Advertisement

Category: ವಾರದ ಕಥೆ

ಓಬಿರಾಯನ ಕಾಲದ ಕಥಾ ಸರಣಿಯಲ್ಲಿ ಪುಂಡೂರು ಲಕ್ಷ್ಮೀನಾರಾಯಣ ಪುಣಂಚತ್ತಾಯರು ಬರೆದ ಕತೆ

“ಮೇಲ್ಜಾತಿಯ ಹಿಂದುಗಳನ್ನೇ ದೇವರೆಂದು ನಂಬಿ, ಅವರ ಸೇವೆಯನ್ನು ಮಾಡಿಕೊಂಡಿರುವಷ್ಟು ಕಾಲ ಹೊಲೆಯರು! ಹೊಲತಿಯರು! ಧಿಕ್ಕಾರವಿರಲಿ – ಒಡಹುಟ್ಟಿದ ಹಿಂದೂ ಮಾತೆಯ ಮಕ್ಕಳನ್ನು ಈ ಪ್ರಕಾರ ದೂರ ನಿಲ್ಲಿಸುವ ಈ ಸಮಾಜ ಪದ್ಧತಿಗೆ ಧಿಕ್ಕಾರವಿರಲಿ. ಹಿಂದೂ ಮತವನ್ನು ತಿರಸ್ಕರಿಸಿ, ಕ್ರೈಸ್ತ ಅಥವಾ ಮಹಮ್ಮದೀಯ ಮತವನ್ನು…”

Read More

ಹುಟ್ಟು ಕೆಟ್ಟೇ?: ಓಬೀರಾಯನ ಕಾಲದ ಕಥಾ ಸರಣಿಯಲ್ಲಿ ಭಾರತೀಬಾಯಿ ಪಣಿಯಾಡಿ ಬರೆದ ಕತೆ

“ಹೊಲೆಯ ತಿಮ್ಮು ಒಂದು ದಿನ ನಮ್ಮಲ್ಲಿಗೆ ಉಪ್ಪಿನಕಾಯಿ ಬೇಡುವುದಕ್ಕೆ ಬಂದಿದ್ದ. ನಮ್ಮ ತಾಯಿ ಹುಳುವಾದ ಸ್ವಲ್ಪ ಉಪ್ಪಿನಕಾಯಿಯನ್ನು ಕುದಿಸಿ ಒಂದು ಎಲೆಯಲ್ಲಿ ಹಾಕಿ ಅಂಗಳದ ಮೂಲೆಯಲ್ಲಿಟ್ಟು ತೆಗೆದುಕೊಂಡು ಹೋಗೆಂದಳು. ನಾನು ಅವನ ಎದುರಿನಲ್ಲಿಯೇ “ಹುಳುವಾದ ಉಪ್ಪಿನಕಾಯಿ ಏಕೆ ಕೊಟ್ಟೆ” ಎಂದು ಕೇಳಿಬಿಟ್ಟೆ. ತಾಯಿಯು ಸಿಟ್ಟುಗೊಂಡು ನನಗೆ ಹೊಡೆಯಬಂದರು. ನಾನು ನಗುತ್ತಾ ತೋಟಕ್ಕೆ ಓಡಿದೆ.”

Read More

ಗೀತೆಯ ಸಾರ: ಧನಪಾಲ ನಾಗರಾಜಪ್ಪ ಅನುವಾದಿಸಿದ ಸೈಯದ್ ಸಲೀಂ ಕತೆ

“ದಿಗಿಲುಗೆ ಪರ್ಯಾಯ ಪದದಂತೆ ನೀನು ಮುಖವನ್ನು ಹಾಗೆ ಯಾಕೆ ಮಾಡಿಕೊಂಡೆ? ಮೊದಲು ನೀನು ನನ್ನ ಬದುಕಿನ ವಿಷಮವಾದ ಸಂಗತಿಗಳಿಂದ ಹೊರಗೆ ಬಂದುಬಿಡು. ನಾವು ಹೀಗೆ ನೋವಿನಲ್ಲಿ ಕಳೆದುಕೊಂಡ ಯಾವ ನಿಮಿಷವೂ ಮತ್ತೆ ಮರಳಿ ಬರುವುದಿಲ್ಲ. ಜೀವನ ದೇವರ ಕೊಟ್ಟ ವರ. ಹಾಗೆಂದು ನನಗೆ ನೋವೇ ಇಲ್ಲ ಎಂದುಕೊಳ್ಳಬೇಡ. ಎದೆಯಾಳದಲ್ಲಿ ಮಡುಗಟ್ಟಿರುವ ನೋವು ಹರಿತವಾಗಿ ಸದಾ ಚುಚ್ಚುತ್ತಲೇ ಇರುತ್ತದೆ.”

Read More

ಓಬಿರಾಯನಕಾಲದ ಕಥಾ ಸರಣಿಯಲ್ಲಿ ನಿರಂಜನರು ಬರೆದ “ಚಿರಸ್ಮರಣೆ” ಕಾದಂಬರಿಯ ಅಧ್ಯಾಯ “ಕಯ್ಯೂರಿನ ಶಾಲೆ”

“ಈ ಸಲವೂ ಏನನ್ನೂ ಹೇಳುವುದು ಮಾಸ್ತರಿಂದಾಗಲಿಲ್ಲ. ಅವರು ಅವಾಕ್ಕಾದರು. ಉಳ್ಳವರ ವಿಷಯ ಅವರೆಷ್ಟೊ ತಿಳಿದಿದ್ದರೂ ಈ ವಿಚಾರಸರಣಿಯ ವಿಶಿಷ್ಟತೆಯನ್ನು ಕಂಡು ಬೆರಗಾದರು. ಅವರ ಎದೆಯೊಳಗೆ ಸಂಕಟವಾಯಿತು. ಆತ್ಮಾಭಿಮಾನಿಯಾದ ಮನುಷ್ಯ. ಇಂಥ ಮಾತುಗಳನ್ನು ಕೇಳಲು ಇಷ್ಟವಿಲ್ಲದಿದ್ದರೆ ಎದ್ದು ಹೋಗಬಹುದು. ‘ಬರ್ತೇನೆ, ಕೆಲಸವಿದೆ’ ಎಂದು ಹೇಳಿ ಎದ್ದು ಹೋಗಲೇಬೇಕು, ಎನ್ನಿಸಿತು.”

Read More

“ನಟನೆ”: ಸಚೇತನ ಭಟ್ ಅನುವಾದಿಸಿದ ಹರುಕಿ ಮುರಕಮಿ ಬರೆದ ಜಪಾನೀ ಕತೆ

“ಒಂದು ಕಾಲದಲ್ಲಿ ತಾನು ಪ್ರೀತಿಸಿದ್ದ, ಜೊತೆಗೆ ತಬ್ಬಿ ಮಲಗಿದ್ದ ರಕ್ತ ಮಾಂಸಗಳಿಂದ ತುಂಬಿದ್ದ ಸುಂದರ ದೇಹ ಇವತ್ತು ಕೇವಲ ಬೂದಿ ಎನ್ನುವದನ್ನು ಜೀರ್ಣಿಸಿಕೊಳ್ಳುವದು ತಕತ್ಸುಕಿಯ ಶಕ್ತಿ ಮೀರಿದ ಕಾರ್ಯವಾಗಿತ್ತು. ಕಾಫುಕ ಈ ಶೂನ್ಯವನ್ನು ಚೆನ್ನಾಗಿ ಬಲ್ಲವನಾಗಿದ್ದ. ತಕಾತ್ಸುಕಿಯ ಕಣ್ಣುಗಳು ಅವಳ ನೆನಪಿನಿಂದ ಮಂಜಾದಾಗ ಕಾಫುಕನಿಗೆ ಅವನನ್ನು ತಬ್ಬಿಕೊಂಡು ಸಂತೈಸಬೇಕೆನಿಸಿತ್ತು. ಅವನು ತನ್ನ ಭಾವನೆಗಳನ್ನು ಮುಚ್ಚಿಡಲಾರದ ಮನುಷ್ಯನೆನಿಸಿತು. “

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ