Advertisement

Category: ಸಂಪಿಗೆ ಸ್ಪೆಷಲ್

ಫೋಟೋ ಒಂದರ ಪ್ರತಿಫಲನ : ಜಯಂತ ಕಾಯ್ಕಿಣಿ ಬರಹ

“ವ್ಯಕ್ತಿಗತವಾಗಿ ವಿಭಿನ್ನವಾದ ಹುಡುಕಾಟ, ನೋಟ, ನಿಲುವುಗಳಿದ್ದರೂ, ಒಟ್ಟಾರೆ ಸೇರಿ ಏನೋ ಒಂದು ಒಳ್ಳೆಯದರಲ್ಲಿ ತೊಡಗಿರುವ ಭಾವವೊಂದು ಇಲ್ಲಿ ನಿಚ್ಚಳವಾಗಿದೆ. ಬೇಂದ್ರೆ ಮತ್ತು ಅಡಿಗರ ನಡುವೆ ಕಾಯ್ಕಿಣಿ, ಎಕ್ಕುಂಡಿ, ಶರ್ಮ ಇರುವುದೇ ಒಂದು ರೂಪಕ. ಬಹುಶಃ ಇದು ಆಗ ನಡೆದಿದ್ದ ಕುಮಟಾ ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದ ಇವರೆಲ್ಲ ಗೋಕರ್ಣವನ್ನೂ ನೋಡಿಕೊಂಡು ಹೋಗಲು ಬಂದಾಗ ನಡೆದ ಕೂಟ ಕಲಾಪ.”

Read More

ಮಹಾ ಮೊಸರನ್ನ ಪುರಾಣ: ವಾಸುದೇವ ಕೃಷ್ಣಮೂರ್ತಿ ಬರೆದ ಲೇಖನ

“ಹೇಗಾದ್ರು ಮಾಡಿ ಅಮೇರಿಕಾದಲ್ಲಿ ಮೊಸರನ್ನು ಹೆಪ್ಪಾಕ್ಬೇಕು ಅಂತ ಶಪಥ ಮಾಡಿ, ಯೋಗರ್ಟ್ ಅನ್ನು ಹಾಲಿಗೆ ಸೇರಿಸಿ ರಾತ್ರಿ ಇಟ್ಟ. ಅವನಿಗೆ ರಾತ್ರಿಯೆಲ್ಲಾ ಸಂಭ್ರಮ, ಇನ್ನು ನಾಳೆಯಿಂದ ನನ್ನ ಊರಿನಲ್ಲಿ ಸಿಗುವ ಗಟ್ಟಿ ಮೊಸರಿನ ತರಹ ಇಲ್ಲೂ ಕೂಡ ತಯಾರಿಸಬಹುದೆಂದು. ಬೆಳಿಗ್ಗೆ ಬಲಗಡೆ ಎದ್ದು ಮೊಬೈಲ್ ನೋಡದೆ ಮೊಸರನ್ನು ನೋಡಲು ಓಡಿದ. ಪಾತ್ರೆಯ ಮುಚ್ಚಳ ತೆಗೆದು ಸ್ವಲ್ಪ ಮೊಸರಂತೆ..”

Read More

ಆಸ್ಮ ಎಂಬ ಸಂಗಾತಿ: ಕೆ.ವಿ. ತಿರುಮಲೇಶ್ ಬರೆದ ಲೇಖನ

“ಇದೆಲ್ಲದರಿಂದ ರೋಗ ಪರಿಹಾರ ಆಗುತ್ತದೆ ಎನ್ನಲಾಗದು, ಆಸ್ಮ ಪರಿಹಾರವಾಗುವುದು ಎಂದಿಲ್ಲ, ಸ್ವಲ್ಪ ತಹಬಂದಿಗೆ ಬರುತ್ತದೆ ಅಷ್ಟೆ. ಅಷ್ಟಾದರೆ ಅದೇ ದೊಡ್ಡ ವಿಷಯ. ಆರಂಭದಲ್ಲಿ ನನಗೆ ಏರುಪೇರುಗಳಿದ್ದುವು, ತಿಂಗಳಿಗೊಮ್ಮೆಯಾದರೂ ಏದುಸಿರು ಜೋರಾಗುತ್ತಿತ್ತು. ಆಗಲೆಲ್ಲ ನನ್ನ ಪಕ್ಕೆಗಳು ನೋಯುತ್ತಿದ್ದು ಸಹಿಸಲು ಕಷ್ಟವಾಗುತ್ತಿತ್ತು. ಅಮ್ಮ ನನ್ನ ಬೆನ್ನು ಉಜ್ಜುತ್ತಿದ್ದಳು. ಇಂಥದೊಂದು ಮಗುವಿಗೆ ಜನ್ಮವಿತ್ತೆನಲ್ಲ ಎಂದು ಅವಳಿಗೆ ದುಃಖವಾಗಿರಬೇಕು.”

Read More

ತಿರುಮಲೇಶ್ ಅನುವಾದಿಸಿದ ಫ್ರೆಂಚ್ ಕಾದಂಬರಿಕಾರ ಜಾನ್ ದ ಓರ್ಮೆನ್ಸನ್ ಕೃತಿಯ ಕೆಲವು ಪುಟಗಳು

ಅವನ ಅತ್ಯಂತ ಸಂತೋಷದ ಸಂಗತಿಯೆಂದರೆ ಪುರೋಹಿತರ ಮಾತುಗಳನ್ನು ಆಲಿಸುವುದಾಗಿತ್ತು. ಬೇರೆ ಹುಡುಗರ ಜತೆ ಹೋಗಿ ಆಡುವುದು ಬಿಟ್ಟು, ಅವನೆಷ್ಟೇ ಮೃದುವಾಗಿದ್ದರೂ ಆ ಹುಡುಗರಿಗೆ ಅವನ ಬಗ್ಗೆ ಸಂದೇಹ ಇತ್ತು; ಅವನು ಯಾವುದಾದರೊಂದು ಪವಿತ್ರ ಪ್ರದೇಶದಲ್ಲಿ ನೆಲೆಗೊಂಡು, ಚಲಿಸದೆ ಅಥವಾ ಮಾತಾಡದೆ, ದೇವರುಗಳ ಮೂಲ ಮತ್ತು ವಿಶ್ವದ ಸ್ಥಿರತತ್ವ ಮುಂತಾದ ಸಂಗತಿಗಳ ಕುರಿತಾದ…”

Read More

ಪ್ರೊ. ಷ. ಶೆಟ್ಟರ್ ಜೊತೆ ಡಾ. ಗೀತಾ ವಸಂತ ನಡೆಸಿದ್ದ ಮಾತುಕತೆ

“ವ್ಯಾಕರಣ, ಛಂದಸ್ಸುಗಳನ್ನು ಬಾಲ್ಯದಲ್ಲಿ ಉರು ಹೊಡೆಸುತ್ತಿದ್ದರು. ಆಗ ಅದು ತಲೆಗೆ ಹತ್ತಲೇ ಇಲ್ಲ. ಕಂಠಪಾಠವು ಸಂಸ್ಕೃತದ ಕಲಿಕಾವಿಧಾನ. ಆದರೆ, ವ್ಯಾಕರಣ, ಛಂದಸ್ಸುಗಳು ಭಾಷೆಯ ಸಮಗ್ರ ತಿಳುವಳಿಕೆಗೆ ಅಗತ್ಯ. ಆ ಗ್ರಂಥಗಳನ್ನೂ ರಸಾಸ್ಪಾದಕ್ಕಾಗಿ, ರಸಾಸ್ಪಾದದ ಮೂಲಕ ಓದಲು ಸಾಧ್ಯ. ವ್ಯಾಕರಣ ಗ್ರಂಥಗಳ ಲೇಖಕರೂ ತುಂಟರು. ಸಾಕಷ್ಟು ರಸಿಕರು! ಉದಾಹರಣೆಗಳನ್ನು ಕೊಡುವಾಗ ರಸಾಸ್ವಾದದ ಸ್ಥಳಗಳನ್ನು ನಿರ್ಮಿಸುವಲ್ಲಿ ಅವರು ನಿಪುಣರು. ಇಂಥ ಸೂಕ್ಷ್ಮಗಳನ್ನು ಬೋಧಕರು ಗಮನಿಸಬೇಕು. ಕಾವ್ಯವನ್ನು ಸಹ ರಸಾಸ್ಪಾದದ ಮೂಲಕವೇ ತಲುಪಿಸುವುದು ಜಾಣತನ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ