Advertisement

Category: ದಿನದ ಪುಸ್ತಕ

‘ಮಕ್ಕಳೇನು ಸಣ್ಣವರಲ್ಲ’: ಹಾಸ್ಯದ ಒರತೆಯ ಕೃತಿ

ಸಂಕಲನದ ಮೊದಲ ಕಥೆ ‘ಎಗ್ ರೈಸ್ ಮಂತ್ರಿ’ ಹಾಸ್ಯದ ಜೊತೆಗೆ ಎಚ್ಚರವನ್ನೂ ಮೂಡಿಸುತ್ತದೆ. ಶಾಲಾ ಸಂಸತ್ತಿಗೆ ನಡೆಯುವ ಚುನಾವಣೆಯಲ್ಲಿ ವಿದ್ಯಾರ್ಥಿಯೊಬ್ಬ ಮಂತ್ರಿಯಾಗುವ ಆತುರದಲ್ಲಿ ಪೊಳ್ಳು ಭರವಸೆ ನೀಡಿ, ಗೆದ್ದಮೇಲೆ ಎಗ್ ರೈಸ್ ಕೊಡಿಸಲಾಗದೇ ಇರುವ ಸ್ಥಿತಿ, ಅದನ್ನು ಪಡೆಯಲು ಪ್ರಯತ್ನಿಸುವ ಅವನ ಗೆಳೆಯರು ಮಾಡುವ ಸತತ ಪ್ರಯತ್ನ ಹಾಸ್ಯವನ್ನುಕ್ಕಿಸುತ್ತದೆ. ಇದರಲ್ಲಿ ಸತ್ಯಾಂಶವೂ ಇದೆ. ಆದರೆ ನಾಗ ‘ನನಗೆ ಅಷ್ಟು ದುಡ್ಡು ಎಲ್ಲಿಂದ ಬರತೈತಿ, ಆಗಲ್ಲ ಬೇಕಾದ್ರ ಶಾಲಿಗೆ ಒಳ್ಳೆ ಕೆಲ್ಸ ಮಾಡ್ತೇನಿ’ ಅಂತ ಹೇಳಿದ್ದು ಅವನ ಪ್ರಾಮಾಣಿಕತೆಯಾದರೆ, ಆಸೆಗೆ ಬಲಿಯಾಗಬೇಡಿ ಎಂಬುದನ್ನೂ ಕಥೆ ಸೂಚ್ಯವಾಗಿ ಹೇಳುತ್ತದೆ.
ಗುಂಡುರಾವ್ ದೇಸಾಯಿ ಬರೆದ “ಮಕ್ಕಳೇನು ಸಣ್ಣವರಲ್ಲ” ಮಕ್ಕಳ ಕಥಾ ಸಂಕನದ ಕುರಿತು ನಾಗರಾಜ ಎಂ ಹುಡೇದ ಬರಹ

Read More

ಪರಿಸರ ಕಾಳಜಿಯ ಸಾಮಾಜಿಕ ಕಾದಂಬರಿ

ಹಿರೇಕಲ್ಲುಗುಡ್ಡ ಅನೇಕ ವಿಷಯಗಳನ್ನು ಸಾಕ್ಷೀಕರಿಸುವ ಸಾಕ್ಷಾತ್ ಸಾಕ್ಷಿಕಲ್ಲೆಂದರೂ ಆದೀತು. ದೇವಸ್ಥಾನ, ಜೀವವೈವಿಧ್ಯತೆ, ಪಾಳುಬಂಗಲೆ, ಸನ್ಯಾಸಿಗಳ ಆಶ್ರಮತಾಣ, ಮುಕುಂದೂರುಸ್ವಾಮಿಗಳು ಬಂದು ಹೋಗುವ ಸ್ಥಳ, ಹಣದ ವ್ಯಾಮೋಹಕ್ಕೆ ಬಿದ್ದು, ಯಾವುದರ ಬೆಲೆಯನ್ನೂ ಅರಿಯದೆ ಚಿಪ್ಪುಹಂದಿ, ಹಾವುಗಳು ಇನ್ನಿತರ ಪ್ರಾಣಿಗಳನ್ನು ಹಿಡಿದು ಕಳ್ಳಸಾಗಣೆ ಮಾಡುವ ಪೆದ್ದು ಮುಖವಾಡದ ನಿರ್ದಯೀ ಪ್ರವೃತ್ತಿಯ ಕೆಂಚಪ್ಪನ ಕಾರಸ್ಥಾನ…. ಹೀಗೆ ಹಿರೇಕಲ್ಲುಗುಡ್ಡ ಕೆಟ್ಟ ರಾಜಕೀಯ, ಅಧ್ಯಾತ್ಮ, ಐತಿಹ್ಯ, ದುರಾಸೆಗಳ ಪ್ರತೀಕವಾಗಿ ನಿಲ್ಲುತ್ತದೆ.
ಶಶಿಧರ ಹಾಲಾಡಿ ಕಾದಂಬರಿ “ಅಬ್ಬೆ” ಕುರಿತು ಬಿ.ಕೆ. ಮೀನಾಕ್ಷಿ ಬರಹ

Read More

ಅಪ್ಪ ಇಲ್ಲವಾಗಿ…

ದಾರಿ ಸಾಗುತ್ತಾ ನಾವು ಪೊಲೀಸ್ ಸ್ಟೇಷನ್‌ ಬಳಿ ಬಂದಾಗ “ಅದೋ ಅಲ್ಲಿ ಮುಂದೆ ಬಲಕ್ಕೆ ತಿರುಗಿ ಅಲ್ಲೇ ಮನೆ” ಅಂದೆ. ಡ್ರೈವರ್ “ಒಹ್ ಸಾರ್ ಆ ಜ್ಯೂಸು ಮಾಡ್ತಾರಲ್ಲ ಅವರ ಮನೆಹತ್ರನಾ?” ಅಂತ ಕೇಳಿದ್ದನ್ನು ಕಂಡು ನಾನು ಅವಾಕ್ಕಾದೆ! “ಹೌದು ಅವರೇ ಇವರು, ನಮ್ಮಪ್ಪ!” ಅಂದೆ. ಅವನು ಕೊಂಚ ಸುಮ್ಮನಾದಂತೆ ಕಂಡು ನಂತರ “ಹೌದು ಸಾರ್, ಅದೇ ಅನ್ಕೊಂಡೆ ಈಗ ಒಂದು ೨-೩ ವರ್ಷಗಳಿಂದ ಅಂಗಡಿ ತಗಿತಾ ಇಲ್ವಲ್ಲ ಅಂತ, ಪಾಪ ಸಾರ್” ಅಂದ.
ದರ್ಶನ್‌ ಜಯಣ್ಣ ಬರೆದ ಪ್ರಬಂಧಗಳ ಸಂಕಲನ “ಅಪ್ಪನ ರ್ಯಾಲೀಸ್‌ ಸೈಕಲ್‌” ನಿಂದ ಒಂದು ಪ್ರಬಂಧ

Read More

ನೆನಪಾಗಿ ಉಳಿದ ಟ್ರೂತನ್

ರಸ್ತೆಯುದ್ದಕ್ಕೂ ಮೊದಲು ಸಿಗುವ ಸುಧಾಳನ್ನು ಮನೆಗೆ ಸೇರಿಸಿ, ನಂತರ ಚಿತ್ರ, ಎಲ್ಲರನ್ನೂ ಬಿಟ್ಟು ನಾನು ಮತ್ತು ರೇವಿ ಕಾಲೆಳೆದುಕೊಂಡು ಇ. ಎಸ್. ಐ ಹತ್ತಿರವಿದ್ದ ಮನೆ ಸೇರುವುದರಲ್ಲಿ 6 ಕಳೆದಿರುತ್ತಿತ್ತು. ಅಷ್ಟು ಹೊತ್ತಿಗೆ ಅಮ್ಮನನ್ನೇ ತಿನ್ನುವ ಘರ್ಜಿಸುವ ಹೆಣ್ಣು ಹುಲಿಯಾಗಿರುತ್ತಿದ್ದೆ! ನಾನು ರಸ್ತೆಯ ಮೂಲೆಯಲ್ಲಿ ತಿರುಗಿದೊಡನೆ ಎಲ್ಲರೂ ಸಿನೆಮಾದಲ್ಲಿ ರೌಡಿ ಬಂದಾಗ ಗುಸುಗುಸು ಮಾತನಾಡುತ್ತ ಮೌನವಾಗುತ್ತಾರಲ್ಲ… ಹಾಗೆ ಸೈಲೆಂಟು! ಮತ್ತೆ ಜಗತ್ತಿನ ಮಕ್ಕಳೆಲ್ಲ ಶಾಲೆ ಮುಗಿಸಿದ ಎರಡು ಗಂಟೆಗಳ ನಂತರ ಮನೆ ಸೇರುತ್ತಿದ್ದ ಘೋರ ಅನ್ಯಾಯ ಅನುಭವಿಸುತ್ತಿರುವಾಗ ಅವರೆಲ್ಲ ಖುಷಿಯಾಗಿ ನಗುತ್ತ ಇರುವುದು ಏನು ಕಡಿಮೆ ಅಪರಾಧವಾ?!
ಭಾರತಿ ಬಿ.ವಿ.ಯವರ “ಈ ಪ್ರೀತಿ ಒಂಥರಾ” ಕೃತಿಯ ಒಂದು ಬರಹ ನಿಮ್ಮ ಓದಿಗೆ

Read More

ಎಲ್ಲಾ ಊರು ಕಂಡಮೇಲೆ….

ಬರೀ ಅಲ್ಲಿನ ಆಡಂಬರ ಅಥವಾ ವೈಭವೋಪೇತ ನೋಟಗಳನ್ನಷ್ಟೇ ನಮಗೆ ಉಣಬಡಿಸಲು ಇಚ್ಚಿಸದ ಪ್ರಕಾಶ್‌ರವರು ತಮ್ಮ ಪ್ರವಾಸದುದ್ದಕ್ಕೂ ಆದ ಕೆಲವೊಂದು ಆಕಸ್ಮಿಕ ಅನುಭವಗಳನ್ನೂ ನಮಗೆ ತಿಳಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದು ಅವುಗಳಲ್ಲಿ ಪ್ರವಾಸಿಗಳಿಗೆ ವಸತಿ ಮಾಡಲು ಅನುಕೂಲವಾಗಿರುವ ಸ್ಟುಡಿಯೋ ಪ್ಲಾಟ್‌ಗಳ ಕುರಿತಾದ ಪರಿಚಯ ಬರಹ, ಬೆಲ್ಜಿಯಂನ ಬಸ್ಸುಗಳಲ್ಲಿನ ಶೌಚಾಲಯ ವ್ಯವಸ್ಥೆಯ ಬಗ್ಗೆ, ಚಾಕೊಲೇಟ್ ವಿಲೇಜ್‌ನಲ್ಲಿ ಸಿದ್ಧವಾಗುವ ಹೋಮ್ ಮೇಡ್ ಚಾಕೊಲೇಟ್‌ಗಳ ಸ್ವಾದದ ಬಗ್ಗೆ, ರುಚಿಯಾದ ಸಸ್ಯಾಹಾರಿ ತಿನಿಸು ಫಲಾಫೆಲ್ ಬಗ್ಗೆಯೂ ಬರೆಯುತ್ತಾರೆ.
ಪ್ರಕಾಶ್ ಕೆ ನಾಡಿಗ್ ಬರೆದ “ನಾ ಕಂಡ ಯೂರೋಪ್ ಖಂಡ” ಪ್ರವಾಸ ಕಥನದ ಕುರಿತು ಪ.ನಾ. ಹಳ್ಳಿ ಹರೀಶ್‌ ಕುಮಾರ್‌ ಬರಹ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ