Advertisement

Category: ಸರಣಿ

ʻಲೋಕ ಸಿನಿಮಾ ಟಾಕೀಸ್‌ʼ ನಲ್ಲಿ ತೈವಾನ್‌ ನ ʻಯಿ ಯಿʼ ಸಿನಿಮಾ

ಒಂದರಿಂದ ಬಿಡಿಸಿಕೊಂಡು ಮತ್ತೊಂದಕ್ಕೆ ಪ್ರವೇಶ ಮಾಡಲು ಸಾಧ್ಯವೇ ಎನ್ನುವುದರ ಗೊಂದಲ‌ ಮತ್ತು ಆತಂಕ ಎಲ್ಲವೂ ಅವುಗಳ ಸೂಕ್ಷ್ಮ ಅಭಿನಯದಲ್ಲಿ ವ್ಯಕ್ತವಾಗುತ್ತದೆ. ಸದ್ಯದ ಸಂದರ್ಭದಲ್ಲಿ ಜೀವನದ ಒಂದು ನೆಲೆಯನ್ನು ಬದಿಗಿಟ್ಟು ಮತ್ತೊಂದನ್ನು ರೂಪಿಸಿಕೊಳ್ಳುವ ಶಕ್ತಿ ಮತ್ತು ಅದು ಎಟುಕುವ ರೀತಿಯಲ್ಲಿ ಇದೆಯೇ ಎನ್ನುವ ಪ್ರಶ್ನೆ ಅವಳಿಗೆ.”

Read More

ಜಾತಿಯೆಂಬ ತಡೆರೇಖೆಗಳನ್ನು ದಾಟಿಕೊಂಡು..

ಬಾಬು ಮಾಮಾನ ಗೆಳೆಯನೊಬ್ಬ ನನ್ನನ್ನು ಪ್ರೀತಿಯಿಂದ ಕಾಣುತ್ತಿದ್ದ. ಎತ್ತಿ ಆಡಿಸುತ್ತಿದ್ದ. ಆತನೊಮ್ಮೆ ಬಾವಿಯಿಂದ ನೀರು ತುಂಬಿಕೊಂಡು ಹೋಗುತ್ತಿದ್ದುದು ಕಾಣಿಸಿತು. ಅವನನ್ನು ಕಂಡೊಡನೆ ಖುಷಿಯಿಂದ ಅವನ ಹಿಂದೆ ಓಡಿದೆ. ಅವನ ಹಳದಿ ರುಮಾಲಿನ ಚುಂಗವನ್ನು ಹಿಡಿದು ‘ಮಾಮಾ’ ಎಂದು ಕೂಗಿದೆ. ಆತನಿಗೆ ಬಹಳ ಸಿಟ್ಟು ಬಂದಿತು. ನನ್ನ ಕಪಾಳಿಗೆ ಹೊಡೆದು ರಸ್ತೆ ಮೇಲೆ ನೀರು ಚೆಲ್ಲಿ ಮತ್ತೆ ಕೊಡ ತುಂಬಲು ಬಾವಿಯ ಮೆಟ್ಟಿಲುಗಳನ್ನು ಇಳಿಯ ತೊಡಗಿದ.”

Read More

ಪಾತ್ರೆಗಳ ರಾಶಿ, ಕಾಡುನಡುಗಿಸುವ ಹುಲಿಗರ್ಜನೆ

ಒಳಗೇನೋ ಕೆಲಸದಲ್ಲಿ ನಿರತರಾಗಿದ್ದ ಹಲೀಮಾರು ಪೆರ್ನುವನ್ನು ನೋಡಿ ಹೊರಗೆ ಬಂದರು. ಇದಿನಬ್ಬ ತನ್ನಕ್ಕನ ಮನೆಯಲ್ಲಿ ಇಲ್ಲ ಎಂಬ ವಿಷಯ ಕೇಳಿದ ಕೂಡಲೇ ಹಲೀಮಾ ಕುಸಿದು ಕುಳಿತರು. ಮಗನ ಮುಖ ಒಮ್ಮೆಯಾದರೂ ನೋಡಬೇಕು ಎಂಬ ಆಸೆಯಿಂದ ಅವರ ಮಾತೃಹೃದಯ ನೋಯತೊಡಗಿತು.
ಮುನವ್ವರ್ ಜೋಗಿಬೆಟ್ಟು ಬರೆಯುವ ‘ಡರ್ಬನ್ ಇದಿನಬ್ಬ’ ಕಿರು ಕಾದಂಬರಿಯ ಮೂರನೆಯ ಕಂತು.

Read More

ಅಚ್ಚಗನ್ನಡದ ಹರಿಕಾರ ಮುಳಿಯ ತಿಮ್ಮಪ್ಪಯ್ಯ

ತಮ್ಮ ವಿಮರ್ಶೆಯ ಕೃತಿಗಳಲ್ಲಿ ಮುಳಿಯ ತಿಮ್ಮಪ್ಪಯ್ಯನವರು ತೋರಿಸಿಕೊಟ್ಟ ದೇಸೀ ವಿಮರ್ಶೆಯ ಮಾರ್ಗದ ಮಹತ್ವವನ್ನು ಕೂಡ ಸರಿಯಾಗಿ ಗುರುತಿಸಲಾಗಿಲ್ಲ. ಉದಾಹರಣೆಗೆ ಅವರು ಪಂಪನ ‘ಆದಿಪುರಾಣ’ವು ರಸಕಾವ್ಯ, ‘ವಿಕ್ರಮಾರ್ಜುನ ವಿಜಯ’ವು ಶೀಲ ಪ್ರತಿಪಾದನೆಯ ಕಾವ್ಯ ಎಂದು ಗುರುತಿಸಿರುವುದು ಮಹತ್ವದ ಸಂಗತಿಯಾಗಿದೆ. ಭಾರತೀಯ ಕಾವ್ಯಮೀಮಾಂಸೆಯನ್ನು ಅರಗಿಸಿಕೊಂಡವರ ಒಳನೋಟ ಇದು. ಅಲ್ಲದೆ ಅರಿಸ್ಟಾಟಲ್ ಕೂಡ ‘ಇಥೋಸ್’ ಅನ್ನುವುದನ್ನು…”

Read More

ಡಾಕ್ಟರ್ ಸೂರ್ಯ ಕುಮಾರ್ ನೆನಪುಗಳ ಮೆರವಣಿಗೆ ಇಂದಿನಿಂದ

ಜನನ ಮರಣಗಳನ್ನೆರಡನ್ನೂ ನೋಡುವ ವೈದ್ಯ ವೃತ್ತಿ ಇತರ ವೃತ್ತಿಗಳಿಂದ ವಿಭಿನ್ನವಾದುದು. ವಿಧಿ ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ವೈದ್ಯರಂತೂ ಎಷ್ಟೋ ನ್ಯಾಯದಾನ ಪ್ರಕ್ರಿಯೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವವರು. ಕೊಡಗಿನ ವೈದ್ಯ ಡಾ. ಕೆ.ಬಿ. ಸೂರ್ಯಕುಮಾರ್ ಅಂತಹ ವೃತ್ತಿಯಲ್ಲಿ ಸಂತೋಷ ಕಾಣುವವರು. ಅವರು ‘ನೆನಪುಗಳ ಮೆರವಣಿಗೆ’ ಅಂಕಣದಲ್ಲಿ ವೈದ್ಯಲೋಕದ ಕಥೆ ಹೇಳಲಿದ್ದಾರೆ. 

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ