Advertisement

Category: ಸರಣಿ

ಬಡವರ ಶಕ್ತಿ ಅದಮ್ಯ

ಬಡವರು ಎಷ್ಟೇ ಮೂಢನಂಬಿಕೆಯವರಿದ್ದರೂ ತಮ್ಮ ಶಕ್ತಿಯನ್ನು ಅವಲಂಬಿಸಿಯೆ ಬದುಕುವುದು ಅವರ ಜಾಯಮಾನವಾಗಿದೆ. ಬದುಕೆಂಬುದು ಅವರಿಗೆ ಹೋರಾಟದ ಅಖಾಡಾ ಆಗಿದೆ. ಆಹಾರ, ಬಟ್ಟೆ, ಆಶ್ರಯ ಮತ್ತು ಮಕ್ಕಳ ಭವಿಷ್ಯಕ್ಕಾಗಿ ಅವರು ನಿರಂತರವಾಗಿ ಹೋರಾಡುತ್ತಲೇ ಇರುತ್ತಾರೆ. ಆದರೆ ಈ ಹೋರಾಟ ಮಾರ್ಕ್ಸ್ ಹೇಳುವ ವರ್ಗ ಹೋರಾಟವಾಗಿರುವುದಿಲ್ಲ. ಅವರ ಶೋಷಣೆ ಮಾಡುವವರು ಅವರಿಗೆ ಅನ್ನದಾತರು ಎಂದು ಕಾಣುತ್ತಿದ್ದರೇ ಹೊರತು ಶೋಷಕರಾಗಿ ಕಾಣುತ್ತಿರಲಿಲ್ಲ.  ರಂಜಾನ್ ದರ್ಗಾ ಬರೆಯುವ ಆತ್ಮಕತೆ ನೆನಪಾದಾಗಲೆಲ್ಲ ಸರಣಿಯ 33ನೆಯ ಕಂತು ಇಲ್ಲಿದೆ. 

Read More

ಅಲೆಗಳು ಕರೆತಂದಿದ್ದವು ದಂಡೆಗೆ

ಅದೇ ಅವನು ನಮ್ಮಪ್ಪ ನರಭಕ್ಷಕ ಬಾಂಡ್ಲಿಯಲ್ಲಿ ಬೋಂಡ ಹಾಕುತಿದ್ದ. ಅವನ ಹೆಂಡತಿ ಸಪ್ಲೆರ‍್ರಾಗಿದ್ದಳು. ಪುಟ್ಟ ಹುಡುಗಿ; ಅವಳ ಹೆಸರು ಮೀನಾಕ್ಷಿ, ಶಾಲೆಗೆ ಸೇರಿದ್ದಳೊ ಇಲ್ಲವೊ ಗೊತ್ತಿರಲಿಲ್ಲ. ಅವಳ ತಾಯ ತದ್ರೂಪ. ಅಲಲಲಾ… ಎಂತಹ ಪಾಳೆಯಗಾರ… ಇಲ್ಲಿ ಫುಟ್‌ಪಾತಲ್ಲಿ ಬಂದು ಬಿದ್ದಿದ್ದಾನಲ್ಲಾ. ಇವನೆನಾ ನಮ್ಮಪ್ಪ! ಕೊಂದು ಬಿಡಲು ಎಷ್ಟು ಸಲ ಯತ್ನಿಸಿ ವಿಫಲನಾಗಿದ್ದನಲ್ಲಾ! ಈಗ ಇಲ್ಲಿ ಈ ಪಾಡಿನಲ್ಲಿ. ಮೆರೆದಿದ್ದವನ ಗತಿಯೇ ಇದೂ ಎಂದು ಗಕ್ಕನೆ ನಿಂತೆ. ನನ್ನ ಅನಂತ ಅಸ್ಪೃಶ್ಯ ಆಕಾಶ ಸರಣಿಯಲ್ಲಿ ಮೊಗಳ್ಳಿ ಗಣೇಶ್ ಬರಹ. 

Read More

ಇದು ಪ್ರೇಕ್ಷಕಾನುಸಂಧಾನ

ಒಂದು ಪ್ರಸಂಗದಲ್ಲಿ ಭೀಷ್ಮ, ಸತ್ಯವತಿಯನ್ನು ತುಂಬಾ ವರ್ಣನೆ ಮಾಡಿದ್ದನ್ನುಸರೋಜಕ್ಕ ನೋಡಿದರು. ತಂದೆ ಇಷ್ಟ ಪಟ್ಟ ಹೆಣ್ಣನ್ನು ತಾಯಿ ಅಂತನೇ ನೋಡಬೇಕಿತ್ತು. ಹಾಗೆಲ್ಲಾ ತುಂಬಾ ವರ್ಣನೆ ಮಾಡಿದ್ದು ಆಭಾಸವಾಯಿತು ಅಂದರು. ಕರ್ಣಪರ್ವದಲ್ಲಿ ಕರ್ಣ ಪಾಪ, ಪಾಂಡವರಾಗಿ ಹುಟ್ಟಿದರೂ ಏನು ಇಲ್ಲ. ತಾಯಿ ಇದಾರೆ, ತಮ್ಮಂದಿರಿದಾರೆ. ಆದರೂ ಯಾರೂ ಇಲ್ಲ. ಇಡೀ ಮಹಾಭಾರತದಲ್ಲಿ ಕರ್ಣ ಅಂದ್ರೆ ಬಹಳ ಪ್ರೀತಿ. ಕುಂತಿ ನೋಡಿದ್ರೆ ಸಿಟ್ಟು ಬರತ್ತೆ ಒಂದೊಂದ್ಸಲ. ಆದರೆ ಕೀಲಿ ಕೈ ಇರೋದು ಕೃಷ್ಣನ ಹತ್ರನೇ. ಕಪಟ ನಾಟಕ ಅಂತನೇ ಇದೆಯಲ್ಲ.
ಕೃತಿ. ಆರ್. ಪುರಪ್ಪೇಮನೆ ಅವರು ಯಕ್ಷಾರ್ಥ ಚಿಂತಾಮಣಿ ಸರಣಿಯ‌ ಬರಹ

Read More

ಪತ್ರಿಕಾ ಸ್ವಾತಂತ್ರ್ಯದ ಸುತ್ತಮುತ್ತ ʻದ ಪೋಸ್ಟ್‌ʼ

ಅಮೆರಿಕ ರಕ್ಷಣಾ ವಿಭಾಗದ ಪೆಂಟಗನ್‌ ಪೇಪರುಗಳಿಗೆ ಸಂಬಂಧಿಸಿದಂತೆ ನ್ಯೂಯಾರ್ಕ್ ಟೈಮ್ಸ್‌ ಪತ್ರಿಕೆಗೆ ಒದಗಿದ ಅವಸ್ಥೆಯನ್ನು ತಿಳಿದಿದ್ದರೂ ಬೆನ್ ಬ್ರಾಡ್ಲಿ ತಾವೇಕೆ ಆ ಮಾಹಿತಿಯನ್ನು ಪ್ರಸಾರ ಮಾಡಕೂಡದು ಎಂದು ಯೋಚಿಸುತ್ತಾನೆ. ಅದು ಹೊಳೆದ ಕೂಡಲೆ ಡೇನಿಯಲ್‌ ಎಲ್‌ಬರ್ಗ್‌ ನನ್ನು ಸಂಪರ್ಕಿಸಿ ಉದ್ದೇಶಿತ ಮಾಹಿತಿಯನ್ನು ಪಡೆಯಲು ಸಫಲನಾಗುತ್ತಾನೆ. ನ್ಯೂಯಾರ್ಕ್‌ ಟೈಮ್ಸ್‌ನಿಂದ ಯುದ್ಧದ ಸತ್ಯವಾದ ಮಾಹಿತಿ ಸಾರ್ವಜನಿಕರಿಗೆ ತಿಳಿಯಲಾಗದ ಪರಿಸ್ಥಿಗೆ ಎಲ್‌ಬರ್ಗ್ ನೊಂದುಕೊಂಡಿರುತ್ತಾನೆ.
ಎ.ಎನ್. ಪ್ರಸನ್ನ ಬರಹ ಇಲ್ಲಿದೆ.

Read More

ಅಂಬಾಭವಾನಿಯ ಆರಾಧನೆಯ ದಿನಗಳು

ಪ್ರತಿ ಶುಕ್ರವಾರ ಜನ ಕಿಕ್ಕಿರಿದು ತುಂಬತೊಡಗಿದರು. ನನಗೋ ಶುಕ್ರವಾರ ಬಂದರೆ ಬೇಸರ ಶುರುವಾಗತೊಡಗಿತು. ನನ್ನ ಮತ್ತು ಅಂಬಾಭವಾನಿಯ ಮಧ್ಯದ ಏಕಾಗ್ರತೆಗೆ ಈ ಶಾಂತಿಭಂಗ ಬಹಳ ಕಿರಿಕಿರಿ ಎನಿಸುತ್ತಿತ್ತು. ಎಲ್ಲರೂ ಪ್ರಶ್ನೆ ಕೇಳುತ್ತಿದ್ದಿಲ್ಲ. ಆ ಮುಗ್ಧ ಮಹಿಳೆಯರು ಕುತೂಹಲದಿಂದ ಬರುತ್ತಿದ್ದರೂ ನನ್ನ ಪೂಜೆ ಧ್ಯಾನ ಮುಗಿಯುವ ವರೆಗೂ ತುಟಿಪಿಟಕ್ಕೆನ್ನದೆ ಕುಳಿತುಕೊಳ್ಳುತ್ತಿದ್ದರು. ಆದರೆ ಅವರೆಲ್ಲ ಬಂದು ಕೂಡುವುದೇ ನನಗೆ ಕಿರಿಕಿರಿ ಎನಿಸುತ್ತಿತ್ತು.
ರಂಜಾನ್ ದರ್ಗಾ ಬರೆಯುವ ಸರಣಿ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ