Advertisement

Category: ಸಂಪಿಗೆ ಸ್ಪೆಷಲ್

ಡಾ. ಅಂಬೇಡ್ಕರ್‌ ಬರೆದ ಪ್ರೇಮಪತ್ರ…: ಸದಾನಂದ ಆರ್. ಅನುವಾದ

ಮೊದಲಿಗೆ, ಉಕ್ಕಿ ಹರಿಯುವ ಪ್ರೀತಿಯನ್ನು ನಿಯಂತ್ರಿಸಲು ನಾವು ಕಲಿಯಬೇಕು. ನೀನೀಗ ಪ್ರೀತಿಯ ಬಲಿಪಶುವಾಗಿರುವೆ ಎನ್ನುವ ಆತಂಕ ನನ್ನದು. ನನ್ನಿಂದ ದೂರವಿರಲು ನಿನ್ನಿಂದ ಸಾಧ್ಯವಿಲ್ಲ ಅನ್ನುವುದನ್ನು ನಾನು ಬಲ್ಲೆನು. ನನಗೂ ನೀನು ನನ್ನ ಹತ್ತಿರ ಇರಬೇಕೆಂಬ ಆಸೆಯಿದೆ. ಆದರೆ ನೀನು ನನಗೆ ಒಂದಿಷ್ಟು ಸಮಯಾವಕಾಶ ನೀಡಬೇಕೆಂದು ಕೋರುವೆ. ನಿನ್ನ ತಾಳ್ಮೆಯನ್ನು ನಾನು ಖಂಡಿತ ಪರೀಕ್ಷಿಸುವುದಿಲ್ಲ ಎನ್ನುವುದಂತೂ ಖಾತ್ರಿ.
ಡಾ. ಬಿ.ಆರ್. ಅಂಬೇಡ್ಕರ್‌ ತಮ್ಮ ಮದುವೆಗೂ ಮುನ್ನ ತಮ್ಮ ಪತ್ನಿಗೆ ಬರೆದಿದ್ದ ಪತ್ರವನ್ನು ಸದಾನಂದ ಆರ್. ಕನ್ನಡಕ್ಕೆ ಅನುವಾದಿಸಿದ್ದಾರೆ

Read More

ನಾವೂನೂ ಹಕ್ಕಿಗಳಾಗೋಣ ಬಾರಾ: ಮಹಾಲಕ್ಷ್ಮೀ ಕೆ. ಎನ್. ಬರಹ

ರೇಷ್ಮೆ ಲಂಗದ ಅಕ್ಕ ಮತ್ತು ಅವಳ ಪುಟ್ಟ ತಮ್ಮ ಹಿಡಿಯಲು ಹೋದಾಗ ಕೈಗೆ ಸಿಗದವು, ಮನುಷ್ಯ ಮುಟ್ಟಿದರೆ ತನ್ನ ಮೈಯನ್ನ ಸ್ವಚ್ಛ ಮಾಡಿಕೊಳ್ಳುವಂತವು, ಈ ನೆಲದಲ್ಲಿ ನಿಧಿಯಿದೆ; ಏಳು ಎಡೆಯ ಸರ್ಪ ಅದನ್ನ ಕಾಯ್ತಿದೆ ಎಂಬ ಅವರ ಈರಪ್ಪನ ಮಾತಿನ ಮೇಲಿನ ಅವರ ಎಳೆಯ ನಂಬಿಕೆ, ಅಂತ್ಯದಲ್ಲಿ ಸಮಯ ಕಳೆದಂತೆ ಬಳ್ಳಾರಿಯಲ್ಲಿನ ಗಣಿಗಾರಿಕೆಗೆ ಹಸಿರುಟ್ಟ ನೆಲವೆಲ್ಲ ಬರಡಾಗಿ ದಾರಿತುಂಬಾ ಧೂಳು ತುಂಬಿ, ಗಿಳಿಯಬಣ್ಣವೂ ಕೆಂಪಾಗಿಯೇ ಬಿಡುವ ಧಾರುಣ ವಾಸ್ತವದ ಕತೆ ನೆನಪಾಗುತ್ತೆ.
ಮಹಾಲಕ್ಷ್ಮೀ. ಕೆ. ಎನ್ ಬರಹ ನಿಮ್ಮ ಓದಿಗೆ

Read More

ವಸ್ತುಗಳ ನಡುವೊಂದು ವಾಸ್ತವ: ಸೌರಭಾ ಕಾರಿಂಜೆ ಬರಹ

ಡಿಕ್ಲಟರಿಂಗ್ ನಮ್ಮ ದೇಹದ ಆರೋಗ್ಯಕ್ಕೂ ಒಳ್ಳೆಯದು. ಮನೆಯಲ್ಲಿ ಸೇರಿಕೊಂಡ ಅನೇಕ ವಸ್ತುಗಳು ಹಲವು ರೀತಿಯ ರೋಗಗಳಿಗೆ ಕಾರಣವಾಗುವ ಧೂಳಿಗೆ, ಅಸ್ತಮಾದಂತಹ ಖಾಯಿಲೆಗಳಿಗೆ ಕಾರಣವಾಗಬಹುದು. ಆಗಾಗ ಡಿಕ್ಲಟರಿಂಗ್ ಮಾಡುವುದರಿಂದ ಅದನ್ನು ತಡೆಯಬಹುದು. ಅಂತೂ ಈ ಡಿಕ್ಲಟರಿಂಗ್‌ನ ಹಿಂದೆ ಎಲ್ಲದಕ್ಕಿಂತ ಮುಖ್ಯವಾಗಿ ಯಾವುದು ಸಂತೋಷವನ್ನು ನೀಡುತ್ತದೆಯೋ ಅದನ್ನು ಮಾಡಿ ಮತ್ತು ಸಂತೋಷವನ್ನು ತರುವಂತಹ ವಸ್ತುಗಳನ್ನು ಮಾತ್ರ ಇಟ್ಟುಕೊಳ್ಳಿ ಎನ್ನುವ ಸಂದೇಶವಿದೆ.
“ಡಿಕ್ಲಟರಿಂಗ್‌” ಕುರಿತು ಸೌರಭಾ ಕಾರಿಂಜೆ ಬರಹ ನಿಮ್ಮ ಓದಿಗೆ

Read More

ಕೊಕ್….ಕೊಕ್ಕ್… ಕುಕ್ಕುಟಾಯಣ: ವಸಂತಕುಮಾರ್ ಕಲ್ಯಾಣಿ ಪ್ರಬಂಧ

ಸುಮಾರು ನಾಲ್ಕು ಮೂವತ್ತಕ್ಕೆ ಯಾವುದೋ ಕನಸಿನ ಲೋಕದಲ್ಲಿದ್ದವನಿಗೆ, ಎಂಪಿ ಶಂಕರ್ ವಜ್ರಮುನಿ, ತೂಗುದೀಪ ಶ್ರೀನಿವಾಸ್, ಪ್ರಭಾಕರ್, ಶಕ್ತಿಪ್ರಸಾದ್ ಮುಂತಾದವರೆಲ್ಲ ಒಟ್ಟಿಗೆ ಗಹಗಹಿಸಿ ನಕ್ಕ ಹಾಗೆ ದನಿ ಕೇಳಿ ಎಚ್ಚರವಾಯಿತು. ಕೆಲಕ್ಷಣದ ನಂತರ ಅದು ಚೇಚಿ ಮನೆಯ ಕೋಳಿಯ ಕೂಗು ಎಂಬ ಕಟು ವಾಸ್ತವ ಅರಿವಿಗೆ ಬಂತು. ಸರಿ ‘ಸುಸು’ ಮಾಡಿ ನೀರು ಕುಡಿದು ಮಲಗಿದರಾಯಿತು ಎಂದು, ಎಲ್ಲ ಮುಗಿಸಿ ಮಲಗಿದರೆ, ಅದರ ಆರ್ಭಟ ಇನ್ನಷ್ಟು ಹೆಚ್ಚಾಯಿತು.
ವಸಂತಕುಮಾರ್ ಕಲ್ಯಾಣಿ ಪ್ರಬಂಧ ನಿಮ್ಮ ಓದಿಗೆ

Read More

ನಮ್ಮ ಓದನ್ನು ರೂಪಿಸಿದ ಮಾಯಾದರ್ಪಣದ ಮಾಯಾವಿ: ಎಂ. ಎಸ್. ಶ್ರೀರಾಮ್ ಬರಹ

ದಿವಾಕರ್‌ಗೆ ಸಾಹಿತ್ಯದ ಬಗ್ಗೆ ಇರುವ ಆಳವಾದ ಒಳನೋಟಗಳು, ಸಂಗೀತ ಮತ್ತು ಸಿನಿಮಾಗಳ ಬಗ್ಗೆಯೂ ಇದೆ. ಬೇಂದ್ರೆಯವರ ಅನೇಕ ಕವಿತೆಗಳಿಗೆ ದಿವಾಕರ್ ರಾಗಸಂಯೋಜನೆ ಮಾಡಿದ್ದಾರೆ. ‘ಮಲ್ಲಿಗೆ’ಯಲ್ಲಿದ್ದಾಗ ಅನೇಕ ಪುಸ್ತಕಗಳ ಮುಖಪುಟಗಳನ್ನೂ ವಿನ್ಯಾಸ ಮಾಡಿದ್ದರು.
ಎಂಭತ್ತರ ಹೊಸ್ತಿನಲ್ಲಿರುವ ಹಿರಿಯ ಕಥೆಗಾರ ಎಸ್. ದಿವಾಕರ್ ಅವರ ಸಾಹಿತ್ಯ ಸಂಭ್ರಮದ ಕೃತಿ “ಪರಿಮಳದ ಪಡಸಾಲೆ”ಗೆ ಎಂ.ಎಸ್.‌ ಶ್ರೀರಾಮ್‌ ಬರೆದ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ