ಉಪೇಂದ್ರನ ಹಾವಳಿ ಮತ್ತು ರಾಮಾಂಜಿ ಲವ್
ಸರ್ಕಾರದಿಂದ ನಡೆಯುವ ಯಾವುದೇ ಪರೀಕ್ಷೆಗಳನ್ನು ನಡೆಸಲು ನಮ್ಮ ಜೂನಿಯರ್ ಕಾಲೇಜಿನ ಕೊಠಡಿಗಳನ್ನ ಕಡ್ಡಾಯವಾಗಿ ತೆಗೆದುಕೊಳ್ಳುತ್ತಿದ್ದುದರಿಂದ ಆಗೆಲ್ಲ ನಮಗೆ ದೀರ್ಘ ರಜೆ ಸಿಗುತ್ತಿತ್ತು. ಚೆನ್ನಾಗಿ ಓದಬೇಕೆಂಬ ಕನಸು ಹೊತ್ತು ಬಂದಿದ್ದ ನಮಗೆ ಇಲ್ಲಿನ ವಿಪರೀತ ರಜೆಗಳಿಂದಾಗಿ ನಿರಾಸೆ ಉಂಟಾಗಿತ್ತು. ನಮಗೆ ಇತ್ತ ಕೆಲ ತಿಂಗಳು ಕಳೆದರೂ ಕಾಲೇಜು ಪ್ರಾರಂಭ ಆಗದೆ ಊರಲ್ಲೆ ಉಳಿದಾಗ, ಪಕ್ಕದ ಮನೆ ಕೇಸುದೊಡಪ್ಪ ‘ಎಲ್ಲೊ ಪೇಲಾಗವೆ ಅದ್ಕೆ ಹೋಗಿಲ್ಲ’ ಎಂದು ಅನುಮಾನ ಪಟ್ಟುಕೊಳ್ಳುತ್ತಿತ್ತು. ಗುರುಪ್ರಸಾದ್ ಕಂಟಲಗೆರೆ ಬರಹ.
Read More
