Advertisement

Category: ಸಂಪಿಗೆ ಸ್ಪೆಷಲ್

ಸ್ಮಾರ್ಟ್ ಬೋರ್ಡ್..!: ಮಹಮ್ಮದ್‌ ರಫೀಕ್‌ ಕೊಟ್ಟೂರು ಬರಹ

ಸ್ಮಾರ್ಟ್‌ ಬೋರ್ಡ್‌ ಬರುವುದಕ್ಕಿಂತ ಮುಂಚೆ ತರಗತಿ ಮುಗಿಸಿದಾಗ ರಮೇಶ ಅವರ ಅವತಾರ ಮೆಚ್ಚಿ ವಾಹ್‌ ಶಿಕ್ಷಕರೆಂದರೆ ಹೀಗಿರಬೇಕು ಎನ್ನುವಂತಿದ್ದರು, ಸುಣ್ಣದಿಂದ ಮುಳುಗಿದ ಅವರ ಕೈಗಳು, ಬಣ್ಣ ಬದಲಾಯಿಸಿಕೊಂಡು ಬಿಳಿ ಬಟ್ಟೆಯಂತಿದ್ದ ಅವರ ಪ್ಯಾಂಟ್‌, ಅಂಗಿ ಅಲ್ಲಲ್ಲಿ ಕೈ ತಗುಲಿ ಮುಖಕ್ಕೂ ಹತ್ತಿದ್ದ ಸೀಮೆ ಸುಣ್ಣದ ಬಿಳಿ ಯಾರೇ ನೋಡಿದರೂ ಇವರು ಗಣಿತ ಶಿಕ್ಷಕರೆಂದು ಗುರುತಿಸಬಹುದಾದ ಮಾದರಿ ರೂಪ.
ಮಹಮ್ಮದ್‌ ರಫೀಕ್‌ ಕೊಟ್ಟೂರು ಬರೆದ ಶೈಕ್ಷಣಿಕ ಬರಹ ನಿಮ್ಮ ಓದಿಗೆ

Read More

ಪರ್ವತಗಳು ಬರಹಗಾರರಿಗೆ ಉಪಕಾರಿಯಾಗಿರುತ್ತವೆ..: ಖಂಡಿಗೆ ಮಹಾಲಿಂಗ ಭಟ್ ಬರಹ

‘ಯಾವನು ಬೆಟ್ಟಗಳಿಗೆ ಹೋಗುವನೋ, ಅವನು ತನ್ನ ತಾಯಿಯಲ್ಲಿಗೆ ಹೋಗುವನು’ ಎಂಬುದಾಗಿ ಕಿಪ್ಲಿಂಗ್ ಬರೆದಿರುವನು ಮತ್ತು ಅವನು ಇದರಿಂದ ಹೆಚ್ಚಿನ ಸತ್ಯವನ್ನು ಬರೆದುದು ಅಪರೂಪ. ಯಾಕೆಂದರೆ ಬೆಟ್ಟಗಳಲ್ಲಿ ಜೀವಿಸುವುದು ತನ್ನ ತಾಯಿಯ ಎದೆಯಲ್ಲಿ ಹುದುಗಿಕೊಂಡು ಮಲಗಿದಷ್ಟು ಹಿತಕರವೆನಿಸುತ್ತದೆ. ಪ್ರತಿ ಬಾರಿ ನಾನು ಬೇರೆಡೆಗೆ ಹೋಗಿಪುನಃ ಹಿಂದಿರುಗುವಾಗ ಮನಸ್ಸಿಗೆ ತುಂಬಾ ಹಿತಕರ ಹಾಗೂ ಅಪ್ಯಾಯಕರವೆನಿಸುತ್ತದೆ.
ರಸ್ಕಿನ್‌ ಬಾಂಡ್‌ ಅವರ “ರೇನ್‌ ಇನ್‌ ದ ಮೌಂಟೇನ್ಸ್‌” ಕೃತಿಯ ಒಂದು ಬರಹವನ್ನು ಡಾ. ಖಂಡಿಗೆ ಮಹಾಲಿಂಗ ಭಟ್ ಕನ್ನಡಕ್ಕೆ ಅನುವಾದಿಸಿದ್ದು, ನಿಮ್ಮ ಓದಿಗೆ ಇಲ್ಲಿದೆ

Read More

ಭಾವಯಾಮಿ ಗೌರೀ..: ದೀಪಾ ಫಡ್ಕೆ ಬರಹ

ವೃತ್ತಿ, ಪ್ರವೃತ್ತಿಗಳ ನಡುವೆ ಉಯ್ಯಾಲೆಯಾಡುತ್ತಿರುವ ಆಧುನಿಕ ಕಾಲದ ಗೌರಿಯರಿಗೆ ತಿಂಗಳಿಗೆ ಮೊದಲೇ ಹಬ್ಬದ ತಯಾರಿ ಅಸಾಧ್ಯ. ಅಡುಗೆ ಮನೆಯ ನಲ್ಲಿಯ ನೀರಲ್ಲಿ `ಗಂಗೇಚ ಯಮುನೇಚೈವ..’ ಎನ್ನುತ್ತಾ ಗಂಗೆಯನ್ನು ಆವಾಹಿಸಿ ಕಲಶ ತುಂಬುವ ನಮಗೆ ನಗರದ ಪುಟ್ಟ ಪುಟ್ಟ ಮನೆಗಳಲ್ಲಿ ಹಬ್ಬವೆಂದರೆ ನಿತ್ಯದ ಒಂದು ಟಬ್ ಪಾತ್ರೆಗಳ ಬದಲು ಎರಡು ಟಬ್ ಪಾತ್ರೆಗಳು ಎಂದೂ ಒಮ್ಮೊಮ್ಮೆ ಕಾಣುವುದಿದೆ.
ಜಗದೆಲ್ಲ ಗೌರಿಯರ ಕುರಿತು ದೀಪಾ ಫಡ್ಕೆ ಬರಹ ನಿಮ್ಮ ಓದಿಗೆ

Read More

ಕ್ಯಾಲಿಫೋರ್ನಿಯಾ ಮತ್ತು ಭೂಕಂಪ: ಗಿರಿಧರ್‌ ಗುಂಜಗೋಡು ಬರಹ

ನನ್ನ ಹೆದರಿಕೆ ಏನೆಂದರೆ ನಾನು ಟಾಯ್ಲೆಟ್ಟಿನಲ್ಲಿದ್ದಾಗಲೋ ಇಲ್ಲಾ ಸ್ನಾನ ಮಾಡಬೇಕಾದರೋ ಭೂಕಂಪವಾದರೆ ಏನು ಮಾಡೋದು ಅಂತ. ಆ ಅವಸ್ಥೆಯಲ್ಲಿ ಹೊರಗೆ ಓಡುವುದು ಎಷ್ಟು ಮುಜುಗರದ ಸನ್ನಿವೇಶ ಅಂತ ಯೋಚಿಸಿ. ನಾನು ಗೆಳೆಯನೊಟ್ಟಿಗೆ ಮಾತನಾಡುತ್ತಾ ಇದೇ ವಿಷಯ ಹೇಳಿದೆ.
ಕ್ಯಾಲಿಫೋರ್ನಿಯಾದಲ್ಲಾದ ಭೂಕಂಪದ ಅನುಭವಗಳ ಕುರಿತು ಗಿರಿಧರ್‌ ಗುಂಜಗೋಡು ಬರಹ

Read More

ಮುಯ್ಯಿಗೆ ಮುಯ್ಯಿ …!: ವಸಂತಕುಮಾರ್‌ ಕಲ್ಯಾಣಿ ಪ್ರಬಂಧ

ಇನ್ನೊಬ್ಬ ಸಹೋದ್ಯೋಗಿ ಬ್ರಹ್ಮಚಾರಿ ಸಾಧ್ಯವಾದಷ್ಟು ಕಾರ್ಯಕ್ರಮಗಳಿಗೆ ಕೈ ಕೊಡುತ್ತಿದ್ದ. ನಂತರ ತಡವಾಗಿ ಮದುವೆಯಾದ. ಒಂದು ಮಗುವಾಯಿತು. ಅಷ್ಟೇ ಸಾಕು ಎಂದು ನಿರ್ಧರಿಸಿದ. ಆನಂತರ ಅವನು ಯಾರದಾದರೂ ಮನೆಯಲ್ಲಿ ಇಬ್ಬರು ಮಕ್ಕಳಿದ್ದರೆ ಮೊದಲನೆಯ ಮದುವೆಗೆ ಹೋಗುತ್ತಿದ್ದ. ಉಡುಗೊರೆ ಕೊಡುತ್ತಿದ್ದ. ಎರಡನೆಯದಕ್ಕೆ ತಪ್ಪಿಸಿಕೊಳ್ಳುತ್ತಿದ್ದ.
ವಸಂತಕುಮಾರ್‌ ಕಲ್ಯಾಣಿ ಬರೆದ ಪ್ರಬಂಧ “ಮುಯ್ಯಿಗೆ ಮುಯ್ಯಿ…!”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ