Advertisement

Category: ದಿನದ ಪುಸ್ತಕ

ಕಾಲನ ಮಹಿಮೆಗೆ ಶರಣಾದ ಕತೆಗಳ ಗುಚ್ಛ

ಮಲೆನಾಡಿನ ಮಡಿಲಲ್ಲಿರುವ ಸಕ್ರೆಬೈಲಿನಲ್ಲಿ ಬಹುತೇಕ ನಡೆಯುವ ಕತೆಗಳು ಮನುಷ್ಯ ಸಂಬಂಧಗಳಲ್ಲಿನ ತಾಕಲಾಟಗಳನ್ನು ಬಿಂಬಿಸುತ್ತವೆ. ಸಮಾಜದ ಅಧೋಮುಖಿ ಬೆಳವಣಿಗೆಗಳನ್ನು, ಸೋಗಲಾಡಿತನವನ್ನು, ಮುಖವಾಡದ ಹಂಗನ್ನು, ಸುಖದ ಹಪಾಹಪಿಯನ್ನು, ಆಧುನಿಕತೆ ತಂದೊಡ್ಡಿರುವ ಅಪಾಯಗಳನ್ನು, ವ್ಯಕ್ತಿತ್ವದ ವಿಕಾಸವನ್ನು, ಬದುಕಿನ ಸಂಕೀರ್ಣತೆಗಳನ್ನು ಕತೆಗಳು ಹದವಾಗಿ ಮೈಗೂಡಿಸಿಕೊಂಡು ಬೆಳೆದಿವೆ.
ಅಲಕಾ ಕಟ್ಟೆಮನೆಯವರ ʻಹೊರಳು ಹಾದಿಯ ನೋಟʼ ಕಥಾಸಂಕಲನದ ಕುರಿತು ನಿವೇದಿತಾ ಎಚ್. ಬರಹ

Read More

ಮುಸ್ಲಿಮರ ಆತಂಕ ಮತ್ತು ಅನಿಶ್ಚಿತ ಭವಿಷ್ಯ

ಗಜಾಲಾ ವಹಾಬ್ ಬರೆದ ಈ ಪುಸ್ತಕದಲ್ಲಿ ಚಿಂತನಶೀಲ ಬರಹಗಳಿವೆ.  ಇಸ್ಲಾಮಿನ ಧಾರ್ಮಿಕ ರಚನೆ-ನೀತಿನಿಯಮಗಳ ಇತಿಹಾಸವನ್ನು ಆಳವಾಗಿ ಶೋಧಿಸುತ್ತ ಪ್ರವಾದಿಯವರ ಮರಣಾನಂತರ ಖಲೀಫರ ಕಾಲದಿಂದ ಧಾರ್ಮಿಕ ಏಕಸ್ವಾಮ್ಯಕ್ಕಾಗಿ   ಶಿಯಾ ಸುನ್ನಿಗಳ ನಡುವಿನ ಮತಬೇಧಗಳು, ಕುಲೀನ ಆಶ್ರಫ್, ಸೈಯದ್ ಮತ್ತು ಪಠಾಣರ ನಡುವಿನ ಶ್ರೇಣೀಕರಣಗಳು ಮುಸ್ಲಿಮ್ ಸಮಾಜವನ್ನು ಒಳಗಿನಿಂದಲೇ ಹೇಗೆ ಶಿಥಿಲಗೊಳಿಸಿದವು ಎಂದು ದಾಖಲಿಸುತ್ತಾರೆ. ಡಾ. ಎಸ್. ಸಿರಾಜ್ ಅಹ್ಮದ್‍ ಲೇಖನ ಇಲ್ಲಿದೆ. 

Read More

ದೇವಕಿ ಜೈನ್ ಆತ್ಮಕತೆಯ ಕೆಲವು ಪುಟಗಳು

ಮೈಸೂರು ನಾಗರಿಕ ಸೇವೆಯ ಪ್ರೊಬೇಷನರಿ ಕಲಿಕೆಯಲಿದ್ದಾಗ, ಅಪ್ಪ ಕುದುರೆ ಸವಾರಿ ಕಲಿತಿದ್ದರು. ಈ ಕತೆಯನ್ನು ಹೇಳುತ್ತ ಹೇಳುತ್ತ ಅಮ್ಮ ನಗುತ್ತಿದ್ದಳು. ‘ನೋಡು, ನಾನು ಅವರನ್ನು ಮೊದಲು ಹರಿವಾಣದಲ್ಲಿ ತುಂಬಿದ್ದ ನೀರಿನಲ್ಲಿ ನೋಡಿದ್ದೆ’. ಸಾಮಾನ್ಯವಾಗಿ ಆ ಕಾಲದಲ್ಲಿ ಸಾಂಪ್ರದಾಯಿಕ ಮದುವೆಗಳಲ್ಲಿ ಸಂಬಂಧಗಳು ಮಧುರವಾಗಿರುವುದು ಅಪರೂಪ. ಆದರೆ ನನ್ನ ಅಪ್ಪ ಅಮ್ಮನ ಸಂಬಂಧ ಬಹಳ ಮಧುರವಾಗಿ ಆರಂಭವಾಗಿ, ಅವರ ಬದುಕಿನುದ್ದಕ್ಕೂ ಮಧುರವಾಗಿಯೇ ಸಾಗಿತು. ದೇವಕಿ ಜೈನ್ ಅವರ ಆತ್ಮಕತೆ ‘ದ ಬ್ರಾಸ್ ನೋಟ್‍ ಬುಕ್’ ಅನ್ನು ಕೋಡಿಬೆಟ್ಟು ರಾಜಲಕ್ಷ್ಮಿ ‘ಹಿತ್ತಾಳೆ ಬಣ್ಣದ ಪುಸ್ತಕ’ ಎಂಬ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದು, ಆ ಪುಸ್ತಕದ ಕೆಲವು ಪುಟಗಳು ಇಲ್ಲಿವೆ.

Read More

ಆನೆಗಳ ಮನೋಲೋಕವನ್ನು ಸೆರೆಹಿಡಿಯುವ ವಿಸ್ಮಯಗಳು

ಈ ಕೃತಿಯಲ್ಲಿ’ರಾಜನ ಸಿಟ್ಟಿಗೆ ಪಟ್ಟದಾನೆಗಳು ಬಲಿ’ ಎಂಬ ಬರಹವಂತೂ ನನ್ನನ್ನು ಸೂಜಿಗಲ್ಲಿನಂತೆ ಹಿಡಿದಿಟ್ಟಿತು.  ಪಾಕಿಸ್ತಾನದ ಮೃಗಾಲಯವೊಂದರಲ್ಲಿದ್ದ ಆನೆಯನ್ನು ಆನ್ಲೈನ್ ಅಭಿಯಾನ ಮಾಡಿ ಬಿಡಿಸಿದ್ದು,  ನಂತರ ಬಿಡುಗಡೆಗೊಂಡ ಕಾವಾನನ್ ಅನ್ನುವ ಆನೆ ಕಾಂಬೋಡಿಯಾದ ಆನೆಗಳ ಜೊತೆಗೆ ಸೊಂಡಿಲು ತಾಗಿಸಿ ಹರ್ಷ ವ್ಯಕ್ತಪಡಿಸಿದ್ದು ಇವೆಲ್ಲವೂ ಭಾವುಕ ಆನೆಗಳ ಮನೋಲೋಕವನ್ನೆ ಪರಿಚಯಿಸುತ್ತವೆ.   ಆನೆಗಳೇ ಮನುಷ್ಯರನ್ನು ಹೆಚ್ಚಾಗಿ ಹಚ್ಚಿಕೊಳ್ಳುತ್ತವೆ. 
ಐತಿಚಂಡ ರಮೇಶ್ ಉತ್ತಪ್ಪರ ‘ಆನೆ ಲೋಕದ ವಿಸ್ಮಯ’ ಕೃತಿಯ ಕುರಿತು ಸುಮಾವೀಣಾ ಬರಹ

Read More

ಪೂರ್ವಕ್ಕೆ ಒಂದು ಅಪೂರ್ವ ಪಯಣ

ನಿಡಿತವಾದ ಕತೆಯ ಹಂದರವಿರುವ ಈ ಕೃತಿಯು ಒಂದು ತಾತ್ವಿಕ ಪ್ರಬಂಧದ ಹಾಗೆಯೆ ಇದೆ. ಅದು ಎತ್ತುವ ಬಹುಮುಖ್ಯ ಪ್ರಶ್ನೆಗಳು ಚರಿತ್ರೆ, ಬರಹ, ಆತ್ಮ ಜಿಜ್ಞಾಸೆ ಇವುಗಳಿಗೆ ಸಂಬಂಧಪಟ್ಟಿವೆ. ಸಂಘ, ಪಯಣ ಇವೆಲ್ಲವು ನಾವು ಕಟ್ಟಿಕೊಳ್ಳುವ ರಚನೆಗಳಲ್ಲವೆ? ಎಲ್ಲರಿಗೂ ಸ್ವಂತದ ಉದ್ದೇಶವಿರುವುದಾದರೆ ಪಯಣಕ್ಕೆ ಇರುವ ಉದ್ದೇಶವೇನು? ಸಂಘವೆಂದರೆ ಏನು? ಕಟ್ಟಳೆಗಳು ಹೇಗೆ ರಚನೆಯಾಗುತ್ತವೆ? ನಿರೂಪಕನು ಸಂಘದ ನಿಯಮಗಳನ್ನು ಮುರಿದರೂ ಅವನಿಗೆ ಶಿಕ್ಷೆ ಇಲ್ಲ. ಅವನು ಹೇಳಲು ಹೊರಟಿರುವ ಕತೆಗೆ ಎಷ್ಟೊಂದು ಎಳೆಗಳಿವೆಯಲ್ಲ?
ಕೆ. ಪ್ರಭಾಕರನ್‌ ಅನುವಾದಿಸಿದ ಜರ್ಮನಿಯ ಹರ್ಮನ್‌ ಹೇಸ್‌ ಬರೆದ ಕಾದಂಬರಿ ‘ಪೂರ್ವದೆಡೆಗಿನ ಪಯಣ’ ಕೃತಿಗೆ ರಾಜೇಂದ್ರ ಚೆನ್ನಿ ಬರೆದ ಮುನ್ನುಡಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ