Advertisement

Category: ಸರಣಿ

ಪ್ರಬಂಧಕಾರನಿಗೆ ಉಪದೇಶಾಮೃತ

ಪ್ರಾಮಾಣಿಕವಾದದ್ದಾಗಲೀ, ಯಥೋಚಿತವಾದದ್ದಾಗಲೀ, ದುರುದ್ದೇಶಪೂರ್ವಕವಾದದ್ದಾಗಲೀ ಉಪದೇಶವೆಂಬುದು ಉಪದೇಶವೇ! ಈ ಜಗತ್ತಿನಲ್ಲಿ ಉಪದೇಶಗಳಿಂದ ಆಗಿರುವಷ್ಟು ಹಾವಳಿ ಇನ್ನು ಯಾವುದರಿಂದಲೂ ಆಗಿಲ್ಲ. ಎಲ್ಲ ಬಣ್ಣದ, ಎಲ್ಲ ನೆರಳಿನ, ಎಲ್ಲ ಧರ್ಮದ, ಎಲ್ಲ ವಿತಂಡವಾದದ ಸಕಲ ರೀತಿಯ ಆಧ್ಯಾತ್ಮಿಕ, ಸಾಂಸ್ಕೃತಿಕ ಉಪದೇಶಗಳಿಂದ ಈ ಜಗತ್ತು ನಲುಗಿ ನಲುಗಿ ಬಸವಳಿದುಹೋಗಿದೆ. ಈಗಾಗಲೇ ಸತ್ಯವನ್ನು ಕಂಡಾಗಿದೆ, ಹೇಳಿಯೂ ಆಗಿದೆ ಎಂಬ ಬಾಲಿಶ ಧೋರಣೆಯಿಂದ ಕೊನೆಗೂ ನಾನು ಒಂದು ಮಾತು ಹೇಳುತ್ತೇನೆ.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಕೊನೆಯ ಪ್ರಬಂಧ ನಿಮ್ಮ ಓದಿಗೆ

Read More

ಇಲ್ಲಿದ್ದಾನೆ… ನೀರಿನಲ್ಲಿ ಹೆಸರು ಕೆತ್ತಲಾದವನು

ಸಹೋದರನನ್ನು ಕಳೆದುಕೊಂಡ ಶೋಕ ದುಮ್ಮಾನ ಒಂದು ಕಡೆ, ಹೊಸ ಸ್ನೇಹ ಪ್ರೇಮಾಂಕುರಗಳ ಜೀವಸೆಲೆ ಇನ್ನೊಂದೆಡೆ, ಅವನ ಕವಿತೆಗಳು ಆ ಇಡೀ ವರ್ಷ ನೋವು ನಲಿವುಗಳ, ಖಿನ್ನತೆ ಉತ್ಸಾಹಗಳ ಉಯ್ಯಾಲೆಯಲ್ಲಿ ತೂಗಿ ತೇಲಿದವು. ವಾಸ್ತವದಲ್ಲಿ ಹರುಷ ಹಾಗು ವ್ಯಥೆಗಳು ಜೊತೆಜೊತೆಗೆ ಬದುಕಿ ಸಾಗುವುದನ್ನು ಪ್ರದರ್ಶಿಸಿದವು. ಬೇರೆಬೇರೆ ವಸ್ತುಗಳ ಪದ್ಯಗಳನ್ನು ಬೇರೆಬೇರೆ ಛಂಧಸ್ಸಿನಲ್ಲಿ ಬರೆಯುವ ಕೌಶಲ ಆತನಿಗಿತ್ತು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಕವಿ ಜಾನ್‌ ಕೀಟ್ಸ್‌ ಕುರಿತ ಬರೆದಿದ್ದಾರೆ ಯೋಗೀಂದ್ರ ಮರವಂತೆ

Read More

ವಿದ್ಯಾರ್ಥಿಗಳ ಓದಿಗೆ ಆಸರೆಯಾಗುತ್ತಿದ್ದ ಮಹಲುಗಳು…

ನಾನಿದ್ದಲ್ಲಿಂದ ಅಲ್ಲಿಗೆ ಹೋಗಲು 10 ನಿಮಿಷ ಬೇಕಿತ್ತು. ಅಲ್ಲಿಗೇ ಹೊರಟೆ. ‘ಮನೆಯಲ್ಲಿ ಎಲ್ಲರೂ ಕೂಡಿ ತಿನ್ನುವುದು ಒಳ್ಳೆಯದು’ ಎಂದು ಒಳತೋಟಿ ಹೇಳುತ್ತಿತ್ತು. ಆದರೆ ನಾನು ಕೇಳುವ ಪರಿಸ್ಥಿತಿಯಲ್ಲಿರಲಿಲ್ಲ. ಹೋಗಿ ಒಂದು ಕಡೆ ಹುಲ್ಲುಹಾಸಿನ ಮೇಲೆ ಕುಳಿತು ಸ್ವಲ್ಪ ತಿನ್ನುವುದರೊಳಗಾಗಿ ಗಾರ್ಡ್ ಬಂದು ‘ಎಂಟು ಗಂಟೆ ಆಗಿದೆ’ ಎಂದು ಸೀಟಿ ಹೊಡೆದು ಎಚ್ಚರಿಸಿ ಹೊರಗೆ ಹೋಗಲು ಸೂಚಿಸಿದ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ಇತರೆಯವರು ಮತ್ತು ನಾವುಗಳು…

ಇತರೆಯವರಿಗೆ ಯಾವತ್ತೂ ನಮ್ಮಷ್ಟು ಸೂಕ್ಷ್ಮತೆ, ಅಭಿರುಚಿ, ಸಾಮರ್ಥ್ಯ ಇದೆಯೆಂದು ಯಾವ ಜಾತಿಯವರೂ ಒಪ್ಪುವುದಿಲ್ಲ. ಮೇಲು ಮತ್ತು ಕೀಳು ಜಾತಿಗಳಲ್ಲಿರುವ ತುದಿ ನಿಲುವಿನ ಮಂದಿ ಮಾತ್ರವಲ್ಲ, ಈ ಎರಡು ತುದಿ-ತುದಿಗಳ ನಡುವೆ ಇರುವ ಸಾವಿರಾರು ಜಾತಿಗಳಲ್ಲಿ ಪ್ರತಿಯೊಂದು ಜಾತಿಯವರಿಗೂ “ಇತರೆ”ಯವರ ಅಗತ್ಯವಿದೆ – ದ್ವೇಷಿಸಲು, ವಿನಾಶ ಬಯಸಲು, ಭ್ರಮಾಲೋಕದಲ್ಲಿ ಬದುಕಲು.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಹದಿಮೂರನೆಯ ಪ್ರಬಂಧ ನಿಮ್ಮ ಓದಿಗೆ

Read More

ಬಾಯಿಗೆ ಸಿಗದ ಗೆಣಸು ಮತ್ತು ಮೇಷ್ಟ್ರು ಎಸೆದ ನೋಟ್ಬುಕ್

ಎಲ್ಲರಿಗಿಂತ ಚೆನ್ನಾಗಿಯೇ ಬರೆದಿದ್ದ ನನಗೆ, ಹಾಗೆ ಮೇಷ್ಟ್ರು ಹೊಡೆದದ್ದರಿಂದ ದಿಗ್ಬ್ರಾಂತನಾಗಿ ನೋಡುತ್ತಿದ್ದೆ. ನಾನು ಸಾವರಿಸಿಕೊಳ್ಳಲು ಬಹಳ ಸಮಯ ಬೇಕಾಯಿತು. ಕಣ್ಣಿನಿಂದ ನೀರು ಸುರಿಯುತ್ತಿತ್ತು. ನೋಟ್ ಬುಕ್ ನನ್ನಿಂದ ಇಪ್ಪತ್ತೈದು ಮೀಟರ್‌ನಷ್ಟು ದೂರ ಬಿದ್ದಿತ್ತು. ಹಾಳೆಗಳು ಗಾಳಿಗೆ ಹಾರುತ್ತಿದ್ದವು. ಅವರ ತರಗತಿ ಮುಗಿದ ಮೇಲೆ ಈ ಹಿಂದೆ ನಮಗೂ ಹೀಗೆ ಮಾಡಿದ್ದರು ಎಂದು ನನ್ನ ಗೆಳೆಯರು ನನ್ನನ್ನು ಸಮಾಧಾನ ಮಾಡಿದರು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ