Advertisement

Category: ಅಂಕಣ

ನವರಾತ್ರಿಗೆ ಒಂದಿಷ್ಟು ಆಸ್ಟ್ರೇಲಿಯಾ ಕಥೆಗಳು: ಡಾ. ವಿನತೆ ಶರ್ಮಾ ಅಂಕಣ

ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರಿದ್ದು ಅವರು ಹಿಂದೂ ಧರ್ಮವನ್ನು ಆಚರಿಸುವುದಾಗಿ ಜನಗಣತಿಯಲ್ಲಿ ಹೇಳಿದ್ದರೆ, ಅವರ ಹಕ್ಕುಮಾನ್ಯತೆಯನ್ನು ಪರಿಗಣಿಸಿ ದೇವಸ್ಥಾನಕ್ಕೆ ಒಪ್ಪಿಗೆ ಕೊಡಬಹುದು. ಇದಾದ ಮೇಲೆ ದೇವಾಲಯ ಕಟ್ಟಡದ ನಿರ್ಮಾಣಕ್ಕೆ ಹಣ ಹೊಂದಿಸಬೇಕು. ದೇವಸ್ಥಾನ ಸ್ಥಾಪನೆಯ ಕನಸು ಕಂಡವರು ಹಗಲುರಾತ್ರಿ ಶ್ರಮವಹಿಸಿ ನಿಧಿಸಂಗ್ರಹಣೆ ಮಾಡಬೇಕು. ಕೆಲವರಿಗಂತೂ ಇದೇ ಅವರ ನಿತ್ಯಜೀವನವಾಗುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಗೂಗಲ್ ಜಮಾನಾದಲ್ಲಿ ಗುರು ಯಾರು..!: ಡಾ. ಎಲ್.ಜಿ. ಮೀರಾ ಅಂಕಣ

ಏನು ಕಲಿಯಬೇಕು ಎಂಬುದನ್ನು ಮಾತ್ರವಲ್ಲ ಅದನ್ನು ಏಕೆ ಮತ್ತು ಹೇಗೆ ಕಲಿಯಬೇಕು ಎಂಬುದನ್ನು ಕೂಡ ವಿದ್ಯಾರ್ಥಿಗಳಿಗೆ ಕಲಿಸಬಲ್ಲರು. ತಾವು ಕಲಿಸುತ್ತಿರುವ ಇಂಗ್ಲಿಷ್, ವಿಜ್ಞಾನ ಅಥವಾ ಸಮಾಜ ಪಾಠವು ತಾವು ಹೇಳುತ್ತಿರುವ ಭಾಷೆಯಲ್ಲಿ ಮಕ್ಕಳಿಗೆ ಅರ್ಥ ಆಗುತ್ತಿಲ್ಲ ಎಂದು ಅನ್ನಿಸಿದಾಗ ತಕ್ಷಣ ಅದನ್ನು ಮಕ್ಕಳ ಮಾತೃಭಾಷೆಯಲ್ಲಿ ಹೇಳಿ ಮಕ್ಕಳಿಗೆ ಅದನ್ನು ತಲುಪಿಸಬಲ್ಲರು. ಶಿಕ್ಷಕ ಅಂದರೆ ಎರಡನೆಯ ಪೋಷಕ ಎಂಬ ಮಾತಿದೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂರನೆಯ ಬರಹ

Read More

ಜೇನ್ನೊಣದ ಬಿಲಿಯನ್ ಡಾಲರ್ ಕೊಡುಗೆ: ಡಾ. ವಿನತೆ ಶರ್ಮಾ ಅಂಕಣ

ನಮ್ಮ ಹವ್ಯಾಸಿ ಕೈತೋಟ ಸದಸ್ಯರಲ್ಲಿ ಒಂದು ನಿಯಮವಿದೆ – ತಾವು ಬೆಳೆಯುವ ತರಕಾರಿ ಹಣ್ಣುಗಳಿಗೆ ಯಾವುದೇ ರಾಸಾಯನಿಕ ಪದಾರ್ಥಗಳನ್ನು ಬಳಸುವಂತಿಲ್ಲ. ಹಾಗೇನಾದರೂ ಬಳಸಿದರೆ ಅಂತಹ ಆಹಾರವನ್ನು ಸದಸ್ಯರಲ್ಲಿ ಹಂಚಿಕೊಳ್ಳಬಾರದು. ಈ ನಿಯಮದಿಂದ ಸದಸ್ಯರಲ್ಲಿ ಪ್ರಕೃತಿಯ ಬಗ್ಗೆ ಕಾಳಜಿ ಹೆಚ್ಚುತ್ತದೆ. ತಮ್ಮ ತರಕಾರಿ ಹಣ್ಣು ಗಿಡಗಳನ್ನು ಕ್ರಿಮಿಕೀಟಗಳು ಭಾದಿಸುತ್ತಿವೆ ಎಂದಾದರೆ ಅವನ್ನು ತೊಲಗಿಸಲು ಸದಸ್ಯರು ತಮಗೆ ಗೊತ್ತಿರುವ ನೈಸರ್ಗಿಕ ವಿಧಾನಗಳನ್ನು ಸೂಚಿಸುತ್ತಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಗಾರ್ಮೆಂಟ್ ಗಾಮಿನಿಯರು, ಕಿಟ್ಟಿಪಾರ್ಟಿ ಕಿನ್ನರಿಯರು: ಡಾ. ಎಲ್.ಜಿ. ಮೀರಾ ಅಂಕಣ

ಅದೃಷ್ಟದ ಮೇಲೆ ಯಾವ ಭರವಸೆಯನ್ನೂ ಇಟ್ಟುಕೊಳ್ಳದೆ `ಮನುಷ್ಯ ತನ್ನ ಅದೃಷ್ಟವನ್ನು ತಾನೇ ರೂಪಿಸಿಕೊಳ್ಳುತ್ತಾನೆʼ ಎನ್ನುವ ವಿಚಾರವಾದಿಗಳೂ ಇದ್ದಾರಲ್ಲವೇ? ಮನುಷ್ಯನ ಯಶಸ್ಸಿನಲ್ಲಿ ಪುರುಷಪ್ರಯತ್ನ, ಪರಿಶ್ರಮಗಳ ಪಾಲು ಇರುವುದು ನಿಜವಾದರೂ, ಒಟ್ಟು ಬದುಕು ಕೊನೆತನಕ ನೆಮ್ಮದಿಯಿಂದ ಸುಖಮಯವಾಗಿ ದೊಡ್ಡ ಕೊರಗಿಲ್ಲದೆ ಕಳೆಯುವುದು ಮನುಷ್ಯನ ಕೈಯಲ್ಲಿದೆಯೇ? “ಅಯ್ಯೋ, ತನ್ನ ನಾಳೆ ಹೇಗಿರುತ್ತದೆ ಎಂದು ಗೊತ್ತಿರದ ಮನುಷ್ಯನ ದುರ್ವಿಧಿಯೇ!!!..”
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಎರಡನೆಯ ಬರಹ

Read More

ಹೊಳೆಸಾಲಿನ ಮೊದಲ ಗ್ಯಾದರಿಂಗ್: ಸುಧಾ ಆಡುಕಳ ಅಂಕಣ

ಮರುದಿನ ಬೆಳಗಾಗುವ ಹೊತ್ತಿಗೆ ಮೈಕ್ ಮತ್ತದೇ ಮೂಷಿಕವಾಹನ ಹಾಡನ್ನು ಇನ್ನೂ ಮಧುರವಾಗಿ ಹಾಡತೊಡಗಿತು. ಯುವಕರ ದಂಡು ಒಂದಾಗಿ ಫಂಡಿನ ಬಂಟರನ್ನೆಲ್ಲ ಹೆಡೆಮುರಿ ಕಟ್ಟಿ ಒಂದು ದಿನದ ಮಟ್ಟಿಗೆ ಸದಾನಂದ ಹೆಗಡೆಯವರ ಉಪ್ಪರಿಗೆಯಲ್ಲಿ ಕೂಡಿಹಾಕಿತು. ಮಾಸ್ರ‍್ರ ಅಣತಿಯಂತೆ ಹೊಳೆಸಾಲಿನ ಲೈನ್‌ಮನ್ ರಾಮಪ್ಪ ಯಾರೂ ಕರೆಂಟಿನ ಡಬ್ಬಕ್ಕೆ ಕೈ ಹಾಕದಂತೆ ಟ್ರಾನ್ಸಫರ್ ಪೆಟ್ಟಿಗೆಯ ಹತ್ತಿರವೇ ಕಾವಲು ನಿಂತ.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ