Advertisement

Category: ದಿನದ ಪುಸ್ತಕ

ಎರೆನೆತ್ತಿ ಎಂಬ ಬಾಲ್ಯಕಾಲದ ನಿಗೂಢಗಳು….: ಎಸ್.ಗಂಗಾಧರಯ್ಯ

ಹಿಂಗೆ ಪ್ರಾಣಿಗಳ ಕಾಟದ ಜೊತೆಗೆ ಎರೆನೆತ್ತಿಯ ಕಾಡಿನೊಳಕ್ಕೆ ಆಗಾಗ ದೂರದ ಊರುಗಳಿಂದ ದರೋಡೆಕೋರರು ಬಂದು ಸೇರಿಕೊಂಡುಬಿಡುತ್ತಿದ್ದರಂತೆ. ಆಗ ಅಪ್ಪಿತಪ್ಪಿಯೂ ಸುತ್ತಲ ಹಳ್ಳಿಗಳ ಜನರು ಅತ್ತ ಸುಳಿಯುತ್ತಿರಲಿಲ್ಲವಂತೆ. ಪೊಲೀಸರಿಗೆ ದೂರು ಕೊಟ್ಟರೂ ಅತ್ತ ಹೋಗಲು ಅವರೂ ಹಿಂಜರಿಯುತ್ತಿದ್ದರಂತೆ. ಸುತ್ತಮುತ್ತಲ ಹಳ್ಳಿಗಳಲ್ಲಿ ಸಾಕಷ್ಟು ಕಳ್ಳತನ ಮಾಡಿದ ಮೇಲೆ ಆ ದರೋಡೆಕೋರರು ಅವರಾಗಿಯೇ ಜಾಗ ಖಾಲಿ ಮಾಡುತ್ತಿದ್ದರಂತೆ. ಎರೆನೆತ್ತಿಯ ಬಗ್ಗೆ ಇಂಥ ಪುಕಾರುಗಳನ್ನು ನನ್ನ ಅಜ್ಜನಷ್ಟೇ ಅಲ್ಲ ಊರಿನ ಹಲವು ಹಿರಿಯ ತಲೆಗಳು ಹೇಳುತ್ತಿದ್ದುದರಿಂದ ಅದು ನನ್ನಂಥವರೊಳಗೆ ಒಂದು ನಿಗೂಢ ಲೋಕವಾಗಿ ಉಳಿದುಬಿಟ್ಟಿತ್ತು.
ಕಥೆಗಾರ ಎಸ್.‌ ಗಂಗಾಧರಯ್ಯ ಅವರ ಈತನಕದ ಕತೆಗಳ ಸಂಕಲನ “ಎರೆನೆತ್ತಿ”ಗೆ ಅವರೇ ಬರೆದ ಮಾತುಗಳು ಇಲ್ಲಿವೆ

Read More

ಆರೋಗ್ಯಕ್ಕಾಗಿ “ಆರೋಗ್ಯ ದೀವಿಗೆ”…: ಕೆ.ಆರ್.ಉಮಾದೇವಿ ಉರಾಳ

. ಸಾಹಿತ್ಯಾಸಕ್ತೆ ವೈದ್ಯೆ ವಿನಯಾರಿಗೆ ಇರುವ ಭಾಷೆಯ ಮೇಲಿನ‌ ಹಿಡಿತದಿಂದಾಗಿ ವೈದ್ಯ ಸಾಹಿತ್ಯದ ಈ ಕೃತಿ ಸುಲಲಿತವಾದ ಭಾಷಾ ಪ್ರಯೋಗದಿಂದ ಆಹ್ಲಾದಕರವಾದ ಓದನ್ನು ಸಾಧ್ಯವಾಗಿಸಿದೆ. ಪ್ರತಿಯೊಂದು ಲೇಖನದಲ್ಲೂ ಆರೋಗ್ಯಕರ ಜೀವನ ರೂಪಿಸಿಕೊಳ್ಳಲು ವ್ಯಕ್ತಿ ಹೊಂದಿರಬೇಕಾದ ಮೂಲಭೂತವಾದ ವೈಜ್ಞಾನಿಕ ಅರಿವನ್ನು ಮೂಡಿಸಲು ಲೇಖಕಿ ಪ್ರಾಂಜಲ ಮನದಿಂದ ಯತ್ನಿಸಿದ್ದಾರೆ. ಇದಕ್ಕಾಗಿ ಅವರು ತಮ್ಮ ವೈದ್ಯಕೀಯ ವೃತ್ತಿಯಲ್ಲಿ ಎದುರಾಗುವ ಸಹಜ ಸನ್ನಿವೇಶಗಳನ್ನು ಬಳಸಿಕೊಂಡು ಸೋದಾಹರಣವಾಗಿ ವೈಜ್ಞಾನಿಕ ವಿಷಯಗಳನ್ನು ಆಪ್ತವಾಗಿ ಲೇಖನಗಳಲ್ಲಿ ಅಭಿವ್ಯಕ್ತಿಸಿದ್ದಾರೆ.
ಡಾ. ವಿನಯ ಶ್ರೀನಿವಾಸ್‌ ವೈದ್ಯಕೀಯ ಬರಹಗಳ ಕೃತಿ “ಆರೋಗ್ಯ ದೀವಿಗೆ” ಕುರಿತು ಕೆ.ಆರ್.ಉಮಾದೇವಿ ಉರಾಳ ಬರಹ

Read More

ಕಲ್ಯಾಣಕ್ರಾಂತಿ: ಡಾ. ಲತಾ ಗುತ್ತಿ ಕಾದಂಬರಿಯ ಪುಟಗಳು

ಬೆಳಗಿನ ಜಾವ ಕಣ್ಣುಬಿಟ್ಟಾಗ ಎಲ್ಲೆಲ್ಲೂ ಜಾತ್ರೆಯದೇ ಆದ ಒಂದು ಬೆಡಗಿನ ಸೊಬಗು. ತಣ್ಣನೆಯ ಗಾಳಿ-ಪಕ್ಷಿಗಳ ಕಲರವ. ಸೂರ್ಯೋದಯ. ದೇವಸ್ಥಾನದ ಆವರಣದಿಂದ ಕೇಳಿಬರುವ ಶರಣರ ವಚನಗಳ ಹಾಡುಗಳು. ಸುತ್ತೆಲ್ಲ ಹಸಿರು ಗಿಡಮರಗಳಿಂದ ತುಂಬಿದ ತಂಪಾದ ಸ್ಥಳದಲ್ಲಿ ಚೆನ್ನಬಸವಣ್ಣನ ದೇವಸ್ಥಾನ ದೂರ ದಿಂದಲೇ ಕಂಗೊಳಿಸುತ್ತದೆ. ಎತ್ತರದ ಗೋಪುರದಲ್ಲಿ ಶಿವಶರಣರ ಶಿಲ್ಪ ಕೃತಿಗಳು. ಅವರವರ ವೃತ್ತಿಗೆ ತಕ್ಕಂತೆ ಕೆತ್ತನೆಗಳಿವೆ. ೧೨ನೆಯ ಶತಮಾನದ ಶರಣರೆಲ್ಲ ಕಣ್ಣಿಗೆ ಕಟ್ಟುವಂತೆ ಕಾಣುತ್ತಾರೆ. ದೇವಸ್ಥಾನ ತಳಿರು ತೋರಣಗಳಿಂದ ಶೋಭಿತಗೊಂಡಿದೆ.
ಡಾ. ಲತಾ ಗುತ್ತಿ ಹೊಸ ಕಾದಂಬರಿ “ಚದುರಂಗ”ದ ಕೆಲವು ಪುಟಗಳು ನಿಮ್ಮ ಓದಿಗೆ

Read More

ವಿಫಲಪ್ರೇಮಿಯ ತಪ್ಪೊಪ್ಪಿಗೆಗಳು: ರಹಮತ್ ತರೀಕೆರೆ

ವಿದ್ಯಾರ್ಥಿನಿಯರಲ್ಲಿ ಒಬ್ಬಾಕೆ ಕವಿತೆ ಬರೆಯುತ್ತಿದ್ದಳು. ಸರಳವಾದ ಪದದ ಅರ್ಥ-ಅದನ್ನು ತರಗತಿಯಲ್ಲೂ ಕೇಳಬಹುದಿತ್ತು- ಕೇಳಿಕೊಂಡು ಸ್ಟಾಫ್‌ರೂಮಿಗೆ ಬರುತ್ತಿದ್ದಳು. ಸಹೋದ್ಯೋಗಿಗಳು `ನೀನೇ ಹುಡುಗಿ ತರಹ ನಾಚ್ಕೊತೀ ಯಲ್ಲೋ’ ಎಂದು ಛೇಡಿಸುತ್ತಿದ್ದರು. ಬದುಕಿನ ಬಗ್ಗೆ ಭವಿಷ್ಯದ ಬಗ್ಗೆ ಚಿಂತನೆ ಹೊಣೆಗಾರಿಕೆ ಇಲ್ಲದೆ ಹುಟ್ಟಿದ ಎಳಸು ಆಕರ್ಷಣೆಗಳವು. ಆದರೂ ಒಬ್ಬಾಕೆಯ ದೊಡ್ಡ ಕಣ್ಣುಗಳ ಮುಖ ಚಿತ್ತದಲ್ಲಿ ಉಳಿದುಬಿಟ್ಟಿದೆ. ಚೆಲ್ಲು ವರ್ತನೆಯ ಆಕೆ, ಕನ್ನಡದಲ್ಲಿ ಭಯಂಕರ ಕಾಗುಣಿತ ತಪ್ಪು ಮಾಡುತ್ತಿದ್ದಳು. ಚೆಲುವನ್ನು ಕೊಟ್ಟು ಬುದ್ಧಿಯನ್ನು ಕೊಡದ ವಿಧಿಯನ್ನು ಬೈದುಕೊಂಡು, ಭಾಷಾ ದೋಷಗಳನ್ನು ಉದಾರವಾಗಿ ತಿದ್ದುತ್ತಿದ್ದೆ.
ಡಾ. ರಹಮತ್‌ ತರೀಕೆರೆಯವರ ಆತ್ಮಕಥನ “ಕುಲುಮೆ”ಯ ಒಂದು ಅಧ್ಯಾಯ ನಿಮ್ಮ ಓದಿಗೆ

Read More

ಗಾಯಗೊಂಡ ಸಾಲುಗಳು… : ದೀಪಾ ಗೋನಾಳ ಬರಹ

ಕವಿಯಾದವನಿಗೆ ತನ್ನ ಪದಗಳ ಗೊಡವೆ ಬೇಡ, ಅದು ಯಾರದ್ದೊ ನೋವು, ಆರ್ತನಾದ ಮಾತ್ರ ನನ್ನದು ಎನ್ನುವ ದೈನ್ಯತೆ ಎಂದಿಗೂ ಬೇಕು. ಅದು ನನ್ನ ಮಿತ್ರನ ಕವಿತೆಗಳಲಿ ತುಂಬಿ ಹೋಗಿದೆ. ಹೀಗಾಗಿಯೇ ಈ ಸಂಕಲನ ‘ಗಾಯಗೊಂಡ ಸಾಲುಗಳು‌’ ಎಂಬ ಹಣೆಪಟ್ಟಿ ಹೊತ್ತು ಹೊರಬಂದಿವೆ. ಗಾಯಗೊಂಡ ಪದಗಳನೇ ಹೆಣೆದು ಬ್ಯಾಂಡೇಜು ಕಟ್ಟಿದ ಪದಗಳಿವು. ಯಾರೂ ಮೂಸದ ಸರ್ಕಾರಿ ಆಸ್ಪತ್ರೆಯ ಕಟ್ಟೆಯ ಮೇಲೆ ಕೂತ ಅನಾಥ ವೃದ್ಧನಂತೆ ಇಲ್ಲಿನ ಕವಿತೆಗಳು ಕಾಣಿಸತೊಡಗುತ್ತವೆ.
ಸದಾಶಿವ ಸೊರಟೂರು ಕವನ ಸಂಕಲನ “ಗಾಯಗೊಂಡ ಸಾಲುಗಳು” ಕುರಿತು ದೀಪಾ ಗೋನಾಳ ಬರಹ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ