Advertisement

Category: ಸರಣಿ

ಬದುಕು ಒಂದು; ಭಾವ ನೂರು

ಇಷ್ಟೆಲ್ಲ ರೂಢಿಗತವಾಗಿರುವ ರೀತಿಯಲ್ಲಿ ಚಿತ್ರದ ಚಲನೆ ಇದ್ದರೂ ನಿರ್ದೇಶಕನ ಆಶಯಕ್ಕೆ ತಕ್ಕ ರೀತಿಯಲ್ಲಿ ನಮ್ಮನ್ನು ಆವರಿಸಿ ಒಳಗೊಳ್ಳುವಂತೆ ಸಾಧ್ಯವಾಗುವುದರಲ್ಲಿ ಚಿತ್ರಕಥೆಯಷ್ಟೇ ಪ್ರಮುಖ ಕೊಡುಗೆ, ದೃಶ್ಯಗಳಲ್ಲಿ `ಅಭಿನಯ’ ಎನ್ನಬಹುದಾದ ನೂರಕ್ಕೆ ನೂರರಷ್ಟು ಸಹಜತೆಯನ್ನು ಮೇಳವಿಸಿಕೊಂಡ ನಟರ ಆಂಗಿಕ ವರ್ತನೆ ಮತ್ತು ಭಾವ ಪ್ರಕಟಣೆಗಳದ್ದು. ಇದರಿಂದಾಗಿ ಅಗತ್ಯವಿರುವಲ್ಲಿ ಭಾವತೀವ್ರತೆ ವ್ಯಕ್ತವಾಗುತ್ತದೆಯೇ ಹೊರತು ಭಾವಾವೇಶವಲ್ಲ. ಎ.ಎನ್. ಪ್ರಸನ್ನ ಬರೆಯುವ ʻಲೋಕ ಸಿನಿಮಾ ಸರಣಿʼ

Read More

ಜಾತಿ-ಧರ್ಮಗಳ ನಡುವೆ ಭೇದವಿಲ್ಲದ ಕಾಲದಲ್ಲಿ….

ಅವರು ನನ್ನ ಹೆಸರು ಕೇಳಿದರು. ತಮ್ಮ ಬಗ್ಗೆ ತಿಳಿಸಿದರು. ಅವರು ಬೆಳಗಾವಿ ಕಡೆಯವರು. ಜಮೀನುದಾರರು. ನನ್ನ ಹೆಸರು ಕೇಳಿದರು. ನನ್ನ ‘ಜಾಣತನ’ಕ್ಕೆ ಅವರು ಮೆಚ್ಚಿಕೊಂಡಿದ್ದರು. ತಮಗೆ ಮಕ್ಕಳಿಲ್ಲವೆಂದೂ ನನಗೆ ದತ್ತು ತೆಗೆದುಕೊಳ್ಳುವುದಾಗಿಯೂ ತಿಳಿಸಿದರು. ನನ್ನ ಅಭಿಪ್ರಾಯ ಕೇಳಿದರು. ನಾನು ಒಪ್ಪಿದೆ. (ಅವರಿಗಾಗಲಿ ನನಗಾಗಲಿ ಹಿಂದೂ ಮುಸ್ಲಿಂ ಎಂಬ ಭಾವವೇ ಇರಲಿಲ್ಲ.) ಹಾಗಾದರೆ ನಿಮ್ಮ ಮನೆಯ ವಿಳಾಸ ಹೇಳು ಎಂದಾಗ ಹೇಳಿದೆ. ಅವರು ತಮ್ಮ ಪುಟ್ಟ ಡೈರಿಯಲ್ಲಿ ಬರೆದುಕೊಂಡರು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆಯ ಸರಣಿ

Read More

ಮೌರ್ಯರ ಕಾಲದ ಆಡಳಿತ ಮತ್ತು ಮತ ಸ್ಥಾಪನೆಗಳು

ತನ್ನ ಸುವಿಶಾಲವಾದ ಸಾಮ್ರಾಜ್ಯವನ್ನು ಹರ್ಷನು ದಕ್ಷತೆಯಿಂದಲೂ, ಶ್ರದ್ಧೆಯಿಂದಲೂ ಪರಿಪಾಲಿಸುತ್ತಿದ್ದನು. ಹರ್ಷನು ಸ್ವತಃ ದೇಶದ ಪ್ರತಿಯೊಂದು ವಿಭಾಗವನ್ನು ಸಂದರ್ಶಿಸುತ್ತಿದ್ದನು. ರೈತರು ತಮ್ಮ ಆದಾಯದ ಅಂಶವನ್ನು ಕಂದಾಯ ರೂಪದಲ್ಲಿ ತೆರಬೇಕಾಗಿತ್ತು. ಕಠಿಣ ತೆರಿಗೆಯು ಹೇರಲ್ಪಡುತ್ತಿರಲಿಲ್ಲ. ರಾಜ್ಯದ ಆದಾಯದ ಕಾಲಂಶವನ್ನು ಸರಕಾರದ ಖರ್ಚಿಗೂ, ಇನ್ನೊಂದು ಅಂಶವನ್ನು ಅಧಿಕಾರಿಗಳ ವೇತನಕ್ಕೂ, ಮತ್ತೊಂದು ಅಂಶವನ್ನು ಸಾಹಿತ್ಯ, ಕಲೆಗಳ ಪ್ರೋತ್ಸಾಹಕ್ಕೂ, ಉಳಿದ ಅಂಶವನ್ನು ಧರ್ಮಗಳ ಪ್ರಸಾರಕ್ಕಾಗಿಯೂ ವಿನಿಯೋಗಿಸಲಾಗುತ್ತಿತ್ತು.
ಕೆ.ವಿ. ತಿರುಮಲೇಶ್ ಬರೆಯುವ ಸರಣಿ

Read More

ಸದಾ ಸ್ವಾಭಿನಂದನೆಯ ಯುಗ

ನಮ್ಮನ್ನು ನಾವೇ ಅಭಿನಂದಿಸಿಕೊಳ್ಳುತ್ತಿರುವುದು, ಹೊಗಳಿಕೊಳ್ಳುತ್ತಿರುವುದು ಇವೇ ನಮ್ಮ ನಿತ್ಯದ, ಕ್ಷಣಕ್ಷಣದ ದಂದುಗವಾಗಿದೆ. ಅಂದರೆ ನಾವು ನಮ್ಮನ್ನು ಅಭಿನಂದಿಸಿಕೊಂಡು ಬೆಚ್ಚಗೆ ಸುಖಪಡುತ್ತಾ ಮನೆಯೊಳಗೆ ಕುಳಿತಿರುತ್ತೇವೆಂದು ಅರ್ಥವಲ್ಲ. ಇನ್ನೊಬ್ಬರು, ಅಂದರೆ, ನಮ್ಮನ್ನು ಬಲ್ಲವರೆಲ್ಲರೂ ನಮ್ಮನ್ನು ಯಾವಾಗಲೂ ಅಭಿನಂದಿಸುತ್ತಲೇ ಸಾಧ್ಯವಾಗುವಂತಹ ಸುಲಭವಾಗುವಂತಹ ಅವಕಾಶಗಳನ್ನು ನಾವೇ ಸೃಷ್ಟಿಸುತ್ತಾ ಹೋಗುತ್ತೇವೆ.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಐದನೆಯ ಪ್ರಬಂಧ ನಿಮ್ಮ ಓದಿಗೆ

Read More

ಮೆಳ್ಳಿಗೇರಿ ಸರ್‌ ಸಲುವಾಗಿ ಶಾಲೆಯನ್ನೇ ಬದಲಾಯಿಸಿದ್ದೆ!

ವಿದ್ಯಾರ್ಥಿಗಳನ್ನು ನಾಲ್ಕು ಗುಂಪಾಗಿ ವಿಂಗಡಿಸಿ ಪ್ರತಿ ಗುಂಪಿಗೆ ಒಬ್ಬೊಬ್ಬ ಗಣಿತ ಪರಿಣತ ವಿದ್ಯಾರ್ಥಿಯನ್ನು ನಾಯಕನನ್ನಾಗಿ ಮಾಡಿದ್ದರು. ನನಗೆ ಒಂದು ಗುಂಪಿನ ಜಬಾಬ್ದಾರಿ ಕೊಟ್ಟಿದ್ದರು. ದೊಡ್ಡದಾಗಿರುವ ಮನೆಯ ಸಹಪಾಠಿಗಳ ಕೋಣೆಯೊಂದರಲ್ಲಿ ರಾತ್ರಿ ಕುಳಿತು ಗಣಿತ ಬಿಡಿಸುತ್ತಿದ್ದೆವು. ಅಲ್ಲೇ ಮಲಗಿ ಬೆಳಿಗ್ಗೆ ಮನೆಗೆ ಹೋಗುತ್ತಿದ್ದೆವು. ಹೀಗೆ ಸಹಪಾಠಿಗಳ ಮನೆಗೆ ಹೋಗಿ ಪಾಠ ಹೇಳುವುದನ್ನು ಮೊದಲಿನಿಂದಲೂ ಮಾಡುತ್ತಿದ್ದೆ. ಶ್ರೀಮಂತ ಹುಡುಗರ ತಾಯಂದಿರು ಬಡ ಹುಡುಗನ ತಾಯಿಯ ಮನೆಗೆ ಬಂದು “ಇವತ್ತು ನಿಮ್ಮ ಮಗನನ್ನು ನಮ್ಮ ಮನೆಗೆ ಕಳಿಸಿರಿ” ಎಂದು ಕೇಳುವುದು ನನಗೆ ಖುಷಿ ಕೊಡುತ್ತಿತ್ತು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ