Advertisement

Category: ಸರಣಿ

ಸುಂದರ ಕಾಡಿನ ರೋ‌ಚಕ ಕಥೆಗಳು-೨: ರೂಪಾ ರವೀಂದ್ರ ಜೋಷಿ ಸರಣಿ

ಶಾಲೆಗೆ ಹೋಗುವಾಗ, ಹಲವೆಡೆ ನಾವು ಇಂಥ ನಯನ ಮನೋಹರ “ಹೂ ರಥ” ನೋಡುತ್ತ ಹೋಗುತ್ತಿದ್ದೆವು. ಈಗಲೂ ಆ ಸುಂದರ ದೃಶ್ಯ ನನ್ನ ಕಣ್ಣಿಗೆ ಕಟ್ಟಿದಂತಿದೆ. ಹಾಗೇ ಇನ್ನೊಂದು ಚಂದದ ಹೂ ಅಂದರೆ, ಚದುರಂಗಿ. ಇದು ತೀರಾ ಪುಟಾಣಿ ಹೂಗಳ ಗೊಂಚಲು. ನಕ್ಷತ್ರದ ಆಕಾರದ ಗಾಢ ಕೇಸರಿ, ಕೆಂಪು ಹೂಗಳ ಚದುರಂಗಿ ಪೊದೆಯಾಗಿ ಬೆಳೆಯುವ ಸಸ್ಯ. ಇದರ ಸಪೂರ ಕಾಂಡಕ್ಕೆ ಸೂಕ್ಷ್ಮ ಮುಳ್ಳುಗಳಿರುತ್ತವೆ. ಇದರ ಹೂ ನೋಡಲು ಬಹಳ ಚಂದ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಹನ್ನೊಂದನೆಯ ಕಂತು

Read More

ಶೇಷಾದ್ರಿ ಗಂಜೂರು ಬರೆಯುವ ನೂತನ ವಿಜ್ಞಾನ ಸರಣಿ “ವಿಜ್ಞಾನದ ಕಥಾ ಪ್ರಸಂಗಗಳು” ಇಂದಿನಿಂದ

ಮನುಷ್ಯನಿಗೆ ಮನುಷ್ಯನೇ ಹುಟ್ಟುವ ತದ್ರೂಪಿತನ ಪುರಾತನ ಕಾಲದಿಂದಲೂ ಕುತೂಹಲ ಮೂಡಿಸಿದೆ. ಎರಡೂವರೆ ಸಾವಿರ ವರ್ಷಗಳ ಹಿಂದೆಯೇ ಗ್ರೀಕ್ ಗಣಿತಜ್ಞ-ತತ್ವಶಾಸ್ತ್ರಿ ಪೈಥಾಗೊರಸ್ ಅನುವಂಶೀಯತೆಯ ಸೂತ್ರ ವೀರ್ಯದಲ್ಲಿದೆ ಎನ್ನುತ್ತಾನೆ. ಅವನ ಪ್ರಕಾರ, ವೀರ್ಯ ಪುರುಷನಿಂದ ಹೊರಬರುವ ಮುನ್ನ ದೇಹದ ಎಲ್ಲಾ ಭಾಗಗಳಲ್ಲಿ ಹರಿದು ಆ ಭಾಗಗಳೆಲ್ಲದುರ ಮಾಹಿತಿಯನ್ನೂ ಕಲೆಹಾಕಿ ತದ್ರೂಪಿ ಇರುವ ಬೀಜವಾಗುತ್ತದೆ. ಈ ಬೀಜ ಗರ್ಭವನ್ನು ಸೇರಿದಾಗ, ಆ ತದ್ರೂಪಿಗೆ ಬೇಕಿರುವ ಪೋಷಕಾಂಶ ನೀಡಿ ಅದನ್ನು ದೊಡ್ಡದು ಮಾಡುವುದಷ್ಟೇ ಹೆಣ್ಣಿನ ಕೆಲಸ.
ಶೇಷಾದ್ರಿ ಗಂಜೂರು ಬರೆಯುವ ನೂತನ ವಿಜ್ಞಾನ ಸರಣಿ “ವಿಜ್ಞಾನದ ಕಥಾ ಪ್ರಸಂಗಗಳು”

Read More

ಪುಸ್ತಕ ಹಾಗೂ ನೋಟ್ ಪುಸ್ತಕದ ಬಗ್ಗೆ ಒಂದಷ್ಟು ಮಾತು…: ಬಸವನಗೌಡ ಹೆಬ್ಬಳಗೆರೆ ಸರಣಿ

ನನಗೆ ಟಿಸಿಹೆಚ್ ಓದುವಾಗ ನಮ್ಮೂರಲ್ಲಿದ್ದ ಒಬ್ಬರು ನನಗೆ ಅವರ ಪುಸ್ತಕಗಳನ್ನು ಉಚಿತವಾಗಿ ಕೊಟ್ಟಿದ್ದರು. ಅಲ್ಲದೇ ನಮ್ಮೂರ ಗ್ರಂಥಪಾಲಕ ವಿಜಯಣ್ಣನೂ ಕೇಳಿದಾಗ ಪುಸ್ತಕಗಳನ್ನು ಕೊಡುತ್ತಿದ್ದರು. ನನ್ನ ಓದಿಗೆ ತುಂಬಾ ಸಹಕಾರ ಮಾಡಿದರು. ಪ್ರೌಢಶಾಲೆಯಲ್ಲಿದ್ದಾನ ನನಗೆ ನನ್ನ ಸೀನಿಯರ್ ಒಬ್ಬರು ಹಳೇ ಪುಸ್ತಕಗಳನ್ನು ಕೊಡುತ್ತೇನೆ ಎಂದು ಹೇಳಿ ಮೊದಲೇ ನನ್ನ ಬಳಿ ಅಡ್ವಾನ್ಸ್ ಆಗಿ ಹಣ ಪಡೆದು ಯಾಮಾರಿಸಿದ ಘಟನೆಯನ್ನು ನಾನು ಇನ್ನೂ ಮರೆತಿಲ್ಲ. ಅಲ್ಲದೇ ಪಿಯುಸಿಯನ್ನು ಬೆಂಗಳೂರಿನಲ್ಲಿ ಓದುವಾಗ ನಮ್ಮ ಹಾಸ್ಟೆಲ್ಲಿನ ಕೆಲ ಹುಡುಗರು ಪುಸ್ತಕಗಳನ್ನು ಕದ್ದು ಆಗ ಅವೆನ್ಯೂ ರಸ್ತೆಯಲ್ಲಿದ್ದ ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿಗಳಿಗೆ ಮಾರುತ್ತಿದ್ದ ಘಟನೆಗಳೂ ಇವೆ!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಮೊಹಮ್ಮದ್ ಚಾಚಾ!: ದರ್ಶನ್‌ ಜಯಣ್ಣ ಸರಣಿ

ಅವರು ಇಲ್ಲಿನ 45-50 ಡಿಗ್ರಿ ಉಷ್ಣಾಂಶವನ್ನ ಬಳಸಿಕೊಂಡು ಪ್ಲಾಸ್ಟಿಕ್‌ನ ಡಬ್ಬಿಯಲ್ಲಿ ತಾವು ತಂದ ಆಹಾರವನ್ನು ಬಿಸಿ ಮಾಡಿಕೊಳ್ಳುವುದನ್ನು ನೋಡಿ ಸಂಕಟವೂ ಆಯಿತು. ಏನಾದರೂ ಮಾಡಬೇಕಲ್ಲ ಎಂದು ಯೋಚಿಸುವಾಗ ಒಂದು ಹೊಸ tupperware ನ ಊಟದ ಡಬ್ಬಿಯನ್ನು ತಂದುಕೊಡುವುದು ಸೂಕ್ತ ಅಂತ ಅನ್ನಿಸಿತು.
ದರ್ಶನ್‌ ಜಯಣ್ಣ ಬರೆಯುವ “ಸೌದಿ ಡೇಟ್ಸ್”‌ ಸರಣಿಯ ಹನ್ನೊಂದನೆಯ ಕಂತು

Read More

ಬರವಣಿಗೆಯ ಹುಚ್ಚು ಹತ್ತಿದ್ದ ದಿನಗಳು…: ಎಚ್. ಗೋಪಾಲಕೃಷ್ಣ ಸರಣಿ

ಪತ್ರಿಕೆಗಳಿಗೆ ಬರಹ ರವಾನೆ ಆದಾಗ ಅಸ್ವೀಕೃತ ಆದರೆ ವಾಪಸ್ ಕಳಿಸಲು ಅಂಚೆ ಚೀಟಿ ಹಚ್ಚಿದ ಕವರ ಸಂಗಡ ಹೋಗುತ್ತಿತ್ತು. ಆಗ ಅರವತ್ತು ಎಪ್ಪತ್ತರ ದಶಕದಲ್ಲಿ “ಅಸ್ವೀಕೃತ ಲೇಖನಗಳನ್ನು ವಾಪಸ್ ಪಡೆಯಲು ಅಂಚೆ ಚೀಟಿ ಹಚ್ಚಿದ ಸ್ವ ವಿಳಾಸದ ಕವರ್ ಸಂಗಡ ಇರಲಿ” ಎಂದು ಎಲ್ಲಾ ಪತ್ರಿಕೆಗಳೂ ಬರಹಗಾರ ಪ್ರಭುಗಳಿಗೆ ವಿನಂತಿ ಮಾಡುತ್ತಿದ್ದರು. ಅದರಂತೆ ನಾವು ಬರಹಗಾರ ಪ್ರಭುಗಳು ಅವರ ವಿನಂತಿಯನ್ನು ಶಿರಸಾ ವಹಿಸಿ ಪಾಲಿಸುತ್ತಿದ್ದೆವು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೨ನೇ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ