Advertisement

Category: ಸರಣಿ

ಮಕ್ಕಳ ಮನಸ್ಸಿನ ಮೇಲೆ ಸಂಬಂಧಗಳ ಪ್ರಭಾವಗಳು…: ಅನುಸೂಯ ಯತೀಶ್ ಸರಣಿ

ಆ ಹುಡುಗನನ್ನು ಹತ್ತಿರ ಕರೆದು ನಿನಗೆ ಅಮ್ಮ ಇಲ್ಲದಿದ್ದರೇನು ನಾನು ನಿನ್ನ ಅಮ್ಮನಂತೆ, ನಾನು ನಿನ್ನನ್ನು ಪ್ರೀತಿಸುವುದಿಲ್ಲವೇ? ಎಂದು ಸಮಾಧಾನ ಮಾಡಿದೆ. “ನಾನು ಮರೆತರು ಇವರೆಲ್ಲ ನನ್ನನ್ನು ಮರೆಯಲು ಬಿಡುವುದಿಲ್ಲ ಮಿಸ್. ದಿನ ದಿನ ನೆನೆಸಿ ನೆನೆಸಿ ನನ್ನನ್ನು ಅಳಿಸುತ್ತಾರೆ ಎಂದ. ಈಗ ನಿನ್ನ ಗೆಳೆಯರು ಒಳ್ಳೆಯವರಾಗಿದ್ದಾರೆ. ಇನ್ಮೇಲೆ ಅವರು ನಿನ್ನ ಹೀಗೆಲ್ಲ ಅಳಿಸುವುದಿಲ್ಲ ಇನ್ನು ಮುಂದೆ ನಿನ್ನ ಜೊತೆ ಇರುತ್ತಾರೆ.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗೆ

Read More

ಪ್ರಕೃತಿಯೇ ದೇವರೆನ್ನುವ ಕವಿ: ಎಸ್. ಜಯಶ್ರೀನಿವಾಸ ರಾವ್ ಸರಣಿ

ಹೆಯ್ಕೊನೆನ್ ಅವರ ಕಾವ್ಯದಲ್ಲಿ ಪ್ರಕೃತಿಯು ಜೀವದಿಂದ ತುಂಬಿದೆ; ಅದಕ್ಕೆ ಕಣ್ಣುಗಳಿವೆ, ಮೂಗುಗಳಿವೆ (‘ಮಾನವ ತವಕದ ವಾಸನೆ ಬರುತಿದೆ’), ಆದರೆ ಅದೇ ಸಮಯದಲ್ಲಿ ಪ್ರಕೃತಿಯು ಮನುಷ್ಯರಿಂದ ಅಪಾಯಕ್ಕೊಳಗಾಗುತ್ತದೆ. ಅಂತರಿಕ್ಷವೂ ಸುರಕ್ಷಿತವಾಗಿಲ್ಲ; ಸ್ಪುಟ್ನಿಕ್ ಮತ್ತು ಕೀಲು ಸಡಿಲವಾಗಿಹೋದ ಉಪಗ್ರಹಗಳ ಜತೆಗೆ ನಾಯಿ ಲಾಯ್ಕಾ ಒಂದು ಜೀವಂತ ಕಾವಲುನಾಯಿಯಂತೆ ಮುಂದಿನ ಶತಮಾನಗಳವರೆಗೆ ಅಂತರಿಕ್ಷದಲ್ಲಿ ತೇಲುತ್ತಲಿರುತ್ತವೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ಕಾರ್ತಿಕ್‌ ಕೃಷ್ಣ ಬರೆಯುವ “ಒಲಂಪಿಕ್ಸ್‌ ಅಂಗಣ” ಸರಣಿ ಇಂದಿನಿಂದ

ಭವ್ಯವಾದ ಉತ್ಸವದಲ್ಲಿ ಪಾಲ್ಗೊಳ್ಳುವುದೇ ಹಲವಾರು ಕ್ರೀಡಾಪಟುಗಳ ಕನಸು. ಅದನ್ನು ಸಾಕಾರಗೊಳಿಸಲು ಹಗಲಿರುಳು ಶ್ರಮಿಸುವ ಎಷ್ಟೋ ಅಥ್ಲೀಟ್‌ಗಳಲ್ಲಿ ಗುರಿಮುಟ್ಟುವುದು ಬೆರಳೆಣಿಕೆಯ ಮಂದಿಯಷ್ಟೇ! ಉಳಿದವರು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದೆ ತಮ್ಮ ಸೌಭಾಗ್ಯವೆಂದು ಮುಂದಿನ ನಾಲ್ಕು ವರುಷಗಳನ್ನು ಇನ್ನಷ್ಟು ತಯಾರಿಯೊಂದಿಗೆ ಕಳೆಯುತ್ತಾರೆ. ಸೋತವರು ಒಂದೆಡೆಯಾದರೆ, ಕೂದಲೆಳೆಯ ಅಂತರದಲ್ಲಿ ಪದಕ ವಂಚಿತರಾದವರು ಇನ್ನೊಂದೆಡೆ. ಇಲ್ಲಿ ದಾಖಲೆಗಳು ಸೃಷ್ಟಿಯಾಗುತ್ತವೆ, ದಾಖಲೆಗಳು ಧೂಳಿಪಟವಾಗುತ್ತವೆ. ಕಾರ್ತಿಕ್‌ ಕೃಷ್ಣ ಹೊಸ ಸರಣಿ “ಒಲಂಪಿಕ್ಸ್‌ ಅಂಗಣ” ಪ್ರತಿ ಶನಿವಾರಗಳಂದು ನಿಮ್ಮ ಕೆಂಡಸಂಪಿಗೆಯಲ್ಲಿ

Read More

ಆಟದ ಸುತ್ತ ಒಂದು ಸುತ್ತು: ಚಂದ್ರಮತಿ ಸೋಂದಾ ಸರಣಿ

ಮಳೆಗಾಲ ಮುಗಿದ ಮೇಲೆ ಊರಿನ ಬೀದಿ ಶಾಲೆಯ ಅಂಗಳ, ದೇವಸ್ಥಾನದ ಮುಂದಿನ ಬಯಲು ಎಲ್ಲವೂ ನಮ್ಮ ಆಟಕ್ಕೆ ಸೂಕ್ತ ಎಂದು ಭಾವಿಸಿ ಆಡುತ್ತಿದ್ದೆವು. ಮುಟ್ಟಾಟ ಅಥವಾ ಹಿಡಿಯೋ ಆಟಕ್ಕೆ ಬಹಳ ಪ್ರಾಧಾನ್ಯವಿತ್ತು. ಅಟ್ಟಿಸಿಕೊಂಡು ಹೋಗಿ ಹಿಡಿಯುವುದು ಒಂಥರಾ ಖುಶಿ ಕೊಡುತ್ತಿತ್ತು. ಇದರ ಇನ್ನೊಂದ ರೂಪವೇ ʻಕೂತು ಹಿಡಿತಿಯೋ ನಿಂತು ಹಿಡಿತಿಯೋʼ ಎನ್ನುವುದು. ಕೇಳಿದಾಗ ನಿಂತು ಎಂದರೆ ನಿಂತಾಗ, ಇಲ್ಲವೆ ಕುಳಿತು ಎಂದರೆ ಕುಳಿತಾಗ ಅವರನ್ನು ಮುಟ್ಟಬೇಕು, ಆಗ ಅವರು ಆಟದಿಂದ ಹೊರಕ್ಕೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿ

Read More

ಅಮೆರಿಕಾದ ಹುಡುಗ ರೈತನೇ!: ಗುರುಪ್ರಸಾದ ಕುರ್ತಕೋಟಿ ಸರಣಿ

ಹೋದಹೋದಂತೆ ತಾವು ಮಾಡುತ್ತಿದ್ದ ಕೆಲಸವನ್ನೂ ಬಿಟ್ಟು, ಇದನ್ನೇ ಮಾಡಲು ತೊಡಗಿ ಸಿಕ್ಕಾಪಟ್ಟೆ ದುಡ್ಡು ಮಾಡಿದರಂತೆ. ಇದ್ದ ಒಬ್ಬನೇ ಮಗನಿಗೂ ಕೂಡ ಬೇರೆ ಕಡೆ ಯಾಕೆ ಕೆಲಸ ಮಾಡ್ತೀಯಾ ನನ್ನ ಕೃಷಿ ಕೆಲಸವನ್ನೇ ಮಾಡು ಅಂತ ಅವನನ್ನೂ ತಮ್ಮ ಜೊತೆಗೆ ಸೇರಿಸಿಕೊಂಡರು. ಮಗ ಮದುವೆಯ ವಯಸ್ಸಿಗೆ ಬಂದಾಗ ಭಾರತದಲ್ಲೇ ಒಂದು ಹುಡುಗಿಯನ್ನೂ ಹುಡುಕಿದರಂತೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ತೆರಡನೆಯ ಬರಹ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ