Advertisement

Category: ವಾರದ ಕಥೆ

ಅಬ್ದುಲ್‌ ರಶೀದ್‌ ಬರೆದ ಈ ಭಾನುವಾರದ ಕಥೆ

ಕಾಣೆಯಾಗಿದ್ದ ಟಿಬೆಟನ್ ಕ್ಯಾಂಪಿನ ಮೂವರು ಹಸುಳೆಗಳು ಇದೇ ಬಿಡಾರದ ಬಾಗಿಲು ತಟ್ಟಿ ಆಹಾರ ಕೋರಿದ್ದರು. ಕುಡಿದು ಬಿದ್ದಿದ್ದ ಈ ಆಸಾಮಿ ಕಣ್ಣೇ ಬಿಟ್ಟಿರಲಿಲ್ಲ. ಆತ ಕಣ್ಣು ಬಿಟ್ಟಾಗ ಆತನ ಮಡದಿ ಅದಾಗಲೇ ಲಾಮಾ ಮಕ್ಕಳ ಬಟ್ಟೆ ಬದಲಾಯಿಸಿ, ಬಿಸಿ ನೀರಲ್ಲಿ ಸ್ನಾನ ಮಾಡಿಸಿ, ಹೊಟ್ಟೆಗೆ ತಿನ್ನಲು ಕೊಟ್ಟು, ಅವರ ಕಾಷಾಯ ವಸ್ತ್ರಗಳನ್ನು ಒಗೆದು ಬಿಸಿಲಿಗೆ ಒಣಗಲು ಹಾಕಿ, ಅವರಿಗೆ ಕಂಬಳಿ ಹೊದೆಸಿ ಬೆಚ್ಚಗೆ ಮಲಗಿಸಿ ಅವರನ್ನು ಕಾದು ಕುಳಿತಿದ್ದಳು.
ಅಬ್ದುಲ್‌ ರಶೀದ್‌ ಬರೆದ ಕಥೆ “ಅಂತಾರಾಷ್ಟ್ರೀಯ ಕುಂಬಳಕಾಯಿ”

Read More

ರವೀಂದ್ರ ನಾಯಕ್‌ ಸಣ್ಣಕ್ಕಿಬೆಟ್ಟು ಬರೆದ ಈ ಭಾನುವಾರದ ಕತೆ

ದೊಡ್ಡ ಮನೆ, ಐದೆಕರೆ ಫಲವತ್ತಾದ ಕೃಷಿಭೂಮಿ, ಅಡಕೆ ತೋಟ ಮೇಲಾಗಿ ಅತ್ತೆ ನಾದಿನಿಯರ ಕಾಟವಿಲ್ಲದ ಎಲ್ಲರೂ ಬಯಸುವ ಕನಸಿನ ಸಂಸಾರ! ಏನು ಕೊರತೆ ಇತ್ತು ಸುಖಕ್ಕೆ? ಆದರೆ ಯಾಕೋ ಅಲ್ಲಿ ಸ್ವರ್ಗಕ್ಕೆ ಕಿಚ್ಚು ಹಚ್ಚುವ ಯಾವುದೇ ಸಂಭ್ರಮ ಕಾಣದೇ ನಿಧಾನವಾಗಿ ಸಂಸಾರದೊಳಗೇ ಅಸಮಾಧಾನದ ಕಿಚ್ಚು ಹೊತ್ತಿಕೊಂಡದ್ದು ಅಷ್ಟು ಬೇಗನೇ ಯಾರ ಅರಿವಿಗೂ ಬರಲಿಲ್ಲ. ಆದರೆ ಎಲ್ಲರ ಅರಿವಿಗೆ ಬರುವ ಹೊತ್ತಿಗೆ ಬಹಳ ತಡವಾಗಿ ಹೋಗಿತ್ತು.
ರವೀಂದ್ರ ನಾಯಕ್‌ ಸಣ್ಣಕ್ಕಿಬೆಟ್ಟು ಬರೆದ ಕತೆ “ಶಿಕ್ಷೆ” ನಿಮ್ಮ ಈ ಭಾನುವಾರದ ಓದಿಗೆ

Read More

ಮುದಿರಾಜ್‌ ಬಾಣದ್ ಬರೆದ ಈ ಭಾನುವಾರದ ಕತೆ

ಬಿದ್ದಿದ್ದ ಜಡೆಗುಂಡು ರಿಬ್ಬನ್‌ ತಗಂಡು ನೀಲೇಶ್‌ ಜೇಬಲ್ಲಿ ಇಟ್ಟಿಕೊಳ್ಳುವದಕ್ಕೂ ಅವನ ತಾಯಿ ಅಲ್ಲಿಗೆ ಬರುವುದಕ್ಕೂ ಸರಿ ಹೋಯಿತು. “ಏನ್‌ ನಿಮ್ಮ ಜಗಳ ಹಾವು ಮುಂಗಸಿ ಆಡಿದಂಗಾ, ಏನಾಯ್ತು? ಹೇ ಮುದುಕ ಅದೇನ್‌ ಚಡ್ಡಿ ಬಕಣದಾಗ ಇಟ್ಟಿಕಂಡಿದ್ದು?” ಅಂತ ಕೇಳಿದಳು. ಅಕ್ಕ ತಮ್ಮ ಇಬ್ಬರೂ ಒಮ್ಮೆ ಮುಖ ಮುಖ ನೋಡಿಕೊಂಡರು. “ಅಮ್ಮ ಅದು ಅದು…” ಅಂತ ರಾಗ ಎಳೆಯುವಷ್ಟರಲ್ಲಿ, “ಲೇ ತಾರ ಅವ ಸಿಕ್ಕನಾ ಬಾರೇ ಜಲ್ದಿ” ಅಂತ ನೀಲೇಶನ ತಂದೆ ಜೋರು ಜೋರಾಗಿ ಕೂಗಿದ.
ಮುದಿರಾಜ್‌ ಬಾಣದ್‌ ಬರೆದ ಈ ಭಾನುವಾರದ ಕಥೆ “ಗಂಡುಮಲಿ” ನಿಮ್ಮ ಓದಿಗೆ

Read More

ಶರಣಗೌಡ ಬಿ ಪಾಟೀಲ ಬರೆದ ಈ ಭಾನುವಾರದ ಕಥೆ

ನಿಮ್ಮಪ್ಪ ಹ್ಯಾಂಗೇ ಇರಲಿ ಅವನು ನಮ್ಮ ಕಣ್ಮುಂದೆ ಇರಬೇಕು. ಅಂವ ನನ್ನ ಪಾಲಿನ ದೇವರು. ನನ್ನ ಹಣೆಬರಹದಾಗ ಏನಿದೆಯೋ ಅದು ಆಗಿ ಹೋಗಿದೆ. ಹಿರಿಯರ ಮಾತಿಗೆ ಬೆಲೆ ಕೊಟ್ಟು ಆತನ ಜೊತೆ ಮದುವೆಯಾದೆ. ಅಂತಹ ಗಂಡನ ಜೊತೆ ಹ್ಯಾಂಗ ಸಂಸಾರ ಮಾಡ್ತಿಯೋ ಏನೋ ಅಂತ ಆಡಿಕೊಳ್ಳತಿದ್ದರು. ಅವರ ಮಾತಿಗೆ ನಾನೆಂದೂ ತಲೆ ಕೆಡಿಸಿಕೊಳ್ಳಲಿಲ್ಲ. ಹೀಗಿದ್ದರೂ ಆತ ಹೇಳದೇ ಕೇಳದೇ ಹೋಗಿದ್ದಾನೆ.
ಶರಣಗೌಡ ಬಿ ಪಾಟೀಲ, ತಿಳಗೂಳ ಬರೆದ ಸಣ್ಣ ಕತೆ “ಎಲ್ಲರಂತವನಲ್ಲ!” ನಿಮ್ಮ ಈ ಭಾನುವಾರದ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಧುಸೂದನ ವೈ. ಎನ್. ಕತೆ

ಅವಳು ಚಡಪಡಿಸಿದಳು. ಮುಷ್ಠಿ ಬಿಗಿ ಹಿಡಿದಳು. ಉಗಿದು ಅವನನ್ನು ಓಡಿಸುವುದೋ, ಅಥವಾ ಕಿರುಚಿಕೊಳ್ಳುವುದೋ ಗೊತ್ತಾಗಲಿಲ್ಲ. ಸುಮ್ಮನೆ ನಿರ್ಲಕ್ಷಿಸಿ ನಿಂತರೆ ಹೇಗೆ, ಯೋಚಿಸಿದಳು. ಅವನು ಇದಾವುದರ ಪರಿವೆಯೆ ಇಲ್ಲದಂತೆ ಬಜ್ಜಿ ತಿನ್ನುತ್ತಲೆ ಇದ್ದ. ಅವಕಾಶ ಸಿಕ್ಕಂತೆಲ್ಲ ಅವನು ಹತ್ತಿರ ಸರಿಯುತ್ತಿರುವುದು ಅವಳಿಗೆ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.
“ನಾನು ಮೆಚ್ಚಿದ ನನ್ನ ಕತೆ”ಯ ಸರಣಿಯಲ್ಲಿ ಮಧುಸೂದನ ವೈ. ಎನ್. ಬರೆದ ಕತೆ “ಬೋಣಿ”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ