Advertisement

Category: ಸರಣಿ

ಮರೆಯಲಿ ಹೆಂಗೇ ಸೀನಿಯರ್ ಗಳ ಸಹಕಾರ?: ಬಸವನಗೌಡ ಹೆಬ್ಬಳಗೆರೆ ಸರಣಿ

ಗಣಿತ ವರ್ಕ್ ಮಾಡಲಿಕ್ಕೆ, ಚುನಾವಣೆ ಸಮಯದಲ್ಲಿ ಪ್ರಚಾರಕ್ಕೆಂದು ಬಂದವರ ಬಳಿ ‘ನಾನು ಹಂಚುತ್ತೇನೆ’ ಎಂದು ಹಿಂಬದಿ ಖಾಲಿ ಇರುತ್ತಿದ್ದ ಪಾಂಪ್ಲೀಟ್‌ಗಳನ್ನು ತೆಗೆದುಕೊಳ್ಳುತ್ತಿದ್ದೆ. ಅವನ್ನೆಲ್ಲಾ ಸೇರಿಸಿ ಒಂದು ಬುಕ್ ರೀತಿ ಮಾಡಿಕೊಂಡು ಖಾಲಿ ಬದಿಯ ಹಾಳೆಯನ್ನು ಬರೆಯಲಿಕ್ಕೆ ಬಳಸುತ್ತಿದ್ದೆ. ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಹತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ

Read More

ಮರೆಯಲಾಗದ ಮಾತೆ: ರಂಜಾನ್‌ ದರ್ಗಾ ಸರಣಿ

ಮಾತಾಜಿಯವರು ಸ್ಪಷ್ಟವಾದ ಧ್ವನಿಯಲ್ಲಿ ಹೇಳುತ್ತಿದ್ದರು. ಆಗ ಅವರು ಮಾತನಾಡುತ್ತಿದ್ದುದು ಮಹಿಳಾ ಜಗದ್ಗುರುಗಳ ವಿಚಾರವಾಗಿತ್ತು. ಅವರು ಹೇಳುವ ಶೈಲಿ ವೀರೋಚಿತವಾಗಿತ್ತು. ಯೌವನದ ಉತ್ಸಾಹದಿಂದ ಕೂಡಿದ ಸಾತ್ವಿಕ ಸೌಂದರ್ಯ ಮತ್ತು ಅಧ್ಯಾತ್ಮದ ಮೆರಗು ಮೇಳೈಸಿದ ಅವರ ಮಾತು, ಮಹಿಳೆಯ ಅಸ್ಮಿತೆಯ ಬಗೆಗಿನ ದೃಢನಿರ್ಧಾರದ ಧ್ವನಿಯಾಗಿತ್ತು. ಅವರ ಮಾತಿನಿಂದ ಸಭೆಯಲ್ಲಿ ವಿದ್ಯುತ್ ಸಂಚಾರವಾದಂತಾಯಿತು. ಮಹಿಳೆ ಜಗದ್ಗುರುವಾಗುವುದೆಂದರೇನು? ಅದು ಹೇಗೆ ಸಾಧ್ಯ?
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 82ನೇ ಕಂತು ನಿಮ್ಮ ಓದಿಗೆ

Read More

ನೆನಪಿನಲ್ಲಿ ಉಳಿಯುವ ಸಾಮಾನ್ಯರು: ಚಂದ್ರಮತಿ ಸೋಂದಾ ಸರಣಿ

ಒಮ್ಮೆ ವಾಕಿಂಗಿಗೆ ಹೋಗುವಾಗ ಸರ್ಕಲ್ಲಿನಲ್ಲಿ ಅವಳು ಸೊಪ್ಪು ಮಾರುವುದನ್ನು ಗಮನಿಸಿದೆ. ಒಂದು ದಿನ ಅವಳು ನನ್ನನ್ನು ಕರೆದು ʻಸೊಪ್ಪು ತಕಳಿ. ಈ ಸೊಪ್ಪು ಬಾರಿ ಚೆನಾಗದೆʼ ಅಂತ ಕೊಟ್ಟಳು. ಇನ್ನೂ ಮೊಬೈಲ್‌ ಕೈಯಲ್ಲಿ ಇಲ್ಲದ ಕಾಲ. ʻದುಡ್‌ ತಂದಿಲ್ಲʼ ಅಂದೆ. ʻನಾಳೆ ಕೊಡಿʼ ಅಂದಳು. ʻನಾಳೆ ಬರದಿದ್ದರೆ?ʼ ಅಂದಿದ್ದಕ್ಕೆ ʻಯಾವತ್ತೋ ಕೊಡಿ ಹೋಗಿʼ ಅಂದಳು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಇಪ್ಪತ್ತೆರಡನೆಯ ಕಂತು

Read More

ಬೆಂಗಳೂರು ಮತ್ತು ರಾಜಕಾರಣ: ಎಚ್. ಗೋಪಾಲಕೃಷ್ಣ ಸರಣಿ

ಜೇಪೀ ನಿಧಾನಕ್ಕೆ ತಮ್ಮ ಭಾಷಣ ಶುರು ಮಾಡಿ ಅಂದಿನ ಸರ್ಕಾರ ಹೇಗೆ ದೇಶವನ್ನು ಹಾಳು ಮಾಡಿದೆ ಎಂದು ವಿವರಿಸಿದರು. ಯುವಜನತೆ ಸಿಡಿದು ಬೀಳಬೇಕು. ನಮ್ಮ ಕಾನೂನು ಪರಿಪಾಲಕರು ನ್ಯಾಯಬದ್ಧವಲ್ಲದ ಆದೇಶ ಪಾಲಿಸಬಾರದು. ನಮ್ಮ ಸೈನಿಕರೂ ಸಹ ಅವರ ಬುಕ್ ಆಫ್ ಲಾ ಮೀರಿದ ಆದೇಶ ತಿರಸ್ಕರಿಸಬೇಕು….
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂವತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ

Read More

ಹೊಳೆಸಾಲಿಗೆ ಕರೆಂಟ್ ಶಾಕ್: ಸುಧಾ ಆಡುಕಳ ಅಂಕಣ

ಇದಾಗಿ ವಾರದೊಳಗೆ ನಡುರಾತ್ರಿಯಲ್ಲಿ ಪಕ್ಕದ ಮನೆಯಿಂದ ಅರಚಿದ ಶಬ್ದಕ್ಕೆ ನೀಲಿಯ ಮನೆಯವರೆಲ್ಲರೂ ಎಚ್ಚೆತ್ತರು. ಅಕ್ರಮವಾಗಿ ಎಳೆದ ಕರೆಂಟು ವೈಯರಿನ ಹೊರಗಿನ ಕವಚವನ್ನು ಇಲಿಯೊಂದು ಕತ್ತರಿಸಿಬಿಟ್ಟಿದ್ದರಿಂದ ನಡುರಾತ್ರಿಯಲ್ಲಿ ಸ್ವಿಚ್ ಹಾಕಲು ಕೈಹಾಕಿದ ನಾಗಿ ಶಾಕ್ ಹೊಡೆದು ಮಾರುದೂರ ಹೋಗಿ ಬಿದ್ದಿದ್ದಳು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಹದಿಮೂರನೆಯ ಕಂತು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ