿ ಹಾಕಿಕೊಂಡು ಮನೆಮುಂದೆ ಕುಳಿತು ಬೆಂದುಹೋದ ಪತ್ನಿಯ ಬಗ್ಗೆ ರೋಧಿಸುತ್ತಿದ್ದ ವೃದ್ಧ, ತನ್ನ ಪುಟ್ಟ ನಾಯಿಯನ್ನ ಕಳೆದುಕೊಂಡ ಬಾಲಕಿಯ ಆಕ್ರಂದನ, ಮನೆ, ಆಸ್ತಿಪಾಸ್ತಿ, ಕುದುರೆಗಳನ್ನು ಕಳೆದುಕೊಂಡ ನಿರ್ಗತಿಕರಾದ ಆರು ಜನರಿದ್ದ ಕುಟುಂಬ, ಪ್ರವಾಹ ಬಂದಾಗ ತನ್ನ ಕಾರಿನ ಮೇಲೇರಿ ನಿಂತು ಫೋಟೋ ಹಿಡಿಯುತ್ತಾ ರೋಮಾಂಚಿತನಾದ ಯುವಕ, ಬೇರೆ ದೇಶದಿಂದ ಬಂದು ಇಲ್ಲಿ ಬದುಕುತ್ತಾ ಬಾಳುತ್ತಿದ್ದರೂ ಕೂಡ ನೆರೆ ಬಂದಾಗ ಸಹಾಯ ಮಾಡದೆ….”

Read More

ಮೊಬೈಲ್ ಸ್ಕೂಟರ್ ನ ‘ವಿಶೇಷ’ ಕತೆಗಳು: ವಿನತೆ ಶರ್ಮಾ ಅಂಕಣ

“ವಿಶೇಷ ಸಾಮರ್ಥ್ಯರಿಗೆ ಕಷ್ಟಗಳಿಗಿಂತ ಸವಾಲುಗಳೇ ಹೆಚ್ಚು. ಹೆಚ್ಚಿನಪಾಲು ಸಮಾಜ ಅವರನ್ನು, ಅವರ ಮನಃಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸೋತಿದೆ ಅನಿಸುತ್ತದೆ. ನನ್ನ ಪಕ್ಕ ಸ್ಕೂಟರಿನಲ್ಲಿ ಸಾಗಿದ್ದ ಅವರಿಬ್ಬರೂ ರಸ್ತೆಯ ಏರುತಗ್ಗುಗಳ ಪ್ರಕಾರ ವೇಗವನ್ನು ನಿಯಂತ್ರಿಸುತ್ತಿದ್ದರು. ಅವನ, ಅವಳ ಅಂದಿನ ದಿನದಲ್ಲಿ ಅದೇನೆಲ್ಲಾ ಏರುತಗ್ಗುಗಳಿದ್ದವೋ ಯಾರು ಬಲ್ಲರು? ಇಬ್ಬರಿಗೂ ಆ ದಿನ ಎರಡು ಹೊತ್ತಿನ ಪೂರ್ತಿ ಊಟ ಸಿಕ್ಕಿತ್ತೇ?”

Read More

ಬ್ರಿಸ್ಬನ್ ನಗರದಲ್ಲಿ ಇಂಡಿಯನ್ ಇಂಡಿಪೆಂಡೆನ್ಸ್ ಡೇ ಆಚರಣೆ: ವಿನತೆ ಶರ್ಮ ಅಂಕಣ

“ಏರು ಮಧ್ಯಾಹ್ನದ ಬಿಸಿಲಲ್ಲಿ ಭಾಷಾಧಾರಿತ ಭಾರತ ದೇಶದ ರಾಜ್ಯಗಳನ್ನು ಪ್ರತಿನಿಧಿಸುತ್ತಾ ಸ್ಥಳೀಯ ಸಂಸ್ಥೆಗಳು ಪೆರೇಡ್ ನಡೆಸಿದವು. ಮರಾಠಿ ಸಂಸ್ಥೆಯವರು ಹೆಗಲ ಮೇಲೆ ದೊಡ್ಡದೊಡ್ಡ ಡೋಲುಗಳನ್ನು ಇಳಿಬಿಟ್ಟುಕೊಂಡು ಲಯಬದ್ಧವಾಗಿ ಬಾರಿಸುತ್ತಿದ್ದರು. ಬಿಳಿಯುಡುಪಿಗೆ ಹೊಂದುವಂತೆ ಬಿಳಿಬಣ್ಣದ ಡೋಲುಗಳು, ಬಿಸಿಲಿನ ಝಳವನ್ನು ತಡೆಹಿಡಿಯಲು ಕಣ್ಣಿಗೆ ತಂಪು ಕನ್ನಡಕ.”

Read More

‘ಕಾಣೆಯಾದವರ ವಾರ’ಕ್ಕೆ ಕಾಣೆಯಾದವರ ಎರಡು ಕತೆ: ವಿನತೆ ಶರ್ಮ ಅಂಕಣ

“ಕೆಲ ನಿಮಿಷಗಳ ನಂತರ ಬಂದ ಯಾರೋ ಆಗಂತುಕರ ಅವನನ್ನು ಕಾರಿನಲ್ಲಿ ಕೂರಿಸಿಕೊಂಡು ಎಲ್ಲಿಗೋ ಹೊರಟುಬಿಟ್ಟಿದ್ದರು. ಅಲ್ಲಿಂದ ಮುಂದೆ ಎಂದೆಂದಿಗೂ ಅವನು ಯಾರಿಗೂ ಕಾಣಿಸಲಿಲ್ಲ. ಕೇಳಿದ ಎಲ್ಲರ ಎದೆ ಢವಢವಿಸಿತ್ತು, ರಕ್ತ ತಣ್ಣಗಾಗಿತ್ತು. ಅವನ ಅಪ್ಪ-ಅಮ್ಮಂದಿರು, ಸರ್ಕಾರ, ಪೊಲೀಸರು ಅವನನ್ನು ಹುಡುಕುತ್ತಾ ಇಡೀ ಒಂದು ದಶಕವನ್ನೇ ಕಳೆದರು.”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ