Advertisement

Category: ಸರಣಿ

ಕೂರಾಪುರಾಣ ೧೧: ಅವನಿದ್ದರೆ ಮನೆ ತುಂಬಿದಂತೆ, ಮನಸ್ಸು ಅರಳಿದಂತೆ…

ನಮ್ಮನ್ನು ಕಾಡುತ್ತಿದ್ದ ಒಂದು ಸಂಗತಿಯೆಂದರೆ ಇಡೀ ದಿನ ಅವರು ನಾಯಿಯನ್ನು ಮನೆಯಲ್ಲಿಯೇ ಬಿಟ್ಟು ಹೋಗುತ್ತಿದ್ದುದು. ಕೂರಾನಿಗೆ ಅದು ಅಭ್ಯಾಸವಿರದೇ ಇದ್ದುದ್ದರಿಂದ ಅವನು ಹೇಗೆ ವರ್ತಿಸುತ್ತಾನೋ ಎಂಬ ಚಿಂತೆ. ಅವರ ಮನೆಯಲ್ಲಿನ ವೈರ್, ಬೆಡಶೀಟ್, ಟವೆಲ್ ಎಲ್ಲವನ್ನು ಕಚ್ಚಿ ಹಾಕುವವನೇ.. ನಾವು ಭಾರತಕ್ಕೆ ಹಾರಿದ ಮೇಲೆ ಇಲ್ಲಿ ಅವನಿಗೆ ತೊಂದರೆಯಾದರೆ ಎಂದೆಲ್ಲ ಯೋಚನೆಗಳು ಬರತೊಡಗಿ ಮತ್ತಾರಾದರು ಆ ಆಪ್‌ನಲ್ಲಿ ನಮಗೆ ಹೊಂದುವಂತವರು ಸಿಗುತ್ತಾರೇನೋ ಎಂದು ನೋಡಹತ್ತಿದೆವು.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿ

Read More

ಚಿ ಛೀ ಚೀನಾ: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ

ಅಂದವಾಗಿ ಬರೆಯುವ ಕಲೆಯಾದ ಕ್ಯಾಲಿಗ್ರಫಿ ಮತ್ತು ಚಿತ್ರಕಲೆಗಳ ಬಗ್ಗೆ ಚೀನಾದ ಜನರಿಗೆ ಅತೀವವಾದ ಆಸಕ್ತಿಯಿದೆ. ಚಿತ್ರಕಲೆ ಮತ್ತು ಕ್ಯಾಲಿಗ್ರಫಿ ಕಲೆಗಳು ಚೀನಾದಲ್ಲಿ ಒಂದಕ್ಕೊಂದು ಪೂರಕ ಎನ್ನುವಂತೆ ಬೆಳೆದುಕೊಂಡು ಬಂದಿವೆ. ವರ್ಣಚಿತ್ರವನ್ನು ರಚಿಸಿದ ಬಳಿಕ ಆ ವರ್ಣಚಿತ್ರಕ್ಕೆ ಸರಿಹೊಂದುವ ಕವಿತೆಯನ್ನು ಕಲಾತ್ಮಕವಾಗಿ ಬರೆಯಲಾಗುತ್ತಿತ್ತು. ಹೀಗೆ ಕ್ಯಾಲಿಗ್ರಫಿಯು ಚಿತ್ರಕಲೆಯ ಸೊಬಗನ್ನು ಹೆಚ್ಚಿಸುತ್ತಿತ್ತು. ಚಿತ್ರಕಲೆಗೆ ಅನುಗುಣವಾಗಿ ಕ್ಯಾಲಿಗ್ರಫಿ ಸ್ಪಂದಿಸುತ್ತಿತ್ತು. ಹಿಂದಿನ ಕಾಲದ ಚೀನೀಯರಿಗೆ ಅಕ್ಷರಗಳ ಬಗ್ಗೆ ವಿಪರೀತವೆನಿಸುವ ಮೋಹವಿತ್ತು.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ

Read More

ವೈಚಾರಿಕತೆಯ ಶುಷ್ಕತೆಯನ್ನು ದೂರವಿಡುವ ರೂಪಕಗಳು: ಎಸ್. ಜಯಶ್ರೀನಿವಾಸ ರಾವ್ ಸರಣಿ

“ವಿಜ್ಞಾನಿಗಳಿಗೆ ಕವಿಗಳೆಂದರೆ ಅನುಮಾನ; ಕವಿಗಳು, ಒಂದು ರೀತಿಯಲ್ಲಿ, ಜವಾಬ್ದಾರಿ ಇಲ್ಲದವರು ಎಂದು ಅವರು ಭಾವಿಸುತ್ತಾರೆ. ಹಾಗೂ ತನ್ನ ವೈಜ್ಞಾನಿಕ ವೃತ್ತಿಯನ್ನು ಕೂಡ ತನ್ನ ಸಾಹಿತ್ಯಿಕ ಸ್ನೇಹಿತರು ಅದೇ ರೀತಿಯಾಗಿ ಶಂಕಿಸುತ್ತಾರೆ ಎಂದು ಅವರು ಒಪ್ಪಿಕೊಂಡರು…”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಚೆಕ್ ಗಣರಾಜ್ಯದ ಕವಿ ಮಿರೊಸ್ಲಾವ್ ಹೊಲುಪ್-ರವರ (Miroslav Holub, 1923-1998) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

Read More

ಅನ್ಯಭಾಷಾ ಪದಯಾನಾ: ಸುಮಾವೀಣಾ ಸರಣಿ

ಅನ್ಯಾಭಾಷಾ ಸಂಸರ್ಗದಿಂದ ಕನ್ನಡ ಲಾಗಾಯಿತ್ತಿನಿಂದಲೂ ಅನೇಕ ಶಬ್ದಗಳನ್ನು ಕೊಳ್ಳುತ್ತಲೇ ಬಂದಿದೆ. ಆರ್ಯರು, ಗ್ರೀಕರು, ರೋಮನ್ನರು, ಪಾರಸಿಕರು, ಯವನ, ಪೋರ್ಚುಗಿಸರು, ಫ್ರೆಂಚರು, ಇಂಗ್ಲಿಷರು ಮೊದಲಾದವರ ಸಂಪರ್ಕ ಕನ್ನಡಿಗರಿಗಿತ್ತು. ಜೊತೆಗೆ ಅಕ್ಕಪಕ್ಕದ ದ್ರಾವಿಡ ಭಾಷೆಗಳು ಮತ್ತು ಮರಾಠಿ ಮೊದಲಾದ ಭಾಷೆಗಳು ವ್ಯಾಪಾರ ಸಂಬಂಧಗಳ ಮೂಲಕ ಕನ್ನಡದ ಮೇಲೆ ಪ್ರಭಾವ ಬೀರಿದ ಕಾರಣ ಕನ್ನಡ ಅನೇಕ ಪದಗಳನ್ನು ಅನಾಯಾಸವಾಗಿ ಸ್ವೀಕರಿಸಿದೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಎಂಟನೆಯ ಬರಹ

Read More

“ಡೀಲ್‌” ಬೆನ್ನಟ್ಟಿದ ಕುರಿಗಳು ಸಾರ್‌ ಕುರಿಗಳು: ಗುರುಪ್ರಸಾದ ಕುರ್ತಕೋಟಿ ಸರಣಿ

ಅಂತೂ ಅಂಗಡಿಯ ಬಾಗಿಲು ತೆರೆದುಕೊಂಡಿತು. ಸ್ವರ್ಗದ ಬಾಗಿಲೆ ತೆರೆಯಿತೋ ಏನೋ ಎಂಬಂತೆ ಜನರ ಕಣ್ಣುಗಳು ಅರಳಿದವು! ಸರ ಸರ ಅಂತ ಚಟುವಟಿಕೆಗಳು ಗರಿಗೆದರಿದವು. ಕುರಿ ದೊಡ್ಡಿ ಬಾಗಿಲು ತೆಗೆದಾಗ ಹೇಗೆ ಕುರಿಗಳು ನುಗ್ಗುತ್ತವೋ ಹಾಗೆಯೇ ಎಲ್ಲರೂ ಒಳ ನುಗ್ಗಿದರು. ನಾವೂ ಬ್ಯಾ ಅನ್ನುತ್ತ ನುಗ್ಗೆ ಬಿಟ್ಟೆವು. ಎಲ್ಲಿ ನೋಡಲಿ ಎಲ್ಲಿ ಬಿಡಲಿ ಎಂಬಂತಹ ಪರಿಸ್ಥಿತಿ. ಕೆಲವೇ ನಿಮಿಷಗಳಲ್ಲಿ ಹಲವಾರು ಜನರ ಕೈಯಲ್ಲಿ ಏನೇನೋ ವಸ್ತುಗಳು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ತೊಂಭತ್ತನೆಯ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ