Advertisement

Category: ದಿನದ ಪುಸ್ತಕ

‘ಕಾವ್ಯಾ ಓದಿದ ಹೊತ್ತಿಗೆʼ: ಇನ್ನು ಮುಂದೆ ತಿಂಗಳಿಗೆರೆಡು ಬುಕ್‌ ಚೆಕ್

“ಒಬಾಮಾ ಅಧ್ಯಕ್ಷರಾದರು ಅಂದ ತಕ್ಷಣ ಅಮೆರಿಕದಲ್ಲಿ ಕಪ್ಪು ಜನರ ಕಷ್ಟಗಳೆಲ್ಲ ಮುಗಿಯಿತು ಅಂತ ಅರ್ಥವಲ್ಲ. ಇದೊಂಥರಾ ಇಂದಿರಾ ಪ್ರಧಾನಿಯಾಗಿದ್ದರು ಎಂದು ಭಾರತದ ಹೆಂಗಸರಿಗೆಲ್ಲ ತಮ್ಮ ಕೋಟಲೆಗಳಿಂದ ಮುಕ್ತಿ ಸಿಕ್ಕಿಬಿಟ್ಟಿತು ಎಂದ ಹಾಗಾಗುತ್ತದೆ. ಇಂದಿನ ದಿನಮಾನ ನೋಡಿದರೆ ಬರಾಕ್ ಮತ್ತು ಮಿಶೆಲ್ ನಿರ್ಮಿಸಿದ ಕಾಲುದಾರಿ ಹೆದ್ದಾರಿಯಾಗಲು ಇನ್ನೂ ಬಹಳ ಸಮಯವಿದೆ ಎಂಬುದಂತೂ..”

Read More

ಪ್ರಜ್ಞಾ ಮತ್ತಿಹಳ್ಳಿ ಪುಸ್ತಕಕ್ಕೆ ನರಹಳ್ಳಿ ಬಾಲಸುಬ್ರಹ್ಮಣ್ಯ ಬರೆದ ಮುನ್ನುಡಿ

“ಪ್ರಜ್ಞಾ ಅವರ ಸ್ತ್ರೀ ಪಾತ್ರಗಳ ಜೀವನದಿಗೆ ಗಂಡನೊಬ್ಬನೇ ಜಗತ್ತಲ್ಲ; ಅಥವಾ ಸಂಸಾರವೇ ಸರ್ವಸ್ವವಾಗಿ ತನ್ನ ಸೃಜನಶೀಲತೆಯನ್ನು ಅದರ ತೊಡಕುಗಳ ಬಂಧನದಲ್ಲಿ ಕಳೆದುಕೊಳ್ಳುವ ಬಗೆಯೂ ಇಲ್ಲಿಲ್ಲ. ‘ತುದಿಬೆಟ್ಟದ ನೀರ ಹಾಡುʼ ಕತೆಯ ಸುಬೋಧಿನಿ ತನಗೆ ಸಹಾನುಭೂತಿ ತೋರಿಸಲು ಬಂದ ಗೆಳೆಯ ಪಾರ್ಥನಿಗೆ ಹೇಳುತ್ತಾಳೆ: ‘ನನ್ನೊಳಗಿನ ಚೈತನ್ಯದ ನದಿಗೆ ಮಗಳು, ಸೊಸೆ, ಅಮ್ಮ, ಗೆಳತಿ, ಉದ್ಯೋಗಿ, ಲೇಖಕಿ ಅಂತ ನೂರಾರು ಬಗೆಯ ಚಲನೆಗಳಿವೆ…”

Read More

‘ಕುವೆಂಪು ಸಮಗ್ರ ಸಾಹಿತ್ಯ’ ಸರಣಿಯ ಕುರಿತು ಡಾ. ಮೊಗಳ್ಳಿ ಗಣೇಶ್ ಬರೆದ ಲೇಖನ

“ಬಸವಣ್ಣ ಅವರ ಕ್ರಾಂತಿಯ ವಿಸ್ತರಣೆ ಇಲ್ಲೆಲ್ಲ ಪ್ರಭಾವ ಮಾಡಿದೆ. ಅಷ್ಟಿಲ್ಲದಿದ್ದರೆ ಬುದ್ಧ ಬಸವ ಅಂಬೇಡ್ಕರ್ ಎಂದು ದಲಿತ ಬಂಡಾಯದ ಲೇಖಕರು ಒಪ್ಪಿಕೊಂಡು ಕುವೆಂಪು ಸಾಹಿತ್ಯವನ್ನು ಇಷ್ಟು ಪರಿಯಲ್ಲಿ ಸಮರ್ಥಿಸಲು ಮುಂದಾಗುತ್ತಿರಲಿಲ್ಲ. ಬಸವಣ್ಣ ಅವರ ನಂತರಕ್ಕೆ ದೊಡ್ಡ ಮಟ್ಟದ ಅವೈದಿಕ ಲೇಖಕ ಕಾಣಿಸಿದ್ದು ಕುವೆಂಪು ಅವರಲ್ಲಿ ಮಾತ್ರ. ಎಂತಹ ಯುಗ ಸಂಯೋಜನೆಯ ಸೃಜನಶೀಲತೆಯ ಲೇಖನ”

Read More

ದೊಡ್ಡವರಿಗೂ ಸಲ್ಲುವ ಮಕ್ಕಳ ಕಥೆಗಳು

“ಒಂದರ್ಥದಲ್ಲಿ ಪಲ್ಲವಿಯವರು ಹೇಳುವಂತೆ ಭೂಮ್ತಾಯಿಯ ಒಡಲೆಲ್ಲ ಬರಿದಾಗಿ ನಿಜವಾಗಿಯೂ ರೋಗ ಪೀಡಿತ ಅಜ್ಜಿಯೇ ಆಗಿದ್ದಾಳೆ! ಅಂದರೆ, ಮನುಷ್ಯನ ದುರಾಶೆಯ ದೆಸೆಯಿಂದಾಗಿ ಭೂಮಿಯ ಅಂತ್ಯದ ದಿನಗಳು ಸನ್ನಿಹಿತವಾದವೆ ಎಂಬ ಆತಂಕ ಉಂಟಾಗುತ್ತದೆ! ಹೀಗೆ, ಈ ಕಥೆ ಮಕ್ಕಳಿಗೆ ಪರಿಸರ ಸಂರಕ್ಷಣೆಯನ್ನು ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಮನುಕುಲಕ್ಕೆ ಖಂಡಿತವಾಗಿಯೂ ಉಳಿಗಾಲವಿಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ನೀಡುತ್ತದೆ. ಹಾಗೆಯೇ, ದೃಷ್ಟಾಂತವೊಂದರ ಮೂಲಕ ತೆರೆದುಕೊಳ್ಳುವ ‘ಎಂದೂ ಮುಗಿಯದ ಕಥೆ’ ಎಂಬ ಕಥೆ, ಮಕ್ಕಳ ಕಲ್ಪನೆಯ ಕ್ಷಿತಿಜವನ್ನು ವಿಸ್ತರಿಸುವ ನಿಟ್ಟಿನಲ್ಲಿದೆ.”

Read More

‘ಕಂಡವರಿಗಷ್ಟೇ’ ಪುಸ್ತಕಕ್ಕೆ ಡಾ. ಗೀತಾ ವಸಂತ ಬರೆದ ಸಂಪಾದಕೀಯ ನುಡಿ

“ಮನುಷ್ಯನ ತರ್ಕದಾಚೆಗೆ ಸೃಷ್ಟಿಯ ಮಿಡಿತವಿರುತ್ತದೆ. “ಅನುಭವವು ಜಗತ್ತಿನ ಕಾರಣಗಳನ್ನು ಹುಡುಕುತ್ತಿದೆ. ಅನುಭಾವವು ಜಗತ್ತಿನ ಕರ್ತೃವನ್ನೇ ಹುಡುಕುತ್ತಿದೆ. ಅನುಭವಕ್ಕೆ ತಿಳಿಯಾದ, ಹದವಾದ, ಸ್ಥಿರವಾದ ಎಚ್ಚರವೇ ಬೇಕು; ಅದಷ್ಟೇ ಸಾಕು. ಅನುಭಾವಕ್ಕೆ ಇದೇ ಜಾತಿಯ ಎಚ್ಚರವೇ ಬೇಕು. ಆದರೆ ಅದು ಕನಸಿನಾಚೆಯ ನಿದ್ದೆಯಲ್ಲ. ನಿದ್ದೆಯಾಚೆಗಿನೆಚ್ಚರ. ನಿದ್ದೆಯಾಚೆಗೊಂದು ಎಚ್ಚರದ ಹಿಮಾಲಯವಿದೆ. ಅದರ ಎತ್ತರದಿಂದ ಬಹಳ ವಿಸ್ತಾರವಾದ ದೃಶ್ಯವು ಗೋಚರವಾಗುವುದು. ಈ ಎತ್ತರದ ಮೇಲಿನ ಎಚ್ಚರಕ್ಕೆ ‘ಸಮಾಧಿ’ ಎಂದು ಹೇಳುವರು.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ