Advertisement

Category: ಸರಣಿ

ಮದ್ರಾಸಿನಂತಹ ಲಂಡನ್ನಿನಲ್ಲಿದ್ದ ತಪಸ್ವಿ

ಲಂಡನ್ ಬದುಕಿನ ದೀರ್ಘ ಅನುಭವವನ್ನು ಹೀಗೆ ಬರೆದುಕೊಂಡಿದ್ದ ವಿ.ಕೆ. ಕೃಷ್ಣ ಮೆನನ್, ಅದಕ್ಕಿಂತ 43 ವರ್ಷಗಳ ಹಿಂದೆ 1920ರಲ್ಲಿ, ವಕೀಲಿಕೆಯ ವಿದ್ಯಾರ್ಥಿಯಾಗಿ ಮದ್ರಾಸಿನಲ್ಲಿದ್ದಾಗ ಅನ್ನಿ ಬೆಸೆಂಟರ ಹೋಂ ರೂಲ್ ಚಳವಳಿಯ ಪ್ರಭಾವಕ್ಕೆ ಒಳಗಾಗಿದ್ದರು. ಬೆಸೆಂಟರೂ ರಾಷ್ಟ್ರೀಯತೆಯ ಖಾತೆಗೆ ಇನ್ನೊಬ್ಬ ವ್ಯಕ್ತಿಯನ್ನು ಜಮಾ ಮಾಡುವ ಉದ್ದೇಶ ಇಟ್ಟು ಹುಡುಕಾಟದಲ್ಲಿ ಇದ್ದವರು. ಮೆನನ್‌ರನ್ನು “ಹೋಮ್ ರೂಲ್” ಕುಟುಂಬದ ಸದಸ್ಯನನ್ನಾಗಿ ಸ್ವೀಕರಿಸಿದರು ಮತ್ತು ಇಂಗ್ಲೆಂಡ್‌ನಲ್ಲಿ ಮೆನನ್‌ರ ಥಿಯೋಸ್ಪಿಯನ್ ಅರಿವನ್ನು ಹೆಚ್ಚಿಸಬಹುದಾದ ಓದಿನ ವಿದ್ಯಾರ್ಥಿವೇತನಕ್ಕಾಗಿ ಓಡಾಡಿದರು.
ಯೋಗೀಂದ್ರ ಮರವಂತೆ ಬರಹ

Read More

ಓದುಗರಿಗೊಂದು ಪತ್ರ…

ಈ ಆತ್ಮಕಥನ ಕಾದಂಬರಿಯಲ್ಲಿ ಬರುವ ಎಲ್ಲ ಪಾತ್ರಗಳ ನೆನೆದರೆ ತುಂಬ ಬೇಸರವಾಗುತ್ತದೆ. ಅನೇಕರು ಸತ್ತು ಹೋಗಿದ್ದಾರೆ… ಅವರು ಕೇವಲ ಪಾತ್ರವಾಗಿರಲಿಲ್ಲ… ನನ್ನ ವ್ಯಕ್ತಿತ್ವದ ಬೇರುಗಳಾಗಿದ್ದರು. ಆದರೆ ಆ ಕ್ಷಣಕ್ಕೆ ಪಾತ್ರಗಳಾಗಿಯೇ ಬರೆಹಕ್ಕೆ ಕರೆದುಕೊಂಡೆ. ಇವನು ಕೆಟ್ಟವನು… ಅವರು ಬಹಳ ಒಳ್ಳೆಯವರು ಎಂಬ ಭೇದ ಮಾಡಲಿಲ್ಲ. ಬಾಲ್ಯದಲ್ಲಿ ಇಡೀ ಊರಾದ ಊರೇ ನೆರೆದು ರಾಮಾಯಣ ಮಹಾಭಾರತಗಳ ನಾಟಕ ನೋಡುತ್ತಿದ್ದರು. ನಮಗೆ ರಾಮನೂ ರಾವಣನೂ ಇಬ್ಬರೂ ನಮ್ಮ ಸ್ವಂತ ಸಂಬಂಧಿಕರೇ ಆಗಿರುತ್ತಿದ್ದರು.
‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯಲ್ಲಿ ತಮ್ಮ ಆತ್ಮಕತೆಯನ್ನು ಬರೆದ ಮೊಗಳ್ಳಿ ಗಣೇಶ್ ಕೆಂಡಸಂಪಿಗೆಯ ಓದುಗರಿಗೆ ಪತ್ರವೊಂದನ್ನು ಬರೆದಿದ್ದಾರೆ

Read More

ಕರುಳಬಳ್ಳಿಯೋ… ಕೊರಳ ಉರುಳೋ…

ಅಲ್ಲಿ ಜನರು ಒಬ್ಬರಿಗೊಬ್ಬರು ಅಂಟಿಕೊಂಡು ಟೊಮೇಟೊ ಕೆಂಪು ರಸವನ್ನು ಒಬ್ಬರಿಗೊಬ್ಬರು ಮೆತ್ತುತ್ತಿರುತ್ತಾರೆ. ಮುಂದುವರಿದ ಹಾಗೆ ಚಿತ್ರ ಬದಲಾಗಿ ಅವರ ತಲೆಯ ಮೇಲೆ ಅಂಗಾತ ಮಲಗಿದ ಟಿಲ್ಡಾಳನ್ನು ದಾಟಿಸುತ್ತಿರುತ್ತಾರೆ. ಅವಳ ಮೈ ಮೇಲೆ ಟೊಮ್ಯಾಟೋ ರಸ ಹರಿಯುತ್ತಿರುತ್ತದೆ. ಕೆಂಪು ಬಣ್ಣ ಸೂಸುವ ಅಹಿತಕರವಾದ ಭಾವನೆಗಳಿಗೆ ಮತ್ತು ಚಿತ್ರದ ಅಂತರಾಳಕ್ಕೂ ಸಂಬಂಧವಿರುವುದು ವಿಶೇಷ. ಅಲ್ಲದೆ ಟೊಮ್ಯಾಟೊ ರಸದಲ್ಲಿ ಮುಳುಗಿರುವ ಟಿಲ್ಡಾಳ ಮುಖದಲ್ಲಿ ನಗುವಿರುವುದು ಆಶ್ಚರ್ಯವೇ. ಅಲ್ಲದೆ ಇದು ಸಾಕಷ್ಟು ಗೊಂದಲಗಳನ್ನೂ ಹುಟ್ಟಿಸುತ್ತದೆ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಇಂಗ್ಲೆಂಡ್‌ನ ʻವಿ ನೀಡ್‌ ಟು ಟಾಕ್‌ ಅಬೌಟ್‌ ಕೆವಿನ್‌ʼ ಸಿನಿಮಾದ ವಿಶ್ಲೇಷಣೆ

Read More

ಸಮಾಜವಾದದ ಪ್ರೇರಣೆಗೊಂದು ಉದಾಹರಣೆ ಸೋವಿಯತ್‌ ರಷ್ಯಾ

ಸೋವಿಯತ್ ದೇಶಕ್ಕೆ ನಾನು ಭೇಟಿ ನೀಡಿದ ಸಂದರ್ಭದಲ್ಲಿ ಯುವಕರೆಲ್ಲ ಎರಡನೇ ಮಹಾಯುದ್ಧದ ನಂತರ ಜನಿಸಿದವರೇ ಆಗಿದ್ದರು. ಅವರಿಗೆ ೧೯೧೭ರ ಕ್ರಾಂತಿಯಾಗಲಿ, ೧೯೪೫ರಲ್ಲಿ ಕೊನೆಗೊಂಡ ಎರಡನೇ ಮಹಾಯುದ್ಧದ ಅನಾಹುತಗಳಾಗಲೀ ಅನುಭವಕ್ಕೆ ಬರಲು ಸಾಧ್ಯವೇ ಇಲ್ಲ. ಅವನ್ನೆಲ್ಲ ಅವರು ತಿಳಿದುಕೊಳ್ಳುವುದು ಹಿರಿಯರ ಅನುಭವದಿಂದ, ಇತಿಹಾಸದ ಪುಟಗಳಿಂದ. ಬಹುಪಾಲು ಯುವಕರು ಇದನ್ನೆಲ್ಲ ಅರಿತರೂ ಐರೋಪ್ಯ ದೇಶಗಳ ಜನರ ಮತ್ತು ಅವರು ಬಳಸುವ ವಸ್ತುಗಳ ಸಂಪರ್ಕದಿಂದ ಅವರ ಮನಸ್ಸು ಕ್ರಮೇಣ ಕೊಳ್ಳುಬಾಕ ಸಂಸ್ಕೃತಿಯ ಕಡೆಗೆ ವಾಲತೊಡಗಿತು. ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ ೫೦ನೇ ಕಂತು ಇಲ್ಲಿದೆ.

Read More

ರಾಜರ ಸ್ವಭಾವ, ರಾಜ್ಯವಿಸ್ತಾರದ ಪ್ರೇರಣೆ

ಮಾಳವದ ಯಶೋಧರ್ಮನು ಭಾರತದಲ್ಲಿ ಹೂಣರನ್ನು ಅಣಗಿಸಲು ಪ್ರಮುಖ ಪಾತ್ರ ವಹಿಸಿದವನು. ದಿಗ್ವಿಜಯವನ್ನು ಮಾಡಿ ಬ್ರಹ್ಮಪುತ್ರಾ ನದಿಯಿಂದ ಮಹೇಂದ್ರ ಪರ್ವತದವರೆಗೂ, ಹಿಮಾಲಯದಿಂದ ಪಶ್ಚಿಮ ಸಮುದ್ರದ ತನಕವೂ ವಿಸ್ತರಿಸಿದ್ದ ರಾಜ್ಯವನ್ನು ಮಂಡಸೋರದ ರಾಜಧಾನಿಯಿಂದ ಆಳಿದನು. ಯಶೋಧರ್ಮನು ಉತ್ತಮ ಹಿಂದೂ ಅರಸನಾಗಿದ್ದು ಮನು, ಭರತ ಮೊದಲಾದವರಿಗೆ ಹೋಲಿಸಲ್ಪಟ್ಟಿದ್ದನು. ಈತನ ಮಂತ್ರಿಯಾದ ಧರ್ಮದೋಷನು ವರ್ಣಸಂಕರವಾಗದಂತೆ ಯತ್ನಿಸಿದನು. ಯಶೋಧರ್ಮನ ವಿಷಯಗಳು ಮಂಡಸೋರದ ಶಿಲಾಸ್ತಂಭದಿಂದ ತಿಳಿಯುತ್ತವೆ.
ಕೆ.ವಿ. ತಿರುಮಲೇಶ್ ಬರೆಯುವ ‘ನನ್ನ ಹಿಸ್ಟರಿ ಪುಸ್ತಕ’ ಸರಣಿಯ ಬರಹ ಇಲ್ಲಿದೆ.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ