Advertisement
ಎಸ್. ಜಯಶ್ರೀನಿವಾಸ ರಾವ್

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು.  ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು" (ಪೋಲೀಷ್‌ ಕವಿತೆಗಳ ಕನ್ನಡಾನುವಾದಿತ ಸಂಕಲನ).  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ.  ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.  ಎಸ್ಟೋನಿಯಾ, ಲ್ಯಾಟ್ವಿಯಾ ಹಾಗೂಲಿಥುವೇನಿಯಾ ದೇಶದ ಕವಿತೆಗಳ ಸಂಕಲನ 'ಬಾಲ್ಟಿಕ್ ಕಡಲ ಗಾಳಿ' ಇತ್ತೀಚೆಗೆ ಪ್ರಕಟವಾಗಿದೆ.

ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ

ಅದರೊಳಗೇನಿದೆ ಎನ್ನುವುದು ಒಳಹೋದವರಿಗೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಿಲ್ಲ. ಒಳಗೆ ಹೋದವರು ಎಬ್ಬಿಸುತ್ತಿದ್ದ ನಗು ಹೊರಗೆ ಕೂತ ಹೊಸಬರಲ್ಲಿ ಮೂಡಿಸುತ್ತಿದ್ದದ್ದು ವಿಸ್ಮಯವನ್ನು, ಕುತೂಹಲವನ್ನು. ನಟರಾಜ ಕೊಟ್ಟಿದ್ದ ಐಡಿಯಾ ಫಲ ಕೊಡುವುದಕ್ಕೆ ಹೆಚ್ಚು ಸಮಯವೇನೂ ಬೇಕಾಗಲಿಲ್ಲ. ಮಹಾನಗರದ ಮರಿಮೊಮ್ಮಗನಂತಿತ್ತು ಭರತಪುರ. ಅಂಥ ಪುಟ್ಟ ಪಟ್ಟಣದ ಜನರನ್ನಷ್ಟೇ ನಗಿಸಿ, ಇದ್ದ ಸಾಲವನ್ನು ಏಳೆಂಟು ತಿಂಗಳುಗಳಲ್ಲಿಯೇ ತೀರಿಸಿ, ಸ್ಮೈಲು ಬೀರಿದ್ದ ಇಸ್ಮಾಯಿಲ.
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ “ಇಸ್ಮಾಯಿಲನ ಸ್ಮೈಲಿಂಗು ಮಹಲು”

Read More

ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

“ಪ್ರತೀದಿನ ಸಂಜೆ
ರಸ್ತೆ ಪಕ್ಕದ
ಗಾಂಧೀ ಪ್ರತಿಮೆಯ
ಮುಂದೆ ನಿಂತು
ನಿನ್ನ ಕನ್ನಡಕದ ಗಾಜು
ಮಬ್ಬಾಗಿದೆಯೋ ತಾತ
ಚಣವೊತ್ತು ಕಳೆದರೆ
ಮನೆ ಸೇರುವ ಗ್ಯಾರಂಟಿಯಿಲ್ಲ
ಹೋಗಿ
ಬರುತ್ತೇನೆ
ಎಂದು ವಿಷಾದಿಸಿ
ಹೊರಟುಬರುತ್ತಾಳೆ”-ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

Read More

ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

“ಕೆಸರಿನಲ್ಲಿ ಬಿದ್ದು ಉರುಳಾಡಿದ
ಹಂದಿಗಳು ಬಂದು ಮೈಯ್ಯುಜ್ಜುತ್ತವೆ
ಕ್ಷಣಕ್ಕೊಮ್ಮೆ ಊಳಿಡುವ ಗುಳ್ಳೆನರಿಗಳು
ಬಂದು ಯಾರ್ಯಾರದ್ದೋ ಕಿವಿ ಕಚ್ಚುತ್ತವೆ
ನಡುನಡುವೆ ಆನೆಯ ಗತ್ತು
ಸಿಂಹದ ಗರ್ಜನೆ
ಚಿರತೆಯ ಓಟ
ಮತ್ತು
ಜಿಂಕೆ, ಮೊಲಗಳ ಸಾವು” -ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

Read More

ಡಾ. ವಿಶ್ವನಾಥ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ

ಲೈಟ್ಸ್…ಕ್ಯಾಮರಾ…ಆ್ಯಕ್ಷನ್ ಎಂದು ನಿರ್ದೇಶಕರು ಹೇಳಿದಾಗ ನಿರ್ಮಲಾಳ ಎದೆ ಧಸಕ್ಕೆಂದಿತು. ಮೆಲ್ಲಮೆಲ್ಲನೆ ಹೆಜ್ಜೆಯಿಡುತ್ತಾ ಬಂದ ಕೃಷ್ಣ ಕೈಯ್ಯನ್ನು ಚಾಚಿ ಬೆಣ್ಣೆ ಗಡಿಗೆ ತೆಗೆದುಕೊಂಡವನು ಪುಟುಪುಟು ಓಡಿದ. ಹೆಜ್ಜೆಯಿಡುತ್ತಾ ಬಂದದ್ದು… ಕೈಚಾಚಿದ್ದು… ಓಡಿದ್ದು… ಇದು ನಿರ್ಮಲಾಳ ಮನಸ್ಸಿನಲ್ಲಿ ಗಿರಕಿ ಹೊಡೆಯತೊಡಗಿತ್ತು. ಅವಳು ಈಗ ಬಾಗಿಲ ಮರೆಯಿಂದ ಬೆಣ್ಣೆ ಗಡಿಗೆಯಿದ್ದ ಕಂಬದಾಚೆಗೆ ಹೋಗಬೇಕಿತ್ತು. ಆದರೆ ಅವಳು ಚಲನೆಯಿಲ್ಲದೆ ನಿಂತಿದ್ದಳು.
ಡಾ. ವಿಶ್ವನಾಥ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ “ಲೈಟ್ಸ್… ಕ್ಯಾಮರಾ… ಆ್ಯಕ್ಷನ್” ನಿಮ್ಮ ಓದಿಗೆ

Read More

ಬಾವೋಬಾಬ್ ಗುಲಾಬ್ ಸೆನೆಗಲ್: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ಇಪ್ಪತ್ತನೇ ಶತಮಾನದ ಕೊನೆಯಲ್ಲಿ ಬರ ಬಂದದ್ದರಿಂದಾಗಿ ಕೃಷಿ ಉತ್ಪಾದನೆ ಕುಂಠಿತಗೊಂಡಿತ್ತು. ಮಾಲಿ ಪ್ರದೇಶದ ಮನಾಂತಲಿ ಅಣೆಕಟ್ಟಿನ ನೀರನ್ನು ಬಳಸಿಕೊಂಡ ಕಾರಣ ಈ ಸಮಸ್ಯೆ ಸ್ವಲ್ಪಮಟ್ಟಿಗೆ ನಿವಾರಣೆಯಾಯಿತು. ಸೆನೆಗಲ್‌ನ ಹವಾಮಾನ ಜಾನುವಾರುಗಳ ಸಾಕಣೆಗೆ ಪೂರಕವಾಗಿದೆ. ಸವನ್ನಾ ವಿಧದ ಸಸ್ಯವರ್ಗ ಇರುವುದರಿಂದಾಗಿ ಜಾನುವಾರುಗಳ ಆಹಾರಕ್ಕೆ ಯಾವುದೇ ತೊಂದರೆಯಿಲ್ಲ. ದನ, ಮೇಕೆ, ಕುರಿ, ಕುದುರೆ, ಒಂಟೆ, ಕತ್ತೆ, ಹಂದಿ ಮೊದಲಾದ ಪ್ರಾಣಿಗಳನ್ನು ಸಾಕುತ್ತಾರೆ ಸೆನೆಗಲ್ ಜನರು.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಸೆನೆಗಲ್ ದೇಶದ ಕುರಿತ ಬರಹ ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ