Advertisement

Category: ವಾರದ ಕಥೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕೆ.ಪಿ.ಸುರೇಶ ಕತೆ

ಒಂದು ದಿನ ಕ್ಯಾಂಪಸ್ಸಿಗೆ ಬಂದ ಚಂದ್ರಮೌಳಿ ಸಂಜೆ ಸುಧಾಳೊಂದಿಗೆ ಟೀ ಕುಡಿಯುತ್ತಾ “ನೋಡು, ನಾನು ಕಲ್ಕತ್ತಾಗೆ ಹೋಗ್ತಿದ್ದೀನಿ. ಈ ಹೋರಾಟ ಎಲ್ಲ ಶಕ್ತಿಗುಂದುತ್ತಾ ಇದೆ. ಇದ್ರಿಂದೆಲ್ಲ ಏನಾದ್ರೂ ಆಗುತ್ತೆ ಅನ್ನೋ ನಂಬಿಕೆನೂ ನನಗಿಲ್ಲ. ಒಂದು ಅಮೆರಿಕನ್ ಕಂಪೆನಿಯಿಂದ ಒಳ್ಳೆ ಆಫರ್ ಇದೆ. ಎರಡು ವರ್ಷದ ಮೇಲೆ ಸ್ಟೇಟ್ಸ್‌ಗೆ ಹೋಗೋ ಛಾನ್ಸೂ ಇದೆ. ನಿಂಗೆ ಇದು ದ್ರೋಹದ ಥರ ಕಾಣಿಸಬಹುದು, ಪರ್ಸನಲ್ ಲೆವೆಲ್‌ನಲ್ಲೂ…
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕೆ.ಪಿ.ಸುರೇಶ ಕತೆ “ಯಾರಲ್ಲಿ, ಕಳೆದಿರುಳು….” ನಿಮ್ಮ ಈ ಭಾನುವಾರದ ಓದಿಗೆ

Read More

ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ ಕತೆ

ಪಕ್ಕದ ಮನೆಯ ಹುಡುಗಿ ವಿಹಿತಾ ತರಗತಿಗೆ ಫಸ್ಟ್ ಬಂದಿದ್ದಳು. ಲಚ್ಚಿಗೆ ಎರಡನೇ ಸ್ಥಾನ. ಈ ವಿಷಯ ತಿಳಿದಾಗಲೇ ಸೀಮಾ ಅಪ್‌ಸೆಟ್ ಆಗಿದ್ದಳು. ವಿಹಿತಾಳ ತಾಯಿಯ ಜೊತೆಗೆ ಸರಿಯಾಗಿ ಮಾತನಾಡುವುದಕ್ಕೂ ಆಗಿರಲಿಲ್ಲ ಅವಳಿಗೆ. ಅಕ್ಕನ ಮಗಳು ನಾಲ್ಕು ವರ್ಷಗಳಿಂದಲೂ ತರಗತಿಗೆ ಫಸ್ಟ್ ಬರುತ್ತಲೇ ಇದ್ದಾಳೆ. ಸ್ನೇಹಿತೆಯ ಮಗ ವಿಹಾನ್ ಕೀಬೋರ್ಡ್ ತರಗತಿಗೆ ಹೋಗುತ್ತಲೇ ಕಲಿಕೆಯಲ್ಲೂ ಎರಡನೇ ಸ್ಥಾನ ಪಡೆಯುತ್ತಿದ್ದಾನೆ.
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಕತೆ “ಲಚ್ಚಿಯ ಒಂದು ದಿನ” ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಎಂ.ಎಸ್‌. ಶ್ರೀರಾಮ್‌ ಕತೆ

ಅಪ್ಪ- ಮಗ ಮತ್ತೆ ಎಂದಿನಂತೆ ಕೂದಲು ಕತ್ತರಿಸಿಕೊಳ್ಳಲು ಹೋದರು. ಅಲ್ಲಿಗೆ ಹೋದಾಗ ಪ್ರಭಾತ ಅವಾಕ್ಕಾದ. ಯಾವಾಗಲೂ ಕಚಾಕಚ್‌ ತುಂಬಿರುತ್ತಿದ್ದ ಮನಿಷಾ ಹೇರ್‌ ಆರ್ಟ್‌ ಖಾಲಿಯಾಗಿತ್ತು. ಅದರ ಗಾಜುಗಳೆಲ್ಲ ಛಿದ್ರವಾಗಿ ಅವಶೇಷಗಳು ಮಾತ್ರ ಕಾಣುತ್ತಿದ್ದವು. ಒಂದೇಒಂದು ಕನ್ನಡಿ, ಒಂದು ಎತ್ತರದ ಕುರ್ಚಿ ಹಾಗೂ ನೆಲದ ಮೇಲೆ ಕುಕ್ಕರಗಾಲಿನಲ್ಲಿ ಕೂತಿದ್ದ ಕಳಾಹೀನ ಮುಖದ ಒಂಟಿ ವ್ಯಕ್ತಿ. ಅವನ ಮುಖ ನೋಡಿದಾಗ ಪ್ರಭಾತನಿಗೆ ನೆನಪಾಯಿತು – ಅಷ್ಟೂ ದಿನ ತಮ್ಮಿಂದ ಹಣ ಪಡೆಯುತ್ತಿದ್ದ ವ್ಯಕ್ತಿ ಈತನೇ. ಮೊದಲು ಮಗ, ನಂತರ ಅಪ್ಪ ಹೀಗೆ ಇಬ್ಬರೂ ಒಬ್ಬರಾದ ನಂತರ ಒಬ್ಬರು ಕತ್ತರಿಗೆ ತಲೆಯನ್ನೊಡ್ಡಿದರು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಎಂ.ಎಸ್‌. ಶ್ರೀರಾಮ್‌ ಕತೆ “ತೇಲ್ ಮಾಲಿಶ್”

Read More

ವೀರೇಶ ಶಿವಲಿಂಗಪ್ಪ ಸಜ್ಜನ ಬರೆದ ಈ ಭಾನುವಾರದ ಕತೆ

ವೃದ್ಧಾಶ್ರಮದ ಅಂಗಳ ತಮ್ಮ ಮನೆ. ಆವತ್ತು ಭಾವನಾಳೊಡನೆ ಮನೆ ಬಿಟ್ಟು ಹೋಗುವಾಗ ಅಪ್ಪ ಆರಾಮ ಕುರ್ಚಿಯ ಮೇಲೆ ನಿರ್ಲಿಪ್ತವಾಗಿ ಕೂತಿದ್ದರು. ಅಮ್ಮ ಕಣ್ಣಿನಲ್ಲಿ ನೀರು ತುಂಬಿಕೊಂಡು ನೋಡುತ್ತ ನಿಂತಿದ್ದರು. ಹದಿಮೂರು ಜನ ವೃದ್ಧ-ವೃದ್ಧೆಯರೂ ನಮ್ಮನ್ನೆ ನೋಡುತ್ತ ನಿಂತಿದ್ದರು. ಏಕೋ ನನ್ನಲ್ಲಿ ಅಳುಕು. ಭಾವನಾ ಸರಸರನೇ ಹೆಜ್ಜೆ ಹಾಕಿ ಕಾರಿನಲ್ಲಿ ಕುಳಿತುಬಿಟ್ಟಿದ್ದಳು. ಲಚ್ಚಿ ಆಗ ಗರ್ಭಿಣಿ. ನನ್ನೆಡೆಗೆ ದುರದುರನೆ ದಿಟ್ಟಿಸುತ್ತಿದ್ದಳು.
ವೀರೇಶ ಶಿವಲಿಂಗಪ್ಪ ಸಜ್ಜನ ಬರೆದ ಈ ಭಾನುವಾರದ ಕತೆ “ಕ್ಕೊ ಕ್ಕೊ ಕ್ಕೊ…” ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಶ್ರೀನಾಥ್ ರಾಯಸಂ ಕತೆ

ಹಾಲುಸೇವೆ ಮುಗಿಸಿಕೊಂಡು ಗೋಪಾಲಿ ನಾಗೇನಹಳ್ಳಿಗೆ ಮರಳುತ್ತಾನೆ ಎಂದು ನಂಬಿಕೆಯೇ ಇಟ್ಟುಕೊಂಡಿರದ ಜನಕ್ಕೆ ಆಗಬಾರದಷ್ಟು ನಿರಾಶೆಯಾಯಿತು. ‘ಇಂಥ ಪಾಖಂಡಿಯೊಬ್ಬ ಹಾಲುಸೇವೆ ಮಾಡಿ ಮರಳಿಬರುತ್ತಾನೆ ಅಂದರೆ ಅದರರ್ಥ ಏನು?’ ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಏಕಕಾಲಕ್ಕೆ ಮೂಡಿತು. ಸತ್ಯವಂತದೇವರಾದ ನಾಗಲಿಂಗಸ್ವಾಮಿ ಗೋಪಾಲಿಯಂಥ ಅಪವಿತ್ರ ದೇಹಿಯಿಂದ ಸ್ಪರ್ಷಕ್ಕೆ ಒಳಗಾಗಿ ಅದ್ಹೇಗೆ ಪರಿಣಾಮ ತೋರಿಸಲಿಲ್ಲ? ಸಾಯುವ ಘಳಿಗೆಯಲ್ಲಿ ಗುರುಶಾಂತಯ್ಯನವರು ಹಾಗೇಕೆ ಎಚ್ಚರಿಸುವ ದನಿಯಲ್ಲಿ, ಶಾಪ ಹಾಕುವ ರೀತಿಯಲ್ಲಿ ನುಡಿದರು?
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಶ್ರೀನಾಥ್ ರಾಯಸಂ ಕತೆ “ಹಾಲುಸೇವೆ” ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ