Advertisement

Category: ಸರಣಿ

ಕೈ ಹಿಡಿದು ನೀ ನಡೆಸು ಮುಂದೆ…: ಕಾರ್ತಿಕ್ ಕೃಷ್ಣ ಸರಣಿ

ಡೆರೆಕ್ ರೆಡ್ಮಂಡ್ ಆ ದಿನ ಪದಕವನ್ನು ಗೆಲ್ಲಲಿಲ್ಲ. ಆದರೆ ಅವನು ಅದಕ್ಕಿಂತ ಹೆಚ್ಚು ಬೆಲೆಬಾಳುವ ಪ್ರಪಂಚದಾದ್ಯಂತದ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದ. ಬಾರ್ಸಿಲೋನಾ ಒಲಿಂಪಿಕ್ಸ್‌ನ ಆ ಘಟನೆ, ರೆಡ್ಮಂಡ್‌ನ ಪರಿಶ್ರಮ, ಮಾನವ ಸಂಬಂಧಗಳ ಶಕ್ತಿ, ತಂದೆ ಮತ್ತು ಮಗನ ನಡುವಿನ ಮುರಿಯಲಾಗದ ಬಂಧದ ಸಂಕೇತವಾಗಿ ಅಜರಾಮರವಾಗಿ ಉಳಿಯಿತು. ನಿಜವಾದ ಯಶಸ್ಸು ಅಡಗಿರುವುದು ಗೆಲ್ಲುವುದರಲ್ಲಿ ಮಾತ್ರವಲ್ಲ, ಎಂತಹದೇ ಅಡೆತಡೆಗಳು ಎದುರಾದರೂ ಮುಂದುವರಿಯುವ ಧೈರ್ಯವಿರುವುದರಲ್ಲಿ ಎಂದು ಎಲ್ಲರಿಗೂ ಸಾರಿ ಹೇಳಿತು.
ಕಾರ್ತಿಕ್‌ ಕೃಷ್ಣ ಬರೆಯುವ “ಒಲಂಪಿಕ್ಸ್‌ ಅಂಗಣ” ಸರಣಿ

Read More

ಸನ್ಯಾಸಿನ್‌ ಅಂದ್ರೆ ಯಾರು?: ಎಚ್. ಗೋಪಾಲಕೃಷ್ಣ ಸರಣಿ

ಸಂಸ್ಥೆಯ ಹಿಂದಿರುವ ವಿವೇಕಾನಂದರ ಒತ್ತಾಸೆಯ ಸ್ಪೂರ್ತಿದಾಯಕ ನಿಲುವು ಸಾರ್ವಜನಿಕರಲ್ಲಿ ಹೆಚ್ಚು ಪ್ರಚಾರ ಪಡೆದಿಲ್ಲ ಮತ್ತು ಸಹೋದರಿ ನಿವೇದಿತಾ ಅವರ ಕೊಡುಗೆಯನ್ನು ಸಂಪೂರ್ಣವಾಗಿ ಮರೆತುಬಿಡಲಾಗಿದೆ. ಅದೇ ರೀತಿಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಗೆ ೩೭೦ಎಕರೆ ಜಮೀನು ದಾನವಾಗಿ ನೀಡಿದ ಮೈಸೂರು ಮಹಾರಾಜರಾಗಿದ್ದ ಕೃಷ್ಣರಾಜ್ ಒಡೆಯರ್ ಅವರನ್ನು ಸಹ ಸಂಪೂರ್ಣವಾಗಿ ಮರೆಯಲಾಗಿದೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ತೆರಡನೆಯ ಕಂತು ನಿಮ್ಮ ಓದಿಗೆ

Read More

ಅಯ್ಯೋ ಉಪ್ಪಿಟ್ಟಾ!: ಚಂದ್ರಮತಿ ಸೋಂದಾ ಸರಣಿ

ಎಲ್ಲ ಬಗೆಯ ಉಪ್ಪಿಟ್ಟುಗಳಲ್ಲಿ ಅವರೆಕಾಳಿನ ಉಪ್ಪಿಟ್ಟಿನ ಗಮ್ಮತ್ತೆ ಬೇರೆ. ಯಾರಾದರೂ ಮನೆಗೆ ಬಂದಾಗ ಉಪ್ಪಿಟ್ಟು ಕೊಡಲಾ? ಅಂತ ಕೇಳಿದರೆ `ಈಗ ತಿಂಡಿಯೇನು ಬ್ಯಾಡ’ ಅಂತಾರೆ. `ಅವರೆಕಾಳು ಉಪ್ಪಿಟ್ಟು ಮಾಡಿದ್ದೆ. ಅದ್ಕೆ ಕೇಳ್ದೆ’ ಅಂತ ಹೇಳಿನೋಡಿ. `ಅವರೆಕಾಳು ಉಪ್ಪಿಟ್ಟಾ, ಸ್ವಲ್ಪ ಕೊಡಿ’ ಅಂದೇ ಅಂತಾರೆ. ಅವರ ಮಾತು ನಂಬಿ ತುಸು ಕೊಟ್ಟರೆ `ಬಹಳ ಚೆನ್ನಾಗಿದೆ…
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಇಪ್ಪತ್ನಾಲ್ಕನೆಯ ಕಂತು

Read More

ಪೂರ್ಣೇಶ್‌ ಮತ್ತಾವರ ಹೊಸ ಸರಣಿ “ನವೋದಯವೆಂಬ ನೌಕೆಯಲ್ಲಿ…” ಶುರು..

ಪಾಪ! ‘ಹನಿಮೂನ್’ ಪದವನ್ನು ತಾನು ನೋಡಿದ್ದ ರವಿಚಂದ್ರನ್ ಸಿನಿಮಾಗಳ “ಹನಿಮೂನ್ ಗೆ ಹೋಗಿ ಬರೋಣ…” ಎಂಬಂತಹ ಡೈಲಾಗ್‌ಗಳಲ್ಲಿ ಮಾತ್ರ ಕೇಳಿದ್ದ, ಅಮಾಯಕರಲ್ಲಿ ಅಮಾಯಕನಂತಿದ್ದ ರುದ್ರಸ್ವಾಮಿ, ‘ಹನಿಮೂನ್’ ಎಂದರೆ ಅಮೆರಿಕ, ಇಂಗ್ಲೆಂಡ್ ನಂತಹ ಯಾವುದೋ ಸುಂದರ ದೇಶವೋ ಇಲ್ಲ ಲಂಡನ್, ಪ್ಯಾರಿಸ್ ನಂತಹ ಸುಂದರ ನಗರವೋ ಇರಬೇಕೆಂದು ಆ ಕ್ಷಣದವರೆಗೂ ಪರಿಭಾವಿಸಿದ್ದ!
ನವೋದಯ ಶಾಲಾ ದಿನಗಳ ನೆನಪುಗಳ ಕುರಿತು ಪೂರ್ಣೇಶ್‌ ಮತ್ತಾವರ ಬರೆಯುವ ಹೊಸ ಸರಣಿ “ನವೋದಯವೆಂಬ ನೌಕೆಯಲ್ಲಿ…” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ

Read More

ಕೂರಾಪುರಾಣ ೫: ಸೂಜಿಗಳು ಮತ್ತು ಸಂಕಷ್ಟಗಳು

ಲೀಶ್ ಹಾಕಿ ಸೂಜಿ ಚುಚ್ಚುವುದಿಲ್ಲ ಎಂದು ಅವನಿಗೆ ತಿಳಿಯುವ ಹಾಗೆ ನಯವಾಗಿ ವರ್ತಿಸುತ್ತ ನಿಧಾನವಾಗಿ ಲೀಶ್ ಅಭ್ಯಾಸ ಮಾಡಿಸಲು ಸುಮಾರು ಮೂರು ತಿಂಗಳುಗಳೇ ಹಿಡಿಯಿತು. ನಾಯಿಗಳ ಮನಸ್ಸಿನಲ್ಲಿ ಯಾವುದರ ಬಗ್ಗೆಯಾದರು ಭಯ ಕೂತು ಬಿಟ್ಟರೆ ಅವುಗಳಿಗೆ ಆ ವಿಷಯದ ಬಗ್ಗೆ ಅದೆಷ್ಟು ಭಯವಿರುತ್ತದೆ ಎಂದು ಗೊತ್ತಾಗಿದ್ದು ಆಗಲೇ. ಚಿಕ್ಕವರಿದ್ದಾಗ ನಾಯಿಯ ಬಾಲಕ್ಕೆ ಹುಡುಗರು ಪಟಾಕಿ ಕಟ್ಟಿ ಅದು ಸಿಡಿದಾಗ ಕುಂಯ್ಯ ಕುಂಯ್ಯ ಎಂದು ಓಡಿ ಹೋದದ್ದು, ಅದನ್ನು ನೋಡಿ ನಾವು ನಕ್ಕಿದ್ದನ್ನೆಲ್ಲ ನೆನೆದು ಅದೆಷ್ಟು ಪ್ರಾಣಿಗಳು ನಮ್ಮಿಂದ ಹಿಂಸೆ ಪಟ್ಟಿವೆಯೋ ಎನ್ನಿಸುತ್ತದೆ.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ