Advertisement

Category: ವ್ಯಕ್ತಿ ವಿಶೇಷ

ನನ್ನ ಹಾಡು ನನ್ನದು ಎಂದ ಸಾಹಿರ್

ಪರಸ್ಪರ ಆಕರ್ಷಣೆ ಅವಕಾಶಗಳಿದ್ದ ಯಾವ ಪ್ರಣಯಾಸಕ್ತಿಗಳನ್ನೂ ಸಹ ಸಾಹಿರ್ ಒಂದು  ಹಂತದ ನಂತರ ಮುಂದುವರೆಸುವ ಇಚ್ಛೆ ತೋರಿಸುತ್ತಿರಲಿಲ್ಲ. ಸಾಹಿರನ ಕಥೆ ವ್ಯಥೆಗಳನ್ನು ಆಪ್ತವಾಗಿ ಬಲ್ಲ ಒಡನಾಡಿಗಳು ಹಾಗು ವಿಮರ್ಶಕರು ಈ ವಿಷಯವಾಗಿ ಅನೇಕ ರೀತಿಯ ಟೀಕೆ ಟಿಪ್ಪಣಿಗಳನ್ನು ಕೊಡುತ್ತಾರೆ. ಹೆತ್ತರವರ ನಡುವಿನ ವಿರಸ ಘರ್ಷಣೆಗಳ ಮಧ್ಯೆ ಸಿಲುಕಿ ನಲುಗಿ ಹೀಗೆ ಜವಾಬ್ದಾರಿಗಳಿಂದ ದೂರ ಸರಿಯುತ್ತಾನೆ ಎಂದು ಅನೇಕರು ಹೇಳುತ್ತಾರೆ. ಮಾರ್ಚ್ 8 ಅಂದರೆ ಆತನ 101ನೆಯ…

Read More

ತಾಳ್ಮೆಯೆಂಬ ಕಾವ್ಯಶಕ್ತಿಯ ಧ್ಯಾನದಲ್ಲಿ

ಇತ್ತೀಚೆಗೆ ಟೊಟೊ ಪ್ರಶಸ್ತಿ ಪಡೆದ ಶ್ರೀಕೃಷ್ಣ ದೇವಾಂಗಮಠ, ಬರವಣಿಗೆಯನ್ನೂ ಪೋಟೋಗ್ರಫಿಯನ್ನೂ ಬಹುವಾಗಿ ಇಷ್ಟಪಡುವವರು. ಗದ್ಯ ಓದಲು ಭಾರೀ ತಾಳ್ಮೆ ಬೇಕಾಗುತ್ತದೆ ಎಂದು ಹೇಳುತ್ತಾ, ಬಯಲಿನಲ್ಲಿ ಕೀಟವೊಂದರ ಚಲನೆಯನ್ನು ಸೆರೆ ಹಿಡಿಯಲು ಗಂಟೆಗಟ್ಟಲೆ ‘ಕಮಕ್ ಕಿಮಕ್’ ಎನ್ನದೇ ಕಾಯುವವರು. ವೃತ್ತಿ, ತಿಂಗಳ ಸಂಬಳ, ಬದುಕು ಎಂಬ ಸಾಮಾನ್ಯ ಚೌಕಟ್ಟನ್ನು ದಾಟಿ ಕವಿತೆಗಳನ್ನೂ ಕೀಟಗಳನ್ನೂ ಹುಡುಕುತ್ತ ಅಲೆಯುವುದನ್ನು ಇಷ್ಟಪಡುವವರು.

Read More

ಹೊಂಗಿರಣದ ಕವಿಯ ಒಡನಾಟದ ನೆನಪುಗಳು

ನವ್ಯ ಮತ್ತು ನವೋದಯವನ್ನು ಹದವಾಗಿ ಬೆರೆಸಿದ ಪಾಕದಂತಹ ಸಾಹಿತ್ಯ ಸೃಷ್ಟಿಸಿದ ಚೆನ್ನವೀರ ಕಣವಿಯವರದು ಕರುಳಿನ ಪ್ರೀತಿಗೆ ಓಗೊಡುವ ಸ್ವಭಾವ. ಮೃದುಮನಸ್ಸಿನವರು ಎಂದು ಹೇಳಿದರೂ, ಅಗತ್ಯವೆನಿಸಿದಾಗ ಹೋರಾಟದ ಹಾದಿಯನ್ನು ಹಿಡಿದವರು. ಸಂಪ್ರದಾಯವನ್ನು ಮುರಿದವರು. ಆರೋಗ್ಯಪೂರ್ಣ ಸಂಘಟನೆಗೆ ಒತ್ತಾಸೆಯಾಗಿ ನಿಂತವರು. ಸಂಬಂಧಗಳನ್ನು ಪೋಷಿಸುತ್ತ, ಮಾನವಪ್ರೀತಿಗೆ ಮಾನ್ಯತೆ ನೀಡಿ ಜೀವನ ನಡೆಸಿದವರು. ಕಾವ್ಯವು ಅವರಿಗೆ ಒಲಿದು ಬಂದ ಪ್ರಕಾರ.ಇತರ ಪ್ರಕಾರಗಳಲ್ಲಿ ಅವರು ಬರೆದರೂ, ಕಾವ್ಯವೇ ಅವರ ಸಾಹಿತ್ಯದ ಸ್ಥಾಯೀ ಭಾವ..

Read More

ಅಬೊರಿಜಿನಲ್ ಗಳ ಭರವಸೆ, ಟೆನಿಸ್ ಮಿನುಗು ತಾರೆ ಆಶ್ ಬಾರ್ಟಿ

ಆಶ್ ಬಾರ್ಟಿ ಮೆಲ್ಬೋರ್ನ್ ನಗರದಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಪಂದ್ಯವನ್ನು ಗೆದ್ದಾಗ ಅಪ್ಪಅಮ್ಮಂದಿರು, ಆಪ್ತ ಗೆಳತಿಯರು ಅಲ್ಲದೆ ಇವೊನ್ ಗೂಲಗೊಂಗ್ ಕಾಲಿ ಕೂಡ ಹಾಜರಿದ್ದರು. ಜೊತೆಗೆ ಹೆಸರಾಂತ ಆಸ್ಟ್ರೇಲಿಯನ್ ಅಬೊರಿಜಿನಲ್ ಅಥ್ಲೀಟ್ ಕ್ಯಾಥಿ ಫ್ರೀಮನ್ ಪ್ರೇಕ್ಷಕ ವೃಂದದಲ್ಲಿ ಕೂತು ಪಂದ್ಯವನ್ನು ವೀಕ್ಷಿಸಿದ್ದರು. ತಾನು ಆಟವಾಡಿದ ಸ್ಥಳದಲ್ಲೇ ಇವರೆಲ್ಲರನ್ನು ಕಂಡು ಅವರೆಲ್ಲನ್ನು ಅಪ್ಪಿಕೊಂಡದ್ದೇ ಒಂದು ಮಹಾನ್ ಸಂತೋಷದ ಕ್ಷಣವೆಂದು ಆಶ್ ಹೇಳಿದಳು. ಅಬೊರಿಜಿನಲ್ ಮನೆಮನೆಗಳಲ್ಲಿ ಎದ್ದ ಹರ್ಷೋದ್ಗಾರ ಇನ್ನೂ ಕೇಳುತ್ತಿದೆ. ಡಾ. ವಿನತೆ ಶರ್ಮಾ ಬರೆದ ಆಸ್ಟ್ರೇಲಿಯ ಪತ್ರ

Read More

‘ಶಿಲಾಲತೆ’ಯಲ್ಲಿ ಪದುಮಳ ಬಳೆಗಳ ದನಿಯಿಲ್ಲವಲ್ಲ

ಕೆ.ಎಸ್. ನರಸಿಂಹ ಸ್ವಾಮಿ ಅವರು ಪ್ರೇಮಕವಿಯಾಗಿ ಸುಪ್ರಸಿದ್ಧರಾದರೂ ಅವರು ಬದುಕಿನ ಜಿಜ್ಞಾಸೆಗಳ ಬಗ್ಗೆ, ಅಧ್ಯಾತ್ಮದ ಕುರಿತು, ಇತರ ಸಂದಿಗ್ಧಗಳ ಕುರಿತು ಎಷ್ಟೊಂದು ಕವಿತೆಗಳನ್ನು ಬರೆದಿದ್ದಾರೆ. ಅವರ ಕಾವ್ಯ ಸರಳವಾಗಿತ್ತು, ರಮ್ಯವಾಗಿತ್ತು, ಕನಸುವಂತಿತ್ತು… ಎಲ್ಲಿಯವರೆಗೆ? ಶಿಲಾಲತೆಯವರೆಗೆ. ಅಲ್ಲಿಂದ ನರಸಿಂಹಸ್ವಾಮಿ ಕಠಿಣರಾಗುತ್ತಾ ಹೋದರು, ಪ್ರತಿಮೆಗಳಲ್ಲಿ ಮಾತನಾಡಲಾರಂಭಿಸಿದರು. ಅವರ ಜನ್ಮದಿನವಾದ ಇಂದು, ಅವರ ಬಹು ಪ್ರಸ್ತಾಪಿತ ಕವನಗಳನ್ನು ಬಿಟ್ಟು ‘ಶಿಲಾಲತೆ’ಯ ನಲವತ್ತರ ಚೆಲುವೆಯ ಬಗ್ಗೆ ವಿಶ್ಲೇಷಣಾ ಬರಹ ಬರೆದಿದ್ದಾರೆ ಲೇಖಕಿ ಮಾಲಿನಿ ಗುರುಪ್ರಸನ್ನ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ