Advertisement

Category: ಸರಣಿ

ಹಂಗೂ ಹಿಂಗೂ ತೇಜಸ್ವಿ ಇಂಗು ತಂದದ್ದು

ಈ ಮೂಡಿಗೆರೆ ಒಂದು ವಿಚಿತ್ರ ‘ಊರು ಮಾರಾಯರ್ರೆ’. ಇಂಥ ಮಾತಿನ ಶೈಲಿ ಗಮನಿಸಿ ಏನೋ ಆತ್ಮೀಯತೆ ಅನ್ನಿಸೊಲ್ವೆ. ಈ ಊರಿನ ಪೇಟೆ ಅಂಗಡಿಯವರ ರೀತಿನೇ ಹಾಗೆ. ಕಳೆದ ವರ್ಷ ನಮ್ಮ ತೋಟದಲ್ಲಿ ಭರ್ಜರಿ ಮಾವಿನಕಾಯಿ ದೊಡ್ಡ ಸೈಜಿನವು ಹಿಡಿದಿತ್ತು. ಆಪ್ತರಿಗೂ ಕೊಡಲಿಕ್ಕಾಗುತ್ತೆಂದು ಹೆಚ್ಚಿಗೆನೇ ಉಪ್ಪಿನಕಾಯಿ ಹಾಕಿದ್ದೆ. ಆಂಧ್ರ ಬಗೆಯಂತೆ. ಒಗ್ಗರಣೆ ಬೇಕೆಂದು ನನ್ನವರಿಗೆ ಹೇಳಿ ಇಂಗು ತರಿಸಿಕೊಂಡೆ. ಯಾಕೋ ಚೆನ್ನಾಗಿಲ್ಲ ಅನಿಸಿತ್ತು. ತೇಜಸ್ವಿ ಒಳ್ಳೆಯ ಇಂಗು ಬೇಕೆಂದದು ಒಂದೆರಡು ಅಂಗಡಿಯಲ್ಲಿ ಕೇಳಿದರು. ಆಗ ಸಿಗಲಿಲ್ಲವೆನ್ನಿ. ಆದರೆ ಕೆಲದಿನಗಳು ಕಳೆಯುವಷ್ಟರಲ್ಲಿ ಇಂಗಿನ ಸರಕೇ ಮನೆಗೆ ಬಂದು ಬಿದ್ದಿತ್ತು.

Read More

ಅರುಣ್ ಜೋಳದಕೂಡ್ಲಿಗಿ ಬರೆಯುವ ಹೊಸ ಸರಣಿ ‘ಗಂಟಿಚೋರರ ಕಥನಗಳು’

ಭಾರತದ ಕೃಷಿ ಮತ್ತು ವ್ಯವಸಾಯದ ಜತೆ ಬೆಸೆದುಕೊಂಡಿದ್ದ ಕುಶಲಕರ್ಮಿಗಳನ್ನೂ, ಅರಣ್ಯವಾಸಿ, ಅಲೆಮಾರಿ ಮತ್ತು ಆದಿವಾಸಿ ಸಮುದಾಯಗಳನ್ನು ನಿಯಂತ್ರಿಸಲು ಬ್ರಿಟಿಷ್ ಆಡಳಿತ ರೂಪಿಸಿದ ಕಾಯ್ದೆ ‘ಕ್ರಿಮಿನಲ್ ಟ್ರೈಬ್ಸ್ ಆಕ್ಟ್’. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕವೂ ಇದು ಮುಂದುವರೆಯಿತು. ಇದರಿಂದಾಗಿ ಅಲೆಮಾರಿ ಸಮುದಾಯಕ್ಕೆ ಸೇರಿದ ಗಂಟಿಚೋರರು ಹಾಗೂ ಅಂತಹುದೇ ಇತರ ಸಮುದಾಯದ ಜನರು ಪಡಿಪಾಟಲು ಅನುಭವಿಸಬೇಕಾಯಿತು.

Read More

ಮಕ್ಕಳಾಗದ ಗಂಡಸರ ದುಃಖ, ಫೋರ್ ವೀಲ್ ಡ್ರೈವಿಂಗ್ ಸಾಹಸ ಕ್ರೀಡೆ

ಆಸ್ಟ್ರೇಲಿಯಾದಲ್ಲಿ ಫೋರ್ ವೀಲ್ ಡ್ರೈವಿಂಗ್ ಕ್ಲಬ್ ಎನ್ನುವುದು ಬಹಳ ಹಳೆಯ ಕಲ್ಪನೆ. ಬ್ರಿಟಿಷರೊಡನೆ ಆ ಕಲ್ಪನೆ ಮತ್ತು ಹವ್ಯಾಸ ಈ ದೇಶಕ್ಕೆ ಆಮದಾಗಿ ಬಂದದ್ದು. ಒಂದು ಶತಮಾನಕ್ಕೂ ದೀರ್ಘ ಕಾಲ ಫೋರ್ ವೀಲ್ ಡ್ರೈವಿಂಗ್ ಹವ್ಯಾಸವು ಲಂಗುಲಗಾಮಿಲ್ಲದೆ ಬೇಕಾಬಿಟ್ಟಿ ನಡೆದಿತ್ತು. ಅದಕ್ಕೆ ಕಾನೂನಿನ ಹಿಡಿತವಾಗಲಿ, ಒಂದಷ್ಟು ಚೌಕಟ್ಟಾಗಲಿ ಇಲ್ಲದೇ ಇದ್ದಾಗ, ಪ್ರಕೃತಿಗೆ, ಜೀವಸಂಕುಲಕ್ಕೆ ಆದ ಹಾನಿಗೆ ಲೆಕ್ಕವಿರಲಿಲ್ಲ. -ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಪತ್ರ

Read More

ದಪ್ಪ ತುಂಡಿನ ಬಾಡಿನೆಸರು

ನಾವು ನಮ್ಮ ಬಳಿ ಕಳವಾಗುತ್ತಿರುವ ಹಣ, ವಸ್ತುಗಳ ವಿಷಯವನ್ನ ಕುತೂಹಲದಿಂದಲೂ ಬೇಸರದಿಂದಲೂ ಹೇಳಿಕೊಳ್ಳುತ್ತಿದ್ದೆವು.  ಅದನ್ನು ಕೇಳಿಸಿಕೊಳ್ಳುವ ಆತ ನಮ್ಮಂತೆಯೇ ಆಶ್ಚರ್ಯ ಚಕಿತನಾಗುತ್ತಿದ್ದ. ‘ಈ ದಿನ ಆಜಾಗ ಬೇಡ ಈ ಜಾಗದಲ್ಲಿ ಇಟ್ಟೋಗಿ’ ಎಂದು ಸಲಹೆ ಕೊಟ್ಟು ಜೋಪಾನವಾಗಿ ಕಾಲೇಜಿಗೆ ಕಳುಹಿಸುತ್ತಿದ್ದ. ಬಂದು ನೋಡಿದರೆ ಮತ್ತೆ ಕಳವು!ಒಂದು ದಿನ ಕಾಲೇಜು ಮುಗಿಸಿಕೊಂಡು ಮಧ್ಯಾಹ್ನ ಹಾಸ್ಟೆಲ್ಗೆ ಬಂದೆವು. – ಗುರುಪ್ರಸಾದ್ ಕಂಟಲಗೆರೆ ಬರಹ

Read More

ಸ್ವಾಯತ್ತತೆಯೆಡೆಗೆ ತುಡಿಯುವ ದಾಕ್ಷಾಯಿಣಿಯ ಪಾತ್ರ

ಸಂಸಾರಕ್ಕೆ ಯೋಗ್ಯವೆನಿಸುವ ಲಕ್ಷಣಗಳಾವುವೂ ಶಿವನಲ್ಲಿ ಇರುವಂತೆ ನಮಗೆ ಕಾಣಿಸುವುದಿಲ್ಲ. ಅವಳ ಅಪ್ಪನಾದ ದಕ್ಷನಿಗೂ ಹಾಗೆ ಕಂಡಿರಬೇಕು. ಇಲ್ಲಿ ನಾವು ಗಮನಿಸಬೇಕಾದ್ದು, ಶಿವನ ಅಲೆಮಾರಿತನ, ಒರಟುತನವು ‘ಗೃಹಸ್ಥ’ ನ ಲಕ್ಷಣಕ್ಕೆ ತೀರಾ ವಿರುದ್ಧವಾದುದು ಎನ್ನುವುದನ್ನು. ಲಹರಿಯಲ್ಲಿ ಯೋಚಿಸುತ್ತಾ ಹೋದರೆ, ಇದು ಹಲವು ಉತ್ತರಗಳನ್ನು ಮೇಲಿನ ಪ್ರಶ್ನೆಗಳಿಗೆ ಕೊಡುತ್ತಾ ಹೋಗುತ್ತದೆ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ