ಓಬಿರಾಯನ ಕಾಲದ ಕಥಾಸರಣಿಯಲ್ಲಿ ಗೋಪಾಲಕೃಷ್ಣ ಪೈ ಬರೆದ ಕಥೆ
“ವೆಂಕು ಹೆಂಗ್ಸಿಗೆ ತನಗಾಗದ ಮಂದಿ ಯಾರೆಂದು ಊಹಿಸುವುದು ಸುಲಭವಾಗಿತ್ತು. ಅವರುಗಳು ಆಗಾಗ ಆ ಹೋಟೇಲಿಗೆ ಬರುವುದು ಕ್ರಮ. ಬರುವುದು ಕತ್ತಲಾದ ಮೇಲೆಯೇ. ಒಂದು ದೋಸೆ ತಿಂದು ಬೇಕೆಂದೇ ಆ ಗಂಡನಿಲ್ಲದವಳೊಡನೆ ಮಾತು ತೆಗೆಯುವುದು ರೂಢಿ. ಹೆಣ್ಣು ಹಸಿದಿದ್ದಾಳೆಂದು ವಾಸನೆ ಹಿಡಿಯುವ ಬೀಜದ ಹೋರಿಗಳವು.”
Read More