‘ಒಂದು ಅಂಕ ಮುಗಿದು’ ಧ್ಯಾನಿಸುತ್ತಾ….
‘ತುಂಬೆಗಿಡ ಮತ್ತು ಹುಡುಗಿ’ ಸತ್ತು ಮಣ್ಣಾದ ಹುಡುಗಿಯೊಬ್ಬಳ ಸಮಾಧಿಮೇಲೆ ನೆಟ್ಟ ತುಂಬೆ ಗಿಡದ ವಿಷಯವಿರುವ ಕವಿತೆ. ಬದುಕಿನ ಉತ್ತರಗಳ ಹಂಗು ಹುಡುಗಿಗೂ, ತುಂಬೆಗಿಡಕ್ಕೂ ಇಲ್ಲ. ಬದುಕಿನ ನಶ್ವರತೆಗಳು, ಹುಟ್ಟು, ಸಾವಿನ ಕುರಿತು ಏಳುವ ಜಿಜ್ಞಾಸೆಗಳು ಕವಯತ್ರಿಯ ಭಾವಾತ್ಮಕತೆಯ ತೀವ್ರತರ ಹುಡುಕಾಟವನ್ನು ದರ್ಶಿಸುತ್ತವೆ. ‘ನೀನೆ ಒಂದು ಅಪೂರ್ಣ ಚಿತ್ರ’ ಕವಿತೆಯೂ ಬದುಕಿನ ಎಲ್ಲಾ ಕ್ಷಣಗಳಿಗೆ ಮುಖಾಮುಖಿಯಾಗಿ ಮುಪ್ಪಿನಲ್ಲಿ ಹಿಂದಿನ ಪುಟಗಳನ್ನು ತಿರುವಿಹಾಕುವ ವ್ಯಕ್ತಿಯೊಬ್ಬನ ಕುರಿತು ಬರೆದ ಕವಿತೆ.
ಅಭಿಷೇಕ್ ವೈ.ಎಸ್. ಬರೆಯುವ ಅಂಕಣ “ಕಾವ್ಯದ ಹೊಸ ಕಾಲ”