Advertisement

Category: ದಿನದ ಕವಿತೆ

ವಾಣಿ ಭಂಡಾರಿ ಬರೆದ ಗಜಲ್

“ಏನೆಂದು ಹಾಡುವುದು ಕಹಿಯ ಗೂಡು ಕಟ್ಟೆ ಒಡೆದಿರುವಾಗ ಯಾರು ಕೇಳರು ಅಪಸ್ವರವನ್ನು
ಈ ನೆನಪುಗಳಿಗೇನು ಗೊತ್ತು ಮನ ಮಧುರವಾಗದೆ ಸಮಾಧಿಯಾಯಿತೆಂದು.

ಹಂಗು ತೊರೆದ ಮೇಲೆ ಬಂಧಗಳು ಬಳುವಳಿ ನೀಡಲಾರವು ಸಾಕಿ
ಆ ಭಾವನೆಗಳಿಗೇನು ಗೊತ್ತು
ಬಂಧುತ್ವ ಬರಡಾಗಿ ಜ್ವಾಲೆಯಾಯಿತೆಂದು”-ವಾಣಿ ಭಂಡಾರಿ ಬರೆದ ಗಜಲ್

Read More

ದೇವರಾಜ್ ಹುಣಸಿಕಟ್ಟಿ ಬರೆದ ಗಜಲ್

“ಲೋಕದ ಅಳಲಿನ ಮುಂದೆ ನಮ್ಮದೆಂಥ ದುಃಖ..
ಇಷ್ಟಿಷ್ಟೇ ತಾಳ್ಮೆಯನ್ನೆ ಗುಣಿಸುವುದಿದೆ ಬದುಕಿನ ತುಂಬಾ

ಅಂಬೆಗಾಲಿಡುತ್ತಲೇ ಬರುತ್ತದೆ ಅಷ್ಟಷ್ಟೇ ನೋವು
ತುಸು ನಷ್ಟವನ್ನೇ ಹೊರುವುದಿದೆ ಬದುಕಿನ ತುಂಬಾ…” -ದೇವರಾಜ್ ಹುಣಸಿಕಟ್ಟಿ ಬರೆದ ಗಜಲ್

Read More

ರೂಪಶ್ರೀ ಕಲ್ಲಿಗನೂರ್‌ ಬರೆದ ಎರಡು ಕವಿತೆಗಳು

“ಈಗೀಗ ಗೊತ್ತಾಗಿದೆ
ಕತ್ತಲಲ್ಲಿ
ಬೆಳಕಿಗೆ ಕಾದುನಿಂತ
ಕನಸುಗಳಿವೆ..
ಅಷ್ಟೇ
ನಿಜದ ಕತ್ತಲಿರುವುದು
ನಮ್ಮ ಅಪನಂಬಿಕೆಗಳಲ್ಲಿ
ನಂಬಿಸಿ
ಬಗೆವ ದ್ರೋಹಗಳಲ್ಲಿ
ಹಿಡಿದ ಹೂವಿನ ಕಾಂಡದಲ್ಲಿರುವ
ಮುಳ್ಳುಗಳಲ್ಲಿ ಅಷ್ಟೇ..‌” -ರೂಪಶ್ರೀ ಕಲ್ಲಿಗನೂರ್‌ ಬರೆದ ಎರಡು ಕವಿತೆಗಳು

Read More

ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

“ಪ್ರತೀದಿನ ಸಂಜೆ
ರಸ್ತೆ ಪಕ್ಕದ
ಗಾಂಧೀ ಪ್ರತಿಮೆಯ
ಮುಂದೆ ನಿಂತು
ನಿನ್ನ ಕನ್ನಡಕದ ಗಾಜು
ಮಬ್ಬಾಗಿದೆಯೋ ತಾತ
ಚಣವೊತ್ತು ಕಳೆದರೆ
ಮನೆ ಸೇರುವ ಗ್ಯಾರಂಟಿಯಿಲ್ಲ
ಹೋಗಿ
ಬರುತ್ತೇನೆ
ಎಂದು ವಿಷಾದಿಸಿ
ಹೊರಟುಬರುತ್ತಾಳೆ”-ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

Read More

ಮಯೂರ ಬಿ ಮಸೂತಿ ಬರೆದ ಈ ದಿನದ ಕವಿತೆ

“ಆಕಾಶದಲ್ಲಿರುವ
ನಕ್ಷತ್ರಗಳ ಎಣಿಸಲು
ಪ್ರಯತ್ನಿಸುತ್ತಿದ್ದೆ,
ನಕ್ಷತ್ರಗಳು ಮರೆಯಾಗಿ
ಈಗ ಎಣಿಸು ನೋಡೋಣ?
ಎಂದು ಕೆಣಕಿದವು.
ನನ್ನ ತಲೆಯ ಕೂದಲುಗಳನ್ನು
ಎಣಿಸಲು ಶುರುಮಾಡಿದೆ
‘ಅಜ್ಜಿಯ ಕಾಲದ ಹುಡುಗ’ನೆಂದು
ನಕ್ಷತ್ರಗಳು ನಕ್ಕವು..” -ಮಯೂರ ಬಿ ಮಸೂತಿ ಬರೆದ ಈ ದಿನದ ಕವಿತೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ