Advertisement

Category: ದಿನದ ಪುಸ್ತಕ

ಜೀವಜಾಲದ ಪ್ರೋಗ್ರಾಮಿಂಗ್‌ನ ವಿಸ್ಮಯ: ಸತೀಶ್‌ ತಿಪಟೂರು ಬರಹ

ವ್ಯಕ್ತಿ ಪ್ರಕೃತಿಯು ತನ್ನ ಪರಿಸರದ ಪ್ರಭಾವದ ವಿರುದ್ಧ ಪ್ರತಿಭಟಿಸಿ, ಸೆಣೆಸಿ ತನ್ನದೇ ನಡೆಗಳ ದಾರಿಯಲ್ಲಿ ಚಲಿಸಲು ಯಾವುದೋ ಒಂದು ಆಂತರಿಕ ಸೆಳೆತವಿರಬೇಕು. ಈ ಸೆಳೆತ ಇಂದು ನೆನ್ನೆಯದಲ್ಲ; ಇನ್ನೂ ಹಿಂದಿನದು, ಬಹುದೂರ ಕಾಲ ಹಿಂದಿನದು. ಎಂದೋ ಯಾವ ಕಾಲದಲ್ಲೋ ಯರ‍್ಯಾರ ಕಾಲ-ದೇಶ-ಪ್ರಭಾವ-ಪ್ರವಾಹಗಳ ಹರಿವಿನಲ್ಲೋ ಮೊಳೆತಿದ್ದಿರಬೇಕು. ಹೀಗೆ ಕಾಲಾಂತರ ಕಾದು ಕಾದು ತನ್ನನ್ನು ತಾನು ಅರಿವಿನಲ್ಲಿ ಕಂಡುಕೊಂಡುದುದು. ಇದು ಮೊಳೆತು ಬೆಳೆದು ವಿಕಾಸವಾಗಬಹುದಾದ ಬೀಜರೂಪ ಮಾತ್ರ. ಇದು ಬೆಳೆದು ಬೃಹತ್ ವೃಕ್ಷವಾಗಲು ಏನೆಲ್ಲಾ ಒದಗಿ ಬರಬೇಕೋ?
ಸತೀಶ್‌ ತಿಪಟೂರು ಅವರ “ಮಣ್ಣಿನ ಬಂಡಿಯಲ್ಲಿ ಫುಕುವೋಕಾ” ಕೃತಿ ಸರಣಿಯ ಕೊನೆಯ ಕಂತು ನಿಮ್ಮ ಓದಿಗೆ

Read More

ಜಾರಿದ ಬದುಕನ್ನು ಸ್ವವಿಮರ್ಶಿಸಿಕೊಂಡ ಆತ್ಮಕಥೆ: ನಾರಾಯಣ ಯಾಜಿ ಬರಹ

ನಂದು ದಾದಾ ಅವಳಲ್ಲಿ ಸ್ವಾತಂತ್ರ್ಯ ಹೋರಾಟದ ಕಿಡಿಯನ್ನು ಹಚ್ಚಿದರೆ ರಮೇಶಣ್ಣ ಅವಳಿಗೆ ಬಲೆಹಾಕಿ ಅವಳನ್ನು ದುರುಪಯೋಗಪಡಿಸಿ ಮನೆಯಿಂದ ಓಡಿಸಿಕೊಂಡುಹೋಗಿ ನಡುನೀರಿನಲ್ಲಿ ಕೈಬಿಟ್ಟು ಪರಾರಿಯಾಗುತ್ತಾನೆ. ನಂದಣ್ಣನ ಆದರ್ಶಗಳು ಈಕೆಯೊಳಗೆ ಪ್ರಭಾವವನ್ನು ಬೀರಿತ್ತು ಎನ್ನುವುದಕ್ಕೆ ಆಕೆ ತಾನು ವೇಶ್ಯೆಯಾಗಿ ಇರುವಾಗಲೂ ಸಂದರ್ಭ ಬಂದಾಗ ಸ್ವಾತಂತ್ರ್ಯ ಹೋರಾಟ, ಸಮಾಜ ಸೇವೆ, ದೀನದಲಿತರಿಗೆ ನೆರವು ಹೀಗೆ ಹಲವಾರು ಸಂಗತಿಗಳನ್ನು ಮಾಡುತ್ತಲೇ ಇರುತ್ತಾಳೆ. ಆದರೆ ಸ್ವಾತಂತ್ರ್ಯ ಹೊರಾಟಗಾರರಲ್ಲಿ ಎಲ್ಲವರೂ ನಂದಣ್ಣನಂತಹ ವ್ಯಕ್ತಿಗಳಲ್ಲ. ಹೆಚ್ಚಿನವರು ರಮೇಶನಂತಹ ಗೋಮುಖರೇ.
ಬಂಗಾಳಿಯ ಮಾನದಾ ದೇವಿ ಆತ್ಮಕಥನ “ವಿದ್ಯಾವಂತ ವೇಶ್ಯೆಯ ಆತ್ಮಕಥೆ”ಯನ್ನು ನಾಗ ಎಚ್ ಹುಬ್ಳಿ ಕನ್ನಡಕ್ಕೆ ತಂದಿದ್ದು ಈ ಕೃತಿಯ ಕುರಿತು ನಾರಾಯಣ ಯಾಜಿ ಬರಹ ನಿಮ್ಮ ಓದಿಗೆ

Read More

“ದಿಟದ ದೀವಿಗೆ”: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌ ಆತ್ಮಕಥನದ ಪುಟಗಳು

ನನ್ನ ಅಮ್ಮನ ಪ್ರಾಯದ ಊರಿನ ಹುಡುಗಿಯರಿಗಿಂತ ಹೆಚ್ಚು ಚಟುವಟಿಕೆ, ಸೂಕ್ಷ್ಮಬುದ್ಧಿ, ಇನ್ನೊಬ್ಬರ ಜತೆ ನಡೆದುಕೊಳ್ಳುವ ರೀತಿ ಅನೇಕರಿಗೆ ವಿಸ್ಮಯವನ್ನು ಉಂಟುಮಾಡುತ್ತಿತ್ತು. ಪ್ರತಿಯೊಂದು ಕೆಲಸದಲ್ಲೂ ಅಚ್ಚುಕಟ್ಟುತನ ಎದ್ದು ಕಾಣುತ್ತಿತ್ತು. ಅಮ್ಮನನ್ನು ನನ್ನ ಅಪ್ಪ ಕೂಡಿಕೆ ಮಾಡಿಕೊಂಡಾಗ ಮೂವತ್ತು ವರ್ಷಗಳ ಅಂತರವಿತ್ತು. ನನ್ನ ಅಪ್ಪ ಆರಡಿ ಎತ್ತರದ ಬೃಹದ್ದೇಹಿ! ಆದರೆ, ಅಮ್ಮ ಐದಡಿ ಎತ್ತರದ ಪೀಚಲು ಹೆಂಗಸು! ದೈಹಿಕವಾಗಿ ಇಬ್ಬರದೂ ಅಜ-ಗಜಾಂತರ. ಆದರೆ, ಆ ಕಾಲಕ್ಕೆ ಈ ಬಗೆಯ ಕೂಡಿಕೆಯೊ ವಿವಾಹವೊ ನಡೆಯುತ್ತಿದ್ದುದು ಸರ್ವೇ ಸಾಮಾನ್ಯವಾಗಿತ್ತು!
ವಿದ್ವಾಂಸರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌ ಅವರ ಆತ್ಮಕಥನ “ದಿಟದ ದೀವಿಗೆ”ಯ ಕೆಲವು ಪುಟಗಳು ನಿಮ್ಮ ಓದಿಗೆ

Read More

ವಸಂತಸೇನೆ ಎಂಬ ನನ್ನ ಮುತ್ತಜ್ಜಿಯ ಕಥೆ: ಸತೀಶ್‌ ತಿಪಟೂರು ಬರಹ

ನಮ್ಮ ಅಜ್ಜಿಯರಿಂದ ಬಳುವಳಿಯಾಗಿ ಬಂದ ನಿವೇಶನದಲ್ಲಿ ಅರವತ್ತು ವರ್ಷಗಳ ಹಿಂದೆ ನಮ್ಮ ತಂದೆಯವರು ಕಟ್ಟಿದ್ದ ಈ ಮನೆಯಲ್ಲಿ ಇವರೆಲ್ಲರ ವೈವಿಧ್ಯಮಯ ಸ್ಮೃತಿ ಕಥನಗಳು ನೆಲೆಗೊಂಡಿವೆ. ಇಷ್ಟಲ್ಲದೇ ಈ ಮನೆಯೇ ಕೇಂದ್ರವಾಗಿ ಇಷ್ಟು ವರ್ಷಗಳಲ್ಲಿ ನಡೆಯುತ್ತಿರುವ ನೃತ್ಯಶಾಲೆ, ಸಂಗೀತ ಶಾಲೆ, ನಾಟಕ ಶಾಲೆಯ ನೂರಾರು ಹುಡುಗ ಹುಡುಗಿಯರು ಈ ಮನೆಯ ಒಡನಾಟದಲ್ಲಿ ಬೆಳೆದಿದ್ದಾರೆ. ಮತ್ತು ಹೋರಾಟ, ಚಳುವಳಿ, ಕ್ರಾಂತಿ ಎನ್ನುವ ಕಾಮ್ರೇಡ್‌ಗಳು, ಕವಿಗಳೂ, ಲೇಖಕರು, ಪತ್ರಕರ್ತರು, ಪ್ರಗತಿಪರ ರಾಜಕೀಯ ನೇತಾರರೂ ಅಟ್ಟದ ಮೇಲಿನ ಸಭೆಗಳಿಂದಾಗಿ ಈ ಮನೆಯ ಭಾಗವಾಗಿದ್ದಾರೆ. ಅಂದಿನ ದಿನಗಳ ಈ ಮನೆಯನ್ನು ಕೆಲವು ಸ್ನೇಹಿತರು ಜಾತ್ಯಾತೀತ ಮಠವೆಂದೂ; ಅಲ್ಲಿ ನಿತ್ಯ ದಾಸೋಹವೆಂದು ನೆನಪಿಸಿಕೊಂಡು ಮಾತನಾಡುತ್ತಿದ್ದುದುಂಟು.
ಸತೀಶ್‌ ತಿಪಟೂರು ಅವರ “ಮಣ್ಣಿನ ಬಂಡಿಯಲ್ಲಿ ಫುಕುವೋಕಾ” ಕೃತಿಯ ಅಧ್ಯಾಯ ನಿಮ್ಮ ಓದಿಗೆ

Read More

ಡಂಕಲ್‌ಪೇಟೆಯ ಒಳ-ಹೊರಗೆ: ಜಿ. ಪಿ.ಬಸವರಾಜು ಮಾತುಗಳು

ವೀರೇಂದ್ರ ವರ್ತಮಾನಕ್ಕೆ ಬೆನ್ನುಹಾಕುವ ಕಥೆಗಾರರಲ್ಲ; ಹಾಗೆಯೇ ಭೂತದ ವೈಭವದಲ್ಲಿ ಮೈಮರೆಯುವವರೂ ಅಲ್ಲ. ಭವಿಷ್ಯದ ಕನಸುಗಳಲ್ಲಿ, ಕಲ್ಪನೆಗಳಲ್ಲಿ ತೇಲುವ ಭಾವಜೀವಿಯೂ ಅಲ್ಲ. ಸುಡು ಸುಡು ವರ್ತಮಾನವೇ ಅವರ ಪ್ರಧಾನ ಅಖಾಡ. ಭೂತ-ಭವಿಷ್ಯತ್ತುಗಳಿಗೆ ಹೋಗಿ ಬಂದರೂ, ಅವರು ಸೆಣಸುವುದು, ಪಟ್ಟಿಗೆ ಪಟ್ಟು ಹಾಕುವುದು ಈ ಡಂಕಲ್‌ಪೇಟೆಯಲ್ಲಿಯೇ. ಕುಂವೀ ಅವರಂಥ ಸೃಜನಶೀಲರಲ್ಲಿ ಬಳ್ಳಾರಿ ಉಸಿರಾಡುವುದು ಒಂದು ಚೆಲುವಾದರೆ, ಇಲ್ಲಿ ಬಳ್ಳಾರಿ ಕೊಸರಾಡುವುದು ಇನ್ನೊಂದು ಸೊಗಸು. ನೆಲದಲ್ಲಿ ಬೇರಿಳಿಸಿದ ಮರವೇ ಆಕಾಶಕ್ಕೆ ರೆಂಬೆಕೊಂಬೆ ಚಾಚುವುದು ಸಾಧ್ಯ. ವೀರೇಂದ್ರರ ಕತೆಗಳಲ್ಲಿ ಈ ಸತ್ಯ ಗೋಚರವಾಗುತ್ತದೆ.
ವೀರೇಂದ್ರ ರಾವಿಹಾಳ್‌ ಕಥಾ ಸಂಕಲನ “ಡಂಕಲ್‌ಪೇಟೆ”ಗೆ ಜಿ.ಪಿ. ಬಸವರಾಜು ಬರೆದ ಮುನ್ನುಡಿ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ