Advertisement

Category: ಸಂಪಿಗೆ ಸ್ಪೆಷಲ್

ಎಫ್. ಆರ್. ಲೀವಿಸ್ ಕುರಿತು ಕೆ. ವಿ. ತಿರುಮಲೇಶ್ ಐವತ್ತೈದು ವರ್ಷಗಳ ಹಿಂದೆ ಬರೆದದ್ದು

“ಲೀವಿಸ್ ಎಂದರೆ ತುಂಬ ಹಟಮಾರಿಯೂ ಹೌದು, ತನ್ನ ತಪ್ಪನ್ನು ಒಪ್ಪಿಕೊಳ್ಳುವುದೇ ಇಲ್ಲ. ಇದರಿಂದಾಗಿ ಲೀವಿಸ್‍ ನ ಬೆಂಬಲಿಗರೇ ಅವನ ಕೈಬಿಟ್ಟದ್ದುಂಟು. ತನ್ನ ‘ಮೌಲ್ಯ’ಗಳಿಗಾಗಿ ಲೀವಿಸ್ ಹೋರಾಡಿದ್ದಾನೆ. ಲೀವಿಸ್ ತಾನೊಂದು ಸರ್ವಸಾಮಾನ್ಯ ನಿಲುಮೆ ತಳೆಯಲು ನಿರಾಕರಿಸುವುದೇ ಇದಕ್ಕೆ ಕಾರಣ. ಇದು ಲೀವಿಸ್‍ ನ ಸಾಧನೆಯ ಕೇಂದ್ರ ವಿರೋಧಾಭಾಸ. ವಿಮರ್ಶೆಯ ಪರಮತತ್ವಗಳ ಕುರಿತಾಗಿ…”

Read More

ಅಜ್ಜಯ್ಯನ ಸವಾರಿ: ಚಂದ್ರಮತಿ ಸೋಂದಾ ಬರೆದ ಪ್ರಬಂಧ

“ಅಜ್ಜಯ್ಯ ನೆಂಟರ ಮನೆಗೆ ಹೋದರೂ ತಮ್ಮ ದಿನಚರಿಯನ್ನು ಬದಲಿಸಿದವರಲ್ಲ. ಸಂಜೆಹೊತ್ತಿಗೆ ಮನೆಯ ಸುತ್ತಮುತ್ತ ಇರುವ ಕೋಲು, ಕಡ್ಡಿ, ತೆಂಗು, ಅಡಿಕೆಮರಗಳ ಒಣಗಿದ ತುಂಡು ಹೀಗೆ ಬಚ್ಚಲೊಲೆಗೆ ಬೇಕಾಗುವ ಎಲ್ಲವನ್ನು ಒಟ್ಟುಗೂಡಿಸುತ್ತಿದ್ದರು. ಅವನ್ನೆಲ್ಲ ಬಚ್ಚಲ ಒಲೆಯ ಹತ್ತಿರ ಜೋಡಿಸಿಡುತ್ತಿದ್ದರು. ಬೆಳಗ್ಗೆ ಐದುಗಂಟೆಗೆ ಎದ್ದು ಒಲೆಗೆ ಉರಿ ಮಾಡುವುದು ಅವರ ರೂಢಿ. ರಾತ್ರೆ ಮಲಗುವಾಗ ತಲೆಯ ಹತ್ತಿರ ತಮ್ಮ ಲಾಟೀನನ್ನು ಸಣ್ಣಗೆ ಉರಿಸುವ ಅವರಿಗೆ ಒಲೆಗೆ ಬೆಂಕಿ ಹಿಡಿಸುವುದು ಸುಲಭವಾಗಿತ್ತು…”

Read More

ಆನೆ ಬಂತೊಂದಾನೆ… ಅಲ್ಲ.. ಮೂರಾನೆ!

“ಆ ಸುದ್ದಿ ಓದಿ ಎರಡು ಮೂರು ದಿನವಾಗಿರಲಿಲ್ಲ, ಮನೆ ಕೆಲಸಕ್ಕೆ ಬರುವ ಗಂಗೆ ಒಂದು ಬೆಳಗ್ಗೆ ಅತ್ತೆ ಹತ್ತಿರ ಕೊಡವ ಭಾಷೆಯಲ್ಲಿ ಗಂಭೀರವಾಗಿ ಏನನ್ನೋ ಮಾತನಾಡುತ್ತಿದ್ದರು. “ರಾತ್ರಿ ಎಲ್ಲ ನಿದ್ದೆಯೇ ಇಲ್ಲ ಅಕ್ಕಯ್ಯಾ… ಹೀಗೇ ಇವು ಬರ್ತಾ ಹೋದ್ರೆ, ಎಂತ ಮಾಡೋದು ನಾವು? ಗಾಬರಿಯಾಯ್ತದೆ. ಬೆಳಗ್ಗೆ ಬೆಳಗ್ಗೆ ಬೇಗ ಕೆಲಸಕ್ಕೆ ಬಾ ಅಂತಾರೆ. ಒಂದೊಂದ್‌ ಸಲಾ.ಕೆಲ್ಸಾ ಮುಗ್ಸಿ ಮನೇಗ್‌ ಹೋಗೋದು ಲೇಟಾಯ್ತದೆ. ರಾತ್ರಿ ಒಬ್ಬರೇ ಸಿಕ್ರೆ ಬಿಡ್ತಾವ..? ತುಳ್ದು ಜಜ್ಜಿ ಹಾಕ್ತವೆ…”..”

Read More

ಊರು, ಉರಿಬಿಸಿಲು ಮತ್ತು ಉಪ್ಪಿಟ್ಟು-ಚಹಾ

“ಅಲ್ಲಿನ ಉಪ್ಪಿಟ್ಟಿಗಿರುವ ರುಚಿಯೇ ಬೇರೆ. ಬೆಂಗಳೂರಿನವರ ಹಾಗೆ ಬನ್ಸಿ ರವೆಯಲ್ಲೋ, ಅಥವಾ ನಾಲಿಗೆ ಹೆಚ್ಚು ರುಚಿಯನ್ನು ಬಯಸುವಾಗ, ತುಪ್ಪದಲ್ಲಿ ಹುರಿದ ಚಿರೋಟಿ ರವೆಯಲ್ಲೋ ಮಾಡುವ ಉಪ್ಪಿಟ್ಟಲ್ಲ ಅದು. ದಪ್ಪ ರವೆಯ ಒಂಚೂರು ಹೆಚ್ಚಿಗೆಯೇ ಅನ್ನಿಸುವಷ್ಟು ಎಣ್ಣೆಯ ಒಗ್ಗರಣೆಯಲ್ಲಿ ಯಥೇಚ್ಚವಾಗಿ ಸುರಿದ ಉಳ್ಳಾಗಡ್ಡಿ (ಈರುಳ್ಳಿ), ಕರಿಬೇವು, ಸಾಸಿವೆ, ಜೀರಿಗೆ ಮತ್ತು ತಿಂದವರ ಮೂಗು ಸೋರುವಷ್ಟು ಖಾರದ ಮೆಣಸನ್ನು ಹಾಕಿದ ಉಪ್ಪಿಟ್ಟದು. ಅದರ ರುಚಿ ತಿಂದವರಿಗೇ ಗೊತ್ತು”

Read More

ಬಾಲ್ಯವೆನ್ನುವ ರಾತ್ರಿರಾಣಿಯ ಪರಿಮಳ

“ಒದ್ದೆಯಾಗಿರುತ್ತಿದ್ದ ಯೂನಿಫಾರ್ಮು ಎಲ್ಲರ ಮಾತುಗಳನ್ನು ಆಲಿಸುತ್ತಲೇ ಮರದ ಮಣೆಯ ಮೇಲೆ ಕುಳಿತು ಇಂಚಿಂಚಾಗಿ ಒಣಗುತ್ತ ಮರುದಿನದ ಕ್ಲಾಸಿಗೆ ರೆಡಿಯಾಗುತ್ತಿತ್ತು. ಬಣ್ಣಬಣ್ಣದ ಕರ್ಟನ್ನುಗಳನ್ನು ಆಗೊಮ್ಮೆ ಈಗೊಮ್ಮೆ ಒದ್ದೆಯಾಗಿಸುವ ಮಳೆಹನಿಗಳನ್ನು ನೋಡುತ್ತ ಸೋಫಾದ ಮೇಲೆ ಕುಳಿತು ಟೀ ಕುಡಿಯುವಾಗಲೆಲ್ಲ, ಬಚ್ಚಲೊಲೆಯ ಬಿಸಿಬೂದಿಯಲ್ಲಿ ಸಿಡಿಯುತ್ತ ಬಾಯಲ್ಲಿ ನೀರೂರಿಸುತ್ತಿದ್ದ. ಹಲಸಿನಬೀಜವನ್ನು ನೆನಪಿಸಿಕೊಂಡು….”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ