Advertisement

Category: ಸರಣಿ

ಚಿನ್ನದ ದ್ವೀಪ, ಶವದ ಹೂವು ಮತ್ತು ಮಲೇಷ್ಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ಮಲಯ ಪೆನಿನ್ಸುಲಾ ಮತ್ತು ಬೋರ್ನಿಯೊದ ಉತ್ತರ ಕರಾವಳಿ ಪ್ರದೇಶವು ಪ್ರಪಂಚದ ಪ್ರಮುಖ ಕಡಲ ವ್ಯಾಪಾರ ಮಾರ್ಗಗಳಲ್ಲಿ ಒಂದಾಗಿದೆ. ಏಷ್ಯಾದ ಇತರ ಭಾಗಗಳ ಜನರು ಇಲ್ಲಿಗೆ ಭೇಟಿ ಕೊಡುತ್ತಾರೆ. ಈ ಕಾರಣದಿಂದಾಗಿ ಆಗ್ನೇಯ ಏಷ್ಯಾದ ಬೇರೆ ರಾಷ್ಟ್ರಗಳಲ್ಲಿ ಕಂಡುಬರುವಂತೆ ಮಲೇಷ್ಯಾದಲ್ಲಿಯೂ ಜನಾಂಗೀಯ ವೈವಿಧ್ಯತೆಯಿದೆ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಮಲೇಷ್ಯಾ ದೇಶದ ಕುರಿತ ಬರಹ ನಿಮ್ಮ ಓದಿಗೆ

Read More

ಮೊರಸಾರ್ಸಕೆ….. ಮರಾ….ಕಲ್ಮುಳ್ಳು…. ಕಲ್ಮುಳ್ಳು…..: ಸುಮಾವೀಣಾ ಸರಣಿ

ಬಿದಿರಿನ ನಾನಾ ರೀತಿಯ ಮನೆ ಬಳಕೆ ವಸ್ತುಗಳು ಅಂದರೆ ಕುಕ್ಕೆ, ಗೂಡೆ, ಅನ್ನ ಬಸಿಯುವ ಚಿಬ್ಬಲು ಮಳೆಗಾಲದಲ್ಲಿ ಬಟ್ಟೆ ಒಣಗಿಸುವ ಪಂಜರಗಳು ಆಧುನಿಕತೆ ಬಂದಂತೆ ಕಡಿಮೆಯಾಗುತ್ತಿವೆ. ಅದಕ್ಕೆ ಪರ್ಯಾಯವಾಗಿ ಮೇದಾರರು ಬಿದಿರಿನಲ್ಲಿಯೇ ಗೃಹಾಂಲಕಾರಿಕ ವಸ್ತುಗಳು ಅಂದರೆ ಹೂದಾನಿಗಳು, ಗೋಡೆಗೆ ಆನಿಸುವಂಥ ಫಲಕಗಳು ಇತ್ಯಾದಿಗಳನ್ನು ಮಾಡಿ ಮಾರಾಟ ಮಾಡುತ್ತಿದ್ದಾರೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಹತ್ತನೆಯ ಬರಹ ನಿಮ್ಮ ಓದಿಗೆ

Read More

ಕವಿ ಒಬ್ಬ ಎಂಜಿನಿಯರ್;‌ ಕವಿತೆ ಒಂದು ಯಂತ್ರ: ಎಸ್. ಜಯಶ್ರೀನಿವಾಸ ರಾವ್ ಸರಣಿ

ಡಿ ಮೆಲೊ ನೆಟೊ ಅವರು ತಮ್ಮ ಕಾವ್ಯದಲ್ಲಿ ‘ವಸ್ತು’-ಗಳಿಗೆ ನೀಡುವ ವಿಶೇಷ ಸ್ಥಾನಮಾನವನ್ನು ಅವರ ಕಾವ್ಯದ ವಿಮರ್ಶಕರು ಗಮನಿಸಿದ್ದಾರೆ. ಡಿ ಮೆಲೊ ನೆಟೊ ಅವರ ಕಾವ್ಯದಲ್ಲಿ ಕಾಣುವ ಕಲ್ಲು, ಚಾಕು, ಗಾಳಿ, ನೀರು – ಇಂತಹ ‘ವಸ್ತು’-ಗಳು ಮತ್ತೆ ಮತ್ತೆ ಎಡೆಬಿಡದೆ ಬರುವ ಪ್ರತಿಮೆಗಳಾಗುತ್ತವೆ; ಜೊತೆಗೆ ಪ್ರಪಂಚದಾದ್ಯಂತದ ವಿಷಯಗಳು ಸಹ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಬ್ರೆಜಿಲ್ (Brazil) ದೇಶದ ಪೋರ್ಚುಗೀಸ್ (Portuguese) ಭಾಷಾ ಕವಿ ಜುವಾವ್ ಕೆಬ್ರಾಲ್ ಡಿ ಮೆಲೊ ನೇಟೊ-ರವರ (Joao Cabral De Melo Neto, 1920-1999) ಕಾವ್ಯದ ಕುರಿತ ಬರಹ

Read More

ಹತ್ತು ಮಹಡಿಯ ಭರ್ಜರಿ ಪ್ಲಾನು….: ಎಚ್.ಗೋಪಾಲಕೃಷ್ಣ ಸರಣಿ

ಬೆಳಗಿಂದ ಸಂಜೆವರೆಗೂ ನನ್ನ ಸಂಗಡವೆ ಇತ್ತು ಅದು. ಮಧ್ಯಾಹ್ನ ನಿದ್ದೆ ಕೂಡ ಮಾಡದೇ ನನ್ನ ಜತೆಗೆ ಇದ್ದುಬಿಡ್ತು. ಮನೆಗೆ ಹೊರಡ್ತಾ ಮಗೂನ ಮುದ್ದಿಸಿದೆ. “ಮಗು ತುಂಬಾ ಮುದ್ದು, ನನ್ನನ್ನ ತುಂಬಾ ಹಚ್ಚಿಕೊಂಡಿದೆ “ಅಂದೆ. ಬೆಳಿಗ್ಗೆಯಿಂದ ನನ್ನ ಸಂಗಡವೇ ಇತ್ತು. ಪುಟ್ಟ ಕೂಸು, “ಅಂಕಲ್‌ನ ಒಬ್ಬರನ್ನೇ ಬಿಡಬೇಡ, ಸಿಕ್ಕಿದ್ದೆಲ್ಲಾ ಜೇಬಲ್ಲಿ ಹಾಕ್ಕೊಳತ್ತೆ ಅದು, ಅದರ ಹಿಂದೇನೆ ಇರು ಅಂತ ಅಜ್ಜಿ ಹೇಳಿತ್ತು…” ಅಂತ ಸತ್ಯ ಬಯಲು ಮಾಡಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ಬೀಳ್ಕೊಡುಗೆ…: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ಬೆಂಗಳೂರಿನ ಧ್ಯಾನ ಹೆಚ್ಚುತ್ತಿದ್ದಂತೆ, ಹೊರಡುವ ದಿನ ಸಮೀಪಿಸುತ್ತಿದ್ದಂತೆ ಗೆಳೆಯರ ಜೊತೆ ನೆಂಟರಿಷ್ಟರ ಜೊತೆ ಕಲ್ಪನಾ ಸಂಭಾಷಣೆಗೆ ಪ್ರಾರಂಭವಾಯಿತು. ಒಂದು ಬೆಳಿಗ್ಗೆ ವಾಕಿಂಗ್ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದಾಗ, ಪರಿಚಿತ ಕಟ್ಟಡ ಸಂಕೀರ್ಣವೊಂದರ ಮುಂದೆ ನಿಂತಿದ್ದೆ. ಒಬ್ಬರು ಕೈ ಗಾಡಿಯಲ್ಲಿ ತಂದು ಟೀ, ಕೇಕ್, ಚಿಪ್ಸ್, ಸಿಗರೇಟ್ ಮಾರುತ್ತಿದ್ದರು. ಥೇಟ್ ನಮ್ಮ ಪೆಟ್ಟಿ ಅಂಗಡಿಯ ರೀತಿ, ದರ್ಶಿನಿ ಕೆಫೆಗಳ ರೀತಿ. ಇಂತಹದೊಂದು ದೃಶ್ಯವನ್ನೇ ನಾನು ಇಷ್ಟು ದಿನ ನೋಡಿರಲಿಲ್ಲ. ಇದು ಟಿಪಿಕಲ್ ಬೆಂಗಳೂರು ದೃಶ್ಯ. ಈ ದೃಶ್ಯವನ್ನು ನೋಡುತ್ತಾ ಸಂತೋಷ ಪಡುತ್ತಲೇ ನಾನು ನೆದರ್‌ಲ್ಯಾಂಡ್ಸ್‌ನಿಂದ ಬೀಳ್ಕೊಡುಗೆ ಪಡೆದು ಹೊರಡಬೇಕೆನ್ನಿಸಿತು.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಹದಿಮೂರನೆಯ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ