Advertisement

Category: ಸಾಹಿತ್ಯ

ಶ್ರೀ ಡಿ.ಎನ್. ಬರೆದ ಈ ಭಾನುವಾರದ ಕತೆ

ಹೋಗಿ ನೋಡಿ ಅಪ್ಪನೆಂದು ಗುರುತು ಹಿಡಿದ. ಆತನ ಮೇಲಿದ್ದ ಕೋಪ ಆರಿರಲಿಲ್ಲ. ಜೀವನವಿಡೀ ಬೇರೆಯವರ ಪಾಪ ಕಳೆಯಲು ದಾನಗಳು ತೆಗೆದುಕೊಂಡು ಜಪತಪಗಳಲ್ಲಿ ಕಾಲ ಕಳೆಯುತ್ತಿದ್ದ ಅಪ್ಪ, ತನ್ನ ಅಪರಕರ್ಮವೂ ಸರಿಯಾಗಿ ಆಗದೆ ಯಾವುದೋ ತಿಳಿಯದ ನಗರದಲ್ಲಿ ಅನಾಥ ಹೆಣದಂತೆ ಬೂದಿಯಾಗಿದ್ದ. ಯಾರದೋ ಸಾವಿಗೆ ಗರುಡ ಪುರಾಣ ಓದುತ್ತಿದ್ದ ಅಪ್ಪ ಸತ್ತಾಗ ಅವನಿಗಾಗಿ ಯಾರೂ ಅದನ್ನು ಓದದಂತೆ ರಮೇಶ ನೋಡಿಕೊಂಡ.
ಶ್ರೀ ಡಿ.ಎನ್. ಬರೆದ ಕತೆ “ಪಾಪ”

Read More

ದಡ ಮುಟ್ಟದ ದೋಣಿಗಳಲ್ಲಿ ಕೂತು…

ಒಂದಾದ ನಂತರ ಒಂದರಂತೆ ಮೂರು ಮಕ್ಕಳನ್ನು ಮಾಡಿಕೊಂಡು ನಂತರ ತಮ್ಮತಮ್ಮ ಕೆಲಸ, ಕಾರ್ಯಗಳ ಬಗ್ಗೆ ಗಮನ ಹರಿಸಬೇಕು ಎಂದು ಕೇವಲ ಒಂದು ದಿನದ ಹಿಂದೆ ಮಾತಾಡಿದ್ದಷ್ಟೇ ಅಲ್ಲ, ಮನೆಗೆ ಬಂದು ಸಹಾಯ ಮಾಡಬೇಕು ಎಂದು ನನ್ನನ್ನು ದುಂಬಾಲುಬಿದ್ದ ಅಪ್ಪಟ ಶ್ರೀಸಂಸಾರಿಯಂತೆ ಕಾಣುವ ವಿನಯ, ಅಲಿಶಾ ಜತೆ ನಿಜವಾಗಿಯೂ ಒಂದು ಬದ್ಧ ಸಂಬಂಧದಲ್ಲಿದ್ದಾನೆಯೇ?
ಗುರುಪ್ರಸಾದ್‌ ಕಾಗಿನೆಲೆ ಬರೆದ ನೀಳ್ಗತೆ “ಥ್ಯಾಂಕ್ಸ್‌ಗಿವಿಂಗ್”ನ ಆರನೆಯ ಕಂತು ನಿಮ್ಮ ಓದಿಗಾಗಿ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಂನಾಡಿಗಾ ನಾರಾಯಣ ಬರೆದ ಕತೆ

ಕಂತುಗಳನ್ನು ಸರಿಯಾಗಿ ಕಟ್ಟಲಿಲ್ಲವೆಂದು ಮನೆಯನ್ನು, ಕಾರನ್ನು ಮುಟ್ಟುಗೋಲು ಹಾಕಿಕೊಳ್ಳಲು ಬ್ಯಾಂಕಿನವರು ಬಂದಾಗ ಆಶ್ಚರ್ಯವೆಂಬಂತೆ ತಾನೇ ಮುಂದೆ ನಿಂತು ಅವನ್ನೆಲ್ಲಾ ಅವರಿಗೆ ಬಿಟ್ಟುಕೊಟ್ಟ. ಅಡ್ಡಬಂದ ಹೆಂಡತಿಗೆ, ‘ಇಲ್ಲಿಗೆ ಬರುವಾಗ ಏನನ್ನೂ ತಂದಿರಲಿಲ್ಲ, ಹೋಗುವಾಗಲೂ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ..
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಂನಾಡಿಗಾ ನಾರಾಯಣ ಬರೆದ ಕತೆ “ಜೀ ಗಾಂಧಿ” ನಿಮ್ಮ ಓದಿಗೆ

Read More

‘ವಾಟ್ ದ ಹೆಕ್’ ಅಮ್ಮಾ…

‘ನೀವೇ ಸರಿ, ಅರವಿಂದರಾಯರೇ. ಮಕ್ಕಳನ್ನು ಬಹಳ ಚೆನ್ನಾಗಿ ಬೆಳೆಸಿದ್ದೀರಿ’ ಇನ್ನೂ ಅವರ ಮಾತು ಮುಗಿದಿಲ್ಲ. ಎಲ್ಲಿಂದ ಬಂತೋ ಒಂದು ದೊಡ್ಡ ಅಲೆ, ಅಲ್ಲಿ ಕೂತಿದ್ದವರನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿಬಿಟ್ಟಿತು. ಕಣ್ಣು ಮುಚ್ಚಿ ಬಿಡುವುದರಲ್ಲಿ ಎಲ್ಲ ಮರಳು, ಎಲ್ಲೆಲ್ಲೂ ನೀರು. ಜನರ ಕೂಗು, ಹಾಹಾಕಾರ. ಸುಕನ್ಯ ಕಣ್ಣು ಬಿಟ್ಟಾಗ ಹತ್ತಿರ ಯಾರೂ ಕಾಣುತ್ತಿಲ್ಲ. ‘ವಿನೂ, ವಿಶೂ’ ಜೋರಾಗಿ ಕೂಗುತ್ತಾ ಇಡೀ ಸಮುದ್ರದ ದಡದಲ್ಲಿ ಹುಚ್ಚು ಹಿಡಿದಂತೆ ಓಡುತ್ತಿದ್ದಾಳೆ.
ಗುರುಪ್ರಸಾದ್‌ ಕಾಗಿನೆಲೆ ಬರೆದ ನೀಳ್ಗತೆಯ ಕಂತು

Read More

ಎ. ಬಿ. ಪಚ್ಚು ಬರೆದ ಈ ಭಾನುವಾರದ ಕತೆ

ಆ ರಾತ್ರಿ ಯಕ್ಷಗಾನ ಎಲ್ಲಾ ನೋಡಿ ಮುಗಿದು ಬೆಳಿಗ್ಗೆ ಮನೆಗೆ ತಲುಪಿದೆ. ಕಣ್ಣೀರಿನ ಹೊರತು ಆ ದಿನ ಸಮಜಾಯಿಷಿ ಕೊಡಲು ನನ್ನಲ್ಲಿ ಯಾವ ಮಾತುಗಳೂ ಇರಲಿಲ್ಲ. ನಿಜ ನಾನೇನು ತಪ್ಪು ಮಾಡಿರಲಿಲ್ಲ, ಆದರೆ ಯಾಕೋ ನನಗೆ ಅಮ್ಮನನ್ನು ಒಬ್ಬಳನ್ನೇ ಬಿಟ್ಟು ಹೋದ ಆ ತಪ್ಪಿತಸ್ಥ ಭಾವ ಆ ದಿನದಿಂದ ಬಹಳವಾಗಿ ಕಾಡಿತು ಮಹೇಶ. ಆ ನೋವಿನಿಂದಾಗಿ ಆ ದಿನದಿಂದ ನಾನು ಎಂದಿಗೂ ಯಕ್ಷಗಾನದತ್ತ ಕಣ್ಣು ಹಾಯಿಸಲೇ ಇಲ್ಲ.
ಎ.ಬಿ. ಪಚ್ಚು ಬರೆದ ಕತೆ “ಮೈಸಾಸುರ”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ