ಸಿ.ಬಿ.ಐನಳ್ಳಿ ಬರೆದ ಎರಡು ಹೊಸ ಕವಿತೆಗಳು
“ರೆಕ್ಕೆಗಳಿಗೆ ಅಕ್ಷರ ಅಂಟಿಸುತ್ತಿದ್ದಂತೆ
ಹಾರಾಟವೇ ಮರೆವು
ನಡೆದ ಒಂದೊಂದು ಹೆಜ್ಜೆಯೂ ಮರೆವಿನ
ಹಾದಿಯ ಹಾಡಾಯಿತು
ಕಲಿಸಿದರು ಕಲಿಸಿದರು ಕಲಿಸಿದರು
ಮರೆವನ್ನೇ ಕಲಿಸಿದರು ಹೆಮ್ಮೆಯಿಂದ
ಮರೆತೆ ಮರೆತೆ ಮರೆತೆ
ಮರೆತದ್ದೇನೆಂಬುದನೇ ಮರೆತೆ
ಕೆಸರ ಸಾಗರದಿ ಮೈಮರೆತು ಬೆರೆತೆ” -ಸಿ.ಬಿ.ಐನಳ್ಳಿ ಬರೆದ ಎರಡು ಹೊಸ ಕವಿತೆಗಳು

