Advertisement

Category: ಸರಣಿ

ಅಪರಾಧ ಮತ್ತು ಶಿಕ್ಷೆ: ತಪ್ಪಿಹೋದುದನ್ನು ನೆನೆಯುತ್ತಾ…

ಮನೆಗೆ ಮರಳುವ ಹೊತ್ತಿಗೆ ಈ ತೀರ್ಮಾನ ಅವನ ಕೋಪವನ್ನೂ ಕಹಿಯನ್ನೂ ಮನೆ ಬಿಡುವಾಗ ಇದ್ದುದಕ್ಕಿಂತ ಎರಡು ಪಟ್ಟು ಹೆಚ್ಚಿಸಿತು. ಕ್ಯಾತರೀನ ಇವಾನೋವ್ನಾ ಮನೆಯಲ್ಲಿ ನಡೆಯುತ್ತಿದ್ದ ಅಂತ್ಯ ಸಂಸ್ಕಾರದ ಊಟದ ಏರ್ಪಾಟು ಅವನ ಕುತೂಹಲವನ್ನು ಕೆರಳಿಸಿತು.”
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

Read More

ಖಾನ್ ಕಾಂಪೌಂಡ್: ಮೈಸೂರು ಮಹಾರಾಜರು ಮೆಚ್ಚಿದ ದರ್ಬಾರಿ ಕಾನಡ

‘”ರಹಿಮತ್ ಖಾನ್ ಅವರು ಸಿತಾರ್ ನ ತಂತಿವಿನ್ಯಾಸವನ್ನು ಬದಲಿಸಿದ ಖ್ಯಾತಿಗೆ ಪಾತ್ರರಾದವರು. ಸಿತಾರ್ ನಲ್ಲಿ ರುದ್ರವೀಣೆಯ ನಾದಸುಖವನ್ನು ಅರಸುತ್ತ, ಅವರು ಪ್ರಯೋಗಶೀಲತೆಯತ್ತ ಮುಖಮಾಡಿದರು. ಜನಪದ ಸಂಗೀತ ಉಪಕರಣ ಎನಿಸಿದ್ದ ಸಿತಾರ್ ಗೆ ಶಾಸ್ತ್ರೀಯತೆಯ ಮನ್ನಣೆ ದೊರೆಯಲು ರಹಿಮತ್ ಖಾನ್ ಅವರ ಈ ಆವಿಷ್ಕಾರವೂ ಕಾರಣ.”ಶೇಣಿ ಮುರಳಿ ಬರೆದ ಉಸ್ತಾದ್ ರಫೀಕ್ ಖಾನ್ ಜೀವನಚರಿತ್ರೆ ‘ಖಾನ್ ಕಾಂಪೌಂಡ್’ನ ಅಧ್ಯಾಯವೊಂದು, ಈ ಆವಿಷ್ಕಾರದ ವಿವರ ನೀಡುತ್ತದೆ

Read More

ಆಗಿ ಹೋಗಿರುವುದು, ಆಗುತ್ತಿರುವುದು, ಆಗ ಬೇಕಿರುವುದು, ಎಲ್ಲವೂ…

ವಿಜ್ಞಾನದ ಮಹತ್ವ-ರುಚಿ ಇರುವುದು ಪ್ರಕೃತಿಯ ರಂಗಮಂಟಪದ ತೆರೆಗಳನ್ನು ಒಂದೊಂದಾಗಿ ಮೇಲೆತ್ತುತ್ತಾ ಮೂಲ ನಾಟಕವನ್ನು ತೋರಿಸಲೆತ್ನಿಸುವ ಅದರ ಪ್ರಯತ್ನದಲ್ಲಿ. ಈ ಪ್ರಯತ್ನ ಮುಂದುವರೆದಂತೆ, ಒಂದೊಂದೇ ತೆರೆ ಕಳಚಿದಂತೆ, ಅನುಭವದಿಂದಷ್ಟೇ ಪಡೆದ-ಪಡೆವ ಜ್ಞಾನಗಳ ಗಡಿ ದಾಟುತ್ತಿರುವಂತೆ, ಈ ಪ್ರಯತ್ನದಲ್ಲಿ ಸದಾ ನಮ್ಮೊಂದಿಗೆ ಇರುವವಾದರೂ ಯಾವುವು?
-ಶೇಷಾದ್ರಿ ಗಂಜೂರು ಬರೆಯುವ ವಿಜ್ಞಾನ ಸರಣಿ

Read More

ನಾನು ರಂಜಾನ್ ದರ್ಗಾ, ಎಪ್ಪತ್ತು ವರ್ಷಗಳ ಮುಗಿಸಿ ಎಪ್ಪತ್ತೊಂದನೇ ವರ್ಷಕ್ಕೆ ಕಾಲಿಟ್ಟಿರುವೆ…

”ಆ ಆಕಳುಗಳ ಹಿಂಡಿನಲ್ಲಿ ಗಂಗಾ ಎಂಬ ಆಕಳು ಇತ್ತು. ಅದು ನನ್ನನ್ನು ತಾಯಿಯಂತೆ ಪ್ರೀತಿಸುತ್ತಿತ್ತು. ನಾನು ಗೆಳೆಯರ ಜೊತೆ ಓಡಾಡುತ್ತ ಹಸಿವಾದಾಗ ಗಂಗಾ ಬಳಿ ಹೋಗುತ್ತಿದ್ದೆ. ನನ್ನನ್ನು ನೋಡಿದ ತಕ್ಷಣ ಅದು ಕಕ್ಕುಲತೆಯಿಂದ ಧ್ವನಿ ತೆಗೆಯುತ್ತಿತ್ತು. ನಾನು ಹೋಗಿ ಅದರ ಬಾಯಿ ಮುಂದೆ ಕೂಡುತ್ತಿದ್ದೆ. ಅದು ಬಹಳ ಪ್ರೀತಿಯಿಂದ ನನ್ನ ತಲೆ ನೆಕ್ಕುತ್ತಿತ್ತು.”
ಹಿರಿಯ ಪತ್ರಕರ್ತ, ಲೇಖಕ ರಂಜಾನ್ ದರ್ಗಾ ಅವರ ಜೀವನದ ಪುಟಗಳು ಇನ್ನು ಮುಂದೆ ವಾರಕ್ಕೊಮ್ಮೆ.

Read More

ಗಜಪಥದಲ್ಲಿ ಸಾಗಿದ ರಾಷ್ಟ್ರಕವಿ ಗೋವಿಂದ ಪೈ

ಗೋವಿಂದ ಪೈಗಳಿಗೆ 1949 ರಲ್ಲಿ ಮದರಾಸು ಸರಕಾರ ‘ರಾಷ್ಟ್ರಕವಿ’ ಬಿರುದು ನೀಡಿ ಗೌರವಿಸಿತು. ಅವರು 1950 ರಲ್ಲಿ ಮುಂಬಯಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ಅವರು ಸನ್ಮಾನ, ಗೌರವಗಳನ್ನು ಸ್ವೀಕರಿಸಲು ಒಪ್ಪುತ್ತಿರಲಿಲ್ಲ. ಮೈಸೂರು ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಬೇಕೆಂದು ಬಯಸಿದಾಗ ಪೈಗಳು ವಿನಯದಿಂದ ನಿರಾಕರಿಸಿದರು. ‘ಕರಾವಳಿಯ ಕವಿರಾಜಮಾರ್ಗ’ ಸರಣಿಯಲ್ಲಿ ರಾಷ್ಟ್ರಕವಿ ಗೋವಿಂದ ಪೈಗಳ ಕುರಿತು ಬರೆದಿದ್ದಾರೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ