Advertisement

Category: ದಿನದ ಪುಸ್ತಕ

ಸೂಕ್ಷ್ಮ ಅಂಶಗಳ ನೇಯ್ಗೆಯಲ್ಲಿ ಸಂಕೀರ್ಣ ಭಾವಬಿಂಬ

ಸಮಾಜ ʻಕುರೂಪಿʼ ಗುರುತಿಸಿದ,  ಹೆಣ್ಣೊಬ್ಬಳ ಮಾನಸಿಕ ತುಮುಲದ ಕಥೆಯೇ ‘ಅವಿವಾಹಿತೆ’. ಬಹಿರಂಗದ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಮುಖ್ಯವೆಂಬ ಭಾವನೆ ಪ್ರತಿಯೊಬ್ಬರಲ್ಲಿ ತುಂಬಿರುತ್ತದೆ. ಆದರೆ ಅಂತರಂಗದ ನಿಷ್ಕಲ್ಮಷ ಹಾಗೂ ನಿರ್ಮಲವಾದ ಭಾವನೆ ಪರಿಗಣನೆಗೆ ಬಾರದ ಸಮಾಜದಲ್ಲಿ ನಿರುಪಮಾಳ ಭವಿಷ್ಯದ ಕನಸು ನುಚ್ಚು ನೂರಾಗುವ ಚಿತ್ರಣವನ್ನು ವ್ಯಾಸರಾಯ ಬಲ್ಲಾಳರು ಸಮರ್ಪಕವಾಗಿ ಚಿತ್ರಿಸಿದ್ದಾರೆ. ಸಮಾಜದಲ್ಲಿ ‘ವಿವಾಹ’ವೆಂಬುದು ತುಂಬಾ ಅಗತ್ಯವೆಂಬ ಚೌಕಟ್ಟು ನಿರ್ಮಾಣವಾಗಿ ಹೋಗಿದೆ. ಬದ್ದ ಕಲ್ಪನೆಗಳ ನೆಲೆಯಲ್ಲಿ ನಿರುಪಮಾ ತನ್ನ ಆಸಕ್ತಿ ಮತ್ತು ಆಶಯಗಳತ್ತ ಗಮನ ಹರಿಸುತ್ತಾಳೆ. ನಿರುಪಮಗೆ ಸಮಾಜದ ಈ ಕ್ರೌರ್ಯ ವ್ಯವಸ್ಥೆಯನ್ನು ಎದುರಿಸಲಾಗುವುದಿಲ್ಲ.  ವ್ಯಾಸರಾಯ ಬಲ್ಲಾಳರ ʻಅವಿವಾಹಿತೆʼ ಕತೆಯ ಕುರಿತು ರಾಜಶೇಖರ ಜಮದಂಡಿ ಅವರು ಬರೆದ ವಿಮರ್ಶೆ ಇಲ್ಲಿದೆ. 

Read More

ಪಾಗಾರದಲ್ಲೊಂದು ಸೃಜನಾತ್ಮಕ ಕಲಾಕೃತಿ

ಆಯಾ ಕಾಲಕ್ಕನುಗುಣವಾಗಿ ಲೇಖಕಿ ಸೂಕ್ಷ್ಮ ಕುಸುರಿಯ ನೇಯ್ಗೆಯಿಂದ ಕಲಾತ್ಮಕವಾಗಿ ನಿರ್ಮಿಸಿರುವ ಪರಿ ಓದುಗರನ್ನು ಕೈಯ್ಯಲ್ಲಿ ಹಿಡಿದ ಪುಸ್ತಕ ಕೆಳಗಿಡದಂತೆ ಸೆಳೆಯುತ್ತದೆ. ಕಾದಂಬರಿಯ ಘಟನೆಗಳ ಕಾಲಮಾನ, ಅದಕ್ಕನುಗುಣವಾಗಿ ಒಂದೊಂದೂ ಪಾತ್ರಗಳಲ್ಲಿ ಲೇಖಕಿ ಪರಕಾಯ ಪ್ರವೇಶ ಮಾಡಿದಂತೆ ಕಡೆದಿಟ್ಟ ಪಾತ್ರ ಚಿತ್ರಣವು ಓದುಗರ ಮನೋ ಭೂಮಿಕೆಯಲ್ಲೂ ಜೀವಂತವಾಗಿ ನೆಲೆಸಿ ಭಾವನೆಗಳೊಂದಿಗೆ ಸ್ಪಂದಿಸುತ್ತವೆ. ಮಳೆಗಾಲದಲ್ಲಿ ಪಾಚಿ ಕಟ್ಟಿಕೊಳ್ಳುವ ಮನೆಯ ಸುತ್ತಲಿನ ಕಲ್ಲಿನ ಪಾಗರವನ್ನು ಲೇಖಕಿ ಒಂದು ರೂಪಕದಂತೆ ಬಳಸಿಕೊಂಡಿದ್ದು ಕಾದಂಬರಿಯಲ್ಲಿ ಪಾಗಾರದ ಪ್ರಸ್ತಾಪ, ಅದರ ಪಾಚಿ ಕೂಡ ಅಷ್ಟೇ ಕಲಾತ್ಮಕವಾಗಿ ಮೂಡಿ ಬಂದಿದೆ.
ಮಿತ್ರಾ ವೆಂಕಟ್ರಾಜ ಅವರ ʻಪಾಚಿಗಟ್ಟಿದ ಪಾಗಾರʼ ಕಾದಂಬರಿಯ ಕುರಿತು, ಲೇಖಕಿ ಕೆ.ಆರ್.ಉಮಾದೇವಿ ಉರಾಳ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ

Read More

ನಾನಿನ್ನು ಹೋಗಿಬರಲೇ.. ‌

ಸುಚಿತಾ ದಿಙ್ಮೂಢಳಾದಳು. ತನಗೆ ಹೀಗೆ ವರ್ತಿಸುವುದು ಸಾಧ್ಯವಿತ್ತೇ? ತನ್ನೊಳಗೆ ಹೊತ್ತಿ ಉರಿದ ವಿಷಯವನ್ನು ತನ್ನ ಮಗಳು ನಿರಾಕರಿಸುತ್ತಿರುವುದು ತಮಗೆ ಸಹಿಸುವುದು ಸಾಧ್ಯವಿತ್ತೇ? ಅದರ ಬಗೆಗೆ ಇಷ್ಟೊಂದು ನಿರ್ವಿಕಾರವಾಗಿರುವದು ಸಾಧ್ಯವಿತ್ತೇ? ಇದು ದಾದಾನ ನಿರ್ವಿಕಾರವೇ ಅಥವಾ ಇದೇ ಜೀವನದ ಬಗೆಗಿರುವ ಸಮತೋಲವೇ? ಅಮ್ಮನ ಸಾವಿನ ಬಳಿಕ ಅವರು ಬಂದು ತಲುಪಿದರು, ಆಗವಳು ಭೇಟಿಯಾದಾಗ ಅವರೇನೂ ವ್ಯಕ್ತ ಮಾಡಿರಲಿಲ್ಲ. ಅವಳು ಮಲಗಿದ್ದಾಗ ಮಾತ್ರ ಹೊದಿಕೆಯನ್ನು ಸರಿಪಡಿಸಿದರು. ಹಣೆಯ ಮೇಲಿನ ತಲೆಗೂದಲನ್ನು ಸರಿಪಡಿಸಿ, ಎಲ್ಲರ ಎದುರಿಗೆ ಕೂದಲಲ್ಲಿ ಬೆರಳಾಡಿಸಿದರು…
ಚಂದ್ರಕಾಂತ ಪೋಕಳೆ ಅನುವಾದಿಸಿದ ಆಶಾ ಬಗೆಯವರ ಮರಾಠಿ ಕಾದಂಬರಿ “ಸೇತು” ಇಂದ ಕೆಲವು ಪುಟಗಳು ನಿಮ್ಮ ಓದಿಗೆ

Read More

ಗಡಂಗು ಹೋಗಿ ಶರಾಬು ಬಂತೂ….

ತಮ್ಮ ಹೊಸ ಗಡಂಗನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಯಾದವ ಶೆಟ್ಟರ ಎರಡು ಪ್ರಯತ್ನಗಳು ಇತಿಹಾಸದಲ್ಲಿ ದಾಖಲಾಗತಕ್ಕವೇ ಆಗಿವೆ. ಅವುಗಳಲ್ಲಿ ಮೊದಲನೆಯದು, ಒಂದು ನಿಗದಿತ ದಿನ ತಮ್ಮ ಗಡಂಗಿಗೆ ಯಾರೇ ಬಂದರೂ ಶರಾಬು ಕುಡಿಯುವವರಿಗೆ ಅವರು ಕುಡಿಯುವಷ್ಟು ಶರಾಬನ್ನು ಉಚಿತವಾಗಿ ಕೊಡಲಾಗುವುದೆಂದು ಯಾದವ ಶೆಟ್ಟಿಯವರು ಘೋಷಿಸಿದ್ದು. ಅದೊಂದು ಸ್ಮರಣೀಯ ಮದ್ಯಪಾನೋತ್ಸವವಾಗಿತ್ತು. ಶರಾಬು ಸಮಾರಾಧನೆಯ ದಿನ ಬೆಳಗಿನಿಂದಲೇ ಶರಾಬು ಅಂಗಡಿಗೆ ನುಗ್ಗಲಾರಂಭಿಸಿದ ಊರಿನ ಶರಾಬು ಪ್ರಿಯರು ಬಹಳ ಬೇಗನೇ ‘ಟೈಟ್’ ಆದರು (ಮತ್ತೇರಿಸಿಕೊಂಡರು). ಆಮೇಲೆ ಪರಸ್ಪರ ಬೈದಾಡುತ್ತಾ, ದೂಡಿಕೊಳ್ಳುತ್ತಾ, ಬಡಿದಾಡುತ್ತಾ ಮನಸ್ಸಿನಲ್ಲಿದ್ದ ಕಲ್ಮಶಗಳನ್ನೆಲ್ಲ ಹೊರಗೆ ಹಾಕುತ್ತಾ ಮೆರೆದಾಡಿದರು.
ಬಿ. ಜನಾರ್ದನ ಭಟ್ ಹೊಸ ಕಾದಂಬರಿ “ಗಮ್ಯ”ದಿಂದ ಕೆಲವು ಪುಟಗಳು ನಿಮ್ಮ ಓದಿಗೆ

Read More

ಮೀನು ಕುಡಿದ ಕಡಲಿನ ವಿಷಯ

ಲೋಕವನ್ನು ಕವಿತೆಯ ಮೂಲಕ ಅಸಾಮಾನ್ಯವಾಗಿ ಮರು ರೂಪಿಸುವ ಸೂರ್ಯಕೀರ್ತಿಯವರು, ಅದೇ ಹೊತ್ತಲ್ಲಿ ಸಾಂಪ್ರದಾಯಕ ಸಂಕೇತಗಳನ್ನು ನಿರ್ದಯವಾಗಿ ನಾಶಗೊಳಿಸುತ್ತಾರೆ. ಅವರು ಕಾಣುವ ಹಸಿವಿನ ಅನ್ನದ ಮುಂದೆ ಶಿವನ ಧ್ಯಾನ, ಮುದ್ರಿಕೆ, ನಾಥ ಪಟ್ಟಗಳೂ ಶೂನ್ಯವಾಗುತ್ತವೆ. ದೈವ ಕಲ್ಪನೆಯೇ ವ್ಯರ್ಥವಾಗುತ್ತದೆ. ಗಾಂಧಿಯ ಕನ್ನಡಕವು ಕೂಡಾ ಪಾಚಿಗಟ್ಟಿದ ಕಣ್ಣುಗಳಲ್ಲಿ ಮರೆಯಾಗುತ್ತದೆ. ಬಾಗಿಲ ಸಂದುಗೊಂದುಗಳಲ್ಲಿ ಚಂದ್ರಮತಿಯರು ನಡುಗುತ್ತಾರೆ, ಜನ್ನನ ಸುನಂದೆ, ಅಮೃತಮತಿಯರು ಪಿಸುಗುಡುತ್ತಾ ನರಳುತ್ತಾರೆ.
ಸೂರ್ಯಕೀರ್ತಿ ಬರೆದ “ಮೀನು ಕುಡಿದ ಕಡಲು” ಕವನ ಸಂಕಲನಕ್ಕೆ ಪ್ರೊ. ಪುರುಷೋತ್ತಮ ಬಿಳಿಮಲೆ ಬರೆದ ಮಾತುಗಳು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ