ನಾಳೆಗೆಂದು ತೆಗೆದಿರಿಸಿದ ಮುಷ್ಟಿ ಪೃಥುಕ
ನಾಳೆಯೆಂಬುದು ನಿಜವೋ ಸುಳ್ಳೋ ಬೇರೆ ಮಾತು. ಆದರೆ ಇಂದಿನ ಜೀವನವನ್ನು ದಾಟುವುದಕ್ಕಾಗಿ ಪ್ರೇರಣೆಯಾಗಿರುವುದು ಈ ʻನಾಳೆʼಗಳು ಅಲ್ಲವೇ. ಜಗತ್ತಿನ ಎಲ್ಲ ಜೀವಿಗಳೂ ನಾಳೆಗಳನ್ನು ಎಷ್ಟೊಂದು ಜತನ ಮಾಡುತ್ತವೆ. ಅದಕ್ಕಾಗಿ ಸದಾ ಶ್ರಮಿಸುತ್ತಲೇ ಇರುತ್ತವೆ. ಆದರೆ ಅದ್ಯಾಕೋ, ಈ ಜೀವಿಗಳ ಸಾಲಿನಲ್ಲಿ ಮನುಷ್ಯನ ಸ್ವಭಾವ ಮಾತ್ರ ವಿಭಿನ್ನವಾಗಿರುತ್ತವೆ. ಮನುಷ್ಯನೂ ನಾಳೆಗಳ ಬಗ್ಗೆ ಯೋಚಿಸಿದರೂ, ಅದಕ್ಕಾಗಿ ಮಾಡುವ ತಯಾರಿ ಮಾತ್ರ ತದ್ವಿರುದ್ಧವಾದುದು. ಸಂಪತ್ತನ್ನು ಜಮೆ ಮಾಡಿದಷ್ಟೂ ತಮ್ಮ ನಾಳೆಗಳು ಭದ್ರವಾಗಿರುತ್ತವೆ ಎಂದು ಭಾವಿಸುತ್ತ ಎಲ್ಲ ಜೀವಿಗಳಿಗೂ ತೊಂದರೆಯುಂಟು ಮಾಡುತ್ತಾನೆ ಎಂದು ಅನಿಸುತ್ತದೆ.
ಕೋಡಿಬೆಟ್ಟು ರಾಜಲಕ್ಷ್ಮಿಬರೆದ ಲೇಖನ
