Advertisement

Category: ಸರಣಿ

ಕಡ್ಡಿ ಎಂದರೆ ಬಳಪ, ಹೆಸರು‌ ಎಂದರೆ ಸಾಂಬಾರ್!: ಸುಮಾವೀಣಾ ಸರಣಿ

ನಮ್ಮ ಮನೆ ಹತ್ತಿರವೆ ಇದ್ದ ಹುಸೇನ್ ಮತ್ತು ಷರೀಫ್ ಎಂಬಿಬ್ಬರು ಹಾಲು ತರುವ ಕೆಲಸ ವಹಿಸಿಕೊಂಡರು. ಆಗ ಅರ್ಧ ಲೀಟರ್ ಹಾಲಿಗೆ ಎರಡು ರೂಪಾಯಿ ಇಪ್ಪತ್ತೈದು ಪೈಸೆ ಅಷ್ಟೆ. “ಎರಡು ಕಾಲು! ಎರಡು ಕಾಲು!” ಎನ್ನುತ್ತಾ ಬರುತ್ತಿದ್ದರು. ಅವರು ಬರುವ ವೇಳೆಗೆ ಚಿಲ್ಲರೆ ಹೊಂದಿಸಿ ಇಡಬೇಕಿತ್ತು. ತಿಂಗಳಿಗೊಮ್ಮೆ ಅವರಿಗೆ ಹಾಲು ತಂದಿದ್ದಕ್ಕೆ ಇಷ್ಟು ಹಣ ಎಂದು ಕೊಡಬೇಕಿತ್ತು. ತಿಂಗಳಲ್ಲಿ ಕನಿಷ್ಟ ನಾಲ್ಕು ಬಾರಿಯಾದರೂ ಹಾಲು ಹಾಕದೆ ಖಾಲಿ ಕಾಫಿ ಕುಡಿಸುತ್ತಿದ್ದರು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಹದಿನಾಲ್ಕನೆಯ ಕಂತು ನಿಮ್ಮ ಓದಿಗೆ

Read More

ದೀಪಾವಳಿ ಹಬ್ಬದ ಆ ದಿನದ ನೆನಪು: ಮಾರುತಿ ಗೋಪಿಕುಂಟೆ ಸರಣಿ

ಅಂತೂ ಈಡಿಗೆ ಬೆಂಕಿ ತಾಕಿಸಿ ಅದು ಉರಿಯುವುದರೊಳಗೆ ನನ್ನನ್ನು ಅಲ್ಲಿಂದ ಮನೆಗೆ ಕಳಿಸಿದ್ದರು. ಅದಾದ ಮೇಲೆ ಎಂದೂ ನಾನು ಬಾನ ಹೊತ್ತಿದ್ದು ನೆನಪಿಲ್ಲ. ನನಗೆ ದೇವರನ್ನು ಹೊತ್ಕೋಬೇಕು ಅಂತ ಆಸೆ ಇತ್ತು. ಆದರೆ ನಾವು ದೇವರನ್ನು ತಲೆಮೇಲೆ ಹೊರಬಾರ್ದು ಅನ್ನುತ್ತಿದ್ದರು. ಅದಕ್ಕೆ ಅನೇಕ ನಿಯಮಗಳಿರುತ್ತವೆ ಅನ್ನುತ್ತಿದ್ದರು. ನಾವ್ಯಾಕೆ ಹೊತ್ಕೋಬಾರ್ದು ಎಂಬ ಪ್ರಶ್ನೆ ನನ್ನನ್ನು ಕಾಡುತ್ತಲೆ ಇತ್ತು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಇಪ್ಪತ್ತೊಂದನೆಯ ಕಂತು

Read More

ಜೈಲಿಗೆ ಹೋಗಲು ಸಕಲ ತಯಾರಿ!: ಕೆ.‌ ಸತ್ಯನಾರಾಯಣ ಸರಣಿ

ಇಂತಹ ಕೋರಿಕೆ ಇದುವರೆಗೆ ನಮಗೆ ಬಂದಿಲ್ಲ, ಎಲ್ಲೂ ಕೇಳಿಲ್ಲ, ಕಂಡಿಲ್ಲ ಎಂದು ವಾದಿಸಿದರು. ಕೊನೆಗೆ ನನ್ನ ವಯಸ್ಸು, ಹಿರಿತನ, ಕಳಕಳಿಪೂರ್ಣ ಮನವಿಗೆ ಕ್ಷೀಣವಾಗೆಂಬಂತೆ ಸ್ಪಂದಿಸುತ್ತಾ, ಸರಿ, ಎರಡು ನಿಮಿಷ ನೋಡಲು ಬಿಡ್ತೀವಿ, ಕೇಸ್‌ ವಿಷಯ ಮಾತನಾಡಕೂಡದು, ನೀವು ಅವರನ್ನು ಭೇಟಿ ಮಾಡುವಾಗ ನಾವು ಕೂಡ ಒಬ್ಬರು ಜೊತೆಗೇ ಇರ‍್ತೀವಿ ಎಂದರು.
ಕೆ. ಸತ್ಯನಾರಾಯಣ ಬರೆಯುವ “ಜೈಲು ಕತೆಗಳು” ಸರಣಿಯ ಎರಡನೇ ಬರಹ ನಿಮ್ಮ ಓದಿಗೆ

Read More

ಭಾಷೆಯ ಭಾವಯಾನ: ಡಾ. ಚಂದ್ರಮತಿ ಸೋಂದಾ ಸರಣಿ

ನಮಗೆ ಅಗತ್ಯವಿಲ್ಲದ ಪದಗಳ ಬಳಕೆಯ ವಿಷಯದಲ್ಲಿ ಸರಿ. ಆದರೆ ದಿನನಿತ್ಯದ ವ್ಯವಹಾರದಲ್ಲಿ ಬಳಸುವ, ನಾವು ಉಪಯೋಗಿಸುವ ವಸ್ತುಗಳ ವಿಷಯವೇ ಬೇರೆ. ಅನೇಕ ಪದಗಳನ್ನು ಕನ್ನಡದಲ್ಲಿ ಹೇಳಲು ಕಷ್ಟಪಡುತ್ತೇವೆ. ಯಾಕೆಂದರೆ ನಮಗೆ ಅವೆಲ್ಲ ಮರೆತೇ ಹೋಗುತ್ತಿವೆ. ಇಂಗ್ಲಿಷ್‌ ಪದಗಳು ಆ ಸ್ಥಾನವನ್ನು ಆಕ್ರಮಿಸಿವೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹತ್ತನೆಯ ಕಂತಿನಲ್ಲಿ ದಿನನಿತ್ಯ ಕನ್ನಡ ಭಾಷೆಯ ಬಳಸುವಿಕೆಯ ಕುರಿತ ಬರಹ ನಿಮ್ಮ ಓದಿಗೆ

Read More

ಸಾರೀರೀ… ಗುರು!: ಗುರುಪ್ರಸಾದ ಕುರ್ತಕೋಟಿ ಸರಣಿ

ಮೊದಲೇ ಕೆಲಸದಲ್ಲಿ ಆಸಕ್ತಿ ಕಳೆದುಕೊಂಡಿದ್ದ ನನಗೆ ಈ ಫ್ರಾನ್ಸ್‌ನ ಗುಂಗು ಎಷ್ಟು ಹಿಡಿಯಿತೆಂದರೆ ಕೆಲಸಕ್ಕೆ ಹೋಗುವುದೇ ಬೇಡ ಅನ್ನುವಷ್ಟು! ಆದರೂ ಕೈಯಲ್ಲಿ ಇದ್ದ ಕೆಲಸಗಳನ್ನು ನಿರ್ವಹಿಸುವುದರಲ್ಲಿ ಯಾವುದೇ ಚ್ಯುತಿ ಬರದಂತೆ ನಿಗಾ ವಹಿಸಿದ್ದೆ. ವಿದೇಶಕ್ಕೆ ಹೋದರೆ ಹಲವು ತಿಂಗಳು ಬರಲು ಆಗದಲ್ಲ ಅಂತ ಕೆಲವು ಸಂಬಂಧಿಕರ ಮನೆಗೂ ಹೋಗಿ ಬಂದೆವು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ