ಕೆಂಪು ಕಾರು: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ
ಹೊಸ ಕಾರ್ ಬುಕ್ ಮಾಡಿ ಈ ಕಾರನ್ನು ಎಕ್ಸ್ಚೇಂಜ್‌ನಲ್ಲಿ ಕೊಡುವ ಮಾತುಕತೆ ಆದ ನಂತರ ಮೊದಲಿನ ಲವಲವಿಕೆಯನ್ನು ಈ ಕಾರು ಕಳೆದುಕೊಂಡು ಬಿಟ್ಟಿತು ಅಂತ ಯಾಕೋ ನನ್ನ ಮನಸ್ಸಿಗೆ ತೀವ್ರವಾಗಿ ಅನ್ನಿಸಿತು. ಮರುದಿನ ಕಾರ್ ಸ್ಟಾರ್ಟ್ ಮಾಡುವಾಗ ಇಂಜಿನ್ ಶಬ್ಧ ಬೇರೆಯೇ ತರಹ ಕೇಳಿಸಿದ ಹಾಗಾಯ್ತು. ಏನೋ ಸಮಸ್ಯೆ ಆಗಿದೆ ತೋರಿಸಿಕೊಂಡು ಬನ್ನಿ ಅಂದ ಹೆಂಡತಿ ಮಾತಿಗೆ ಇಲ್ಲ ಅನ್ನಲಾಗದೆ ಸುರತ್ಕಲ್ ಪೇಟೆಗೆ ಒಂದು ಸುತ್ತು ಹಾಕಿ ಬಂದು ಏನಾಗಿಲ್ಲ ಅಂತೆ, ಅಂತ ಸುಳ್ಳು ಹೇಳಿದ್ದರ ಹಿಂದೆ ಕಾರ್ ಮೇಲೆ ನನಗಿದ್ದ ನಂಬಿಕೆಯೇ ಕಾರಣವಾಗಿತ್ತು.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಯ ಏಳನೆಯ ಬರಹ
