Advertisement

Category: ವ್ಯಕ್ತಿ ವಿಶೇಷ

ಅಮೃತಾ ಪ್ರೀತಮ್; ಕೇವಲ ಲೇಖಕಿಯಲ್ಲ, ಒಂದು ಕ್ರಾಂತಿ: ರೇಣುಕಾ ನಿಡಗುಂದಿ ಬರಹ

ಮಕ್ಕಳನ್ನು, ಅಮೃತಾರನ್ನು ಸ್ಕೂಟರಿನಲ್ಲಿ ಕೂರಿಸಿ ಓಡಿಸಿದ್ದಕ್ಕೆ ಚಲಾನ್ ಆಗಿ ಅನೇಕ ಬಾರಿ ದಂಡ ತೆತ್ತುಬರುತ್ತಿದ್ದರು ಇಮರೋಜ್. ಅದಕ್ಕೆ ಯೋಚಿಸಿ ಇಬ್ಬರೂ ಹಣ ಕೂಡಿಸಿ ಅಮೃತಾ ಐದು ಸಾವಿರ, ಇಮರೋಜ್ ಐದು ಸಾವಿರ ಸೇರಿಸಿ ಅರವತ್ತರ ದಶಕದಲ್ಲಿ ಫಿಯೆಟ್ ಕಾರು ಕೊಂಡರಂತೆ. ಹೀಗೆ ಬದುಕಿನುದ್ದಕ್ಕೂ ಇಬ್ಬರೂ ಪ್ರತಿಯೊಂದನ್ನೂ ಸಮಭಾವದಿಂದ ಹಂಚಿಕೊಂಡು ಬಾಳಿದ್ದಕ್ಕೆ ನಾಲ್ಕು ದಶಕಗಳು ನಾಲ್ಕು ದಿನಗಳಂತೆ ಕಳೆದುಹೋದವು – ಎನ್ನುತ್ತಾರೆ ಇಮರೋಜ್.
ಪಂಜಾಬಿನ ಖ್ಯಾತ ಕವಯತಿ ಅಮೃತಾ ಪ್ರೀತಂ ಹುಟ್ಟುಹಬ್ಬ ಇಂದು. ಅವರ ಸಂಗಾತಿ ಇಮ್ರೋಜ್‌ರ ಕಣ್ಣುಗಳಲ್ಲಿ ಅಮೃತಾರ ಬದುಕು ಹೇಗಿತ್ತು ಎಂಬುದರ ಕುರಿತು ರೇಣುಕಾ ನಿಡಗುಂದಿ ಬರಹ ನಿಮ್ಮ ಓದಿಗೆ

Read More

ತಿರುವುಮುರುವಿನ ಹಾದಿಯಲ್ಲಿ….: ಜುಲೇಖಾ ಬೇಗಂ ಜೀವನ ವೃತ್ತಾಂತ

ನಾನು ಕಲಾವಿದೆ ಎಂಬುದು ಅವರಿಗೂ ತಿಳಿದಿರದ ವಿಷಯವೇನಲ್ಲ. ನನ್ನ ಬಗ್ಗೆ ಪೂರ್ತಿಯಾಗಿ ವಿಚಾರಿಸಿಕೊಂಡೇ ಬಂದಿದ್ದರು. ನನ್ನೊಳಗಿನ ಕಲೆಗೆ ಅವಮಾನ ಮಾಡಬಾರದೆಂದೂ ಹಾಗೇ ಅದನ್ನು ಪೋಷಿಸಬೇಕೆಂದು ಕಿವಿಮಾತೇನೊ ಹೇಳಿದರು. ಹೇಳಿದ ಮಾತು ಕಿವಿಯ ಮೇಲೆ ಬೀಳಲೇ ಇಲ್ಲ! ಆಗುವುದಿಲ್ಲ ಎಂದು ಮುಖಭಂಗಿಯಲ್ಲೇ ಕೂತಿದ್ದೆ. ಆಗುಹೋಗುಗಳನ್ನು ನೋಡುತ್ತಿದ್ದ ಅಪ್ಪ, ‘ಏನ್ ಮಾತಾಡ್ತೀಯೋ, ಮನ್ಷನೇನೊ ನೀನು? ನನ್ ಮಗ್ಳು ಏನ್ ಹೇಳ್ತಾ ಅದಾಳು!
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಇಪ್ಪತ್ಮೂರನೆಯ ಕಂತು

Read More

ಆಗಿಹೋಯಿತು ನನ್ನ ಮದುವೆ: ಜುಲೇಖಾ ಬೇಗಂ ಜೀವನ ವೃತ್ತಾಂತ

ಹಾಂ, ನಾನು ಕೊಪ್ಪಳದಲ್ಲಿರುವ ಸುದ್ದಿ ನನ್ನ ಸೋದರಮಾವ ಅಂದರೆ ತಾಯಿಯವರ ಅಣ್ಣನಿಗೆ ತಿಳಿಯಿತು. ಅವ್ವ ಸೋದರಮಾವನಿಗೆ ಪತ್ರ ಬರೆದಿದ್ದಳಂತೆ. ಅವ್ವ ನೀಡಿದ ವಿಳಾಸಕ್ಕೆ ಸರಿಯಾಗಿ ತಲುಪಿದ್ದರು. ಅವರ ಏಕೈಕ ಮಗನಿಗೆ ನನ್ನ ಕೊಟ್ಟು ಮದುವೆ ಮಾಡುವುದೆಂದು ಯೋಚಿಸಿದ್ದರು. ನನ್ನ ವಯಸ್ಸು ಮತ್ತವನ ವಯಸ್ಸು ಹೊಂದುತ್ತಿತ್ತೆಂದು, ಜೋಡಿ ಚೆನ್ನಾಗಿರುತ್ತದೆಂದು ಅವ್ವ ಮತ್ತು ಮಾವ ಮಾತಾಡಿಕೊಂಡಿದ್ದರು. ಮದುವೆ ಮಾಡುವ ಸಲುವಾಗಿಯೇ ನನ್ನನ್ನು ಕರೆದುಕೊಂಡು ಹೋದರು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಇಪ್ಪತ್ತೆರಡನೆಯ ಕಂತು

Read More

ಮತ್ತೊಮ್ಮೆ ಒಡೆಯಿತು ಹೃದಯ…: ಜುಲೇಖಾ ಬೇಗಂ ಜೀವನ ವೃತ್ತಾಂತ

ಅವರೇನೊ ಸುಲಭವಾಗಿ ಹೊರಟುಬಿಟ್ಟರು. ಏಕಾಂಗಿಯಾದ ನನ್ನ ಪಾಡು? ಗೋವಿಂದ ರೆಡ್ಡಿ ಅವರ ಪ್ರೀತಿಯ ಸುಳಿಯಲ್ಲಿ ಪೂರ್ತಿಯಾಗಿ ಸಿಲುಕಿಬಿಟ್ಟಿದ್ದೆ. ಅವರಿಲ್ಲದ ನಾನು ಒಂಟಿಯಾದಂತೆನಿಸಿತು. ಮದುವೆಯಾದರೆ ಇವರನ್ನೇ ಎಂದು ಮನಸ್ಸು ನಿರ್ಧರಿಸಿತ್ತಲ್ಲಾ! ಕೇಳಿ ಬರಲು ಹೋಗಿದ್ದು. ಗುರುಗಳು ಒಪ್ಪಿಗೆ ನೀಡುತ್ತಾರೆ. ಇಲ್ಲಾ, ಇವರೇ ಒಪ್ಪಿಗೆ ನೀಡುವಂತೆ ಕೇಳಿಕೊಳ್ಳುತ್ತಾರೆ. ಹೀಗೆ ಕಾದು ಬೆಂಗಾಡಾಗಿದ್ದ ಮನಸ್ಸನ್ನು ಸಮಾಧಾನಿಸುತ್ತಲೇ ಇದ್ದೆ.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಇಪ್ಪತ್ತೊಂದನೆಯ ಕಂತು

Read More

ಪ್ರೀತಿಯ ಸುಳಿಯಲ್ಲಿ ಸಿಲುಕಿ…: ಜುಲೇಖಾ ಬೇಗಂ ಜೀವನ ವೃತ್ತಾಂತ

ಅಂದಹಾಗೆ ಅವಳು ಬೇರಾರೂ ಅಲ್ಲ. ಕಂಪೆನಿಯ ಮಾಲೀಕರಾದ ಮಾಂಡ್ರೆ ಕವಿಗಳ ಮಗಳು, ಭಾಗೀರಥಿಯನ್ನೇ. ನಾನು ಹೌಹಾರಿಹೋದೆ. ಅವನೂ ಏನೂ ಸಾಮಾನ್ಯನಲ್ಲ; ಕಂಪೆನಿಯಲ್ಲಿ ಮಾಂಡ್ರೆ ಕವಿಗಳಿಗೆ ಬಲಗೈ ಆಗಿದ್ದ. ಏನೇ ಹೊಸ ನಾಟಕಗಳ ಸ್ಕ್ರಿಪ್ಟ್ ಬರೆಯುವುದಕ್ಕೆ ಜಕ್ಲಿ ಈಶ್ವರನೇ ಬರಬೇಕಿತ್ತು. ಅಕ್ಷರವಂತೂ ಅದ್ಭುತವಾಗಿತ್ತು. ‘ಕವಿಗಳಿಗೆ ವಿಷಯ ಗೊತ್ತಾ?’ ಎಂದು ಕೇಳಿದೆ. ಜಕ್ಲಿ ಈಶ್ವರ ‘ಇಲ್ಲ’ ಎಂದ. ‘ಅವರ ಮಗಳಿಗೆ, ಆ ಹುಡುಗಿಗೆ?’ ಎಂದೆ. ತಲೆಯಲ್ಲಾಡಿಸಿದ. ಅಂದರೆ ಅವಳಿಗೆ ಗೊತ್ತಿಲ್ಲದೆ ಅವಳನ್ನು ಪ್ರೀತಿಸುವುದು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹದಿನೇಳನೆಯ ಕಂತು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ