Advertisement

Category: ವ್ಯಕ್ತಿ ವಿಶೇಷ

ಮುಕ್ತಛಂದದ ಶಾಂತಿನಾಥ ದೇಸಾಯಿ

ನವ್ಯ ಸಾಹಿತ್ಯದ ಪ್ರಬಲ ಪ್ರತಿಪಾದಕರಾಗಿದ್ದ ಶಾಂತಿನಾಥ ದೇಸಾಯಿ ಮತ್ತು ರಾಮಚಂದ್ರ ಶರ್ಮ ಕೊನೆಯವರೆಗೂ ನವ್ಯ ಲೇಖಕರಾಗಿದ್ದರು ಎಂಬುದು ಕೆಲವು ವಿಮರ್ಶಕರ ಅಭಿಪ್ರಾಯ. ರಾಮಚಂದ್ರ ಶರ್ಮರ ವಿಷಯದಲ್ಲಿ ಇದನ್ನು ಒಪ್ಪಬಹುದಾದರೂ ಶಾಂತಿನಾಥ ದೇಸಾಯಿಯವರ ವಿಷಯದಲ್ಲಿ ಇದನ್ನು ಒಪ್ಪಲು ಸಾಧ್ಯವಿಲ್ಲ. ಶಾಂತಿನಾಥ ದೇಸಾಯಿಯವರು ಮೊದಮೊದಲು ಬರೆದ ಕಥೆ-ಕಾದಂಬರಿಗಳಲ್ಲಿ ಸಾಮಾಜಿಕ ಪ್ರಜ್ಞೆ ಕಂಡು ಬರುವುದಿಲ್ಲವೆಂಬುದು ನಿಜವಾದರೂ ನಂತರದ ವರ್ಷಗಳಲ್ಲಿ ಅವರು ನವ್ಯತೆಯನ್ನು ಮೀರಿ ಸ್ಪಷ್ಟ ಸಾಮಾಜಿಕ ಪ್ರಜ್ಞೆಯಿಂದ ಬರೆದರು. ಶಾಂತಿನಾಥ ದೇಸಾಯಿ ಅವರ ಜನ್ಮದಿನದ ಸಂದರ್ಭದಲ್ಲಿ ವಿಕಾಸ ಹೊಸಮನಿ ಬರೆದ ಲೇಖನ ಇಲ್ಲಿದೆ. 

Read More

ವ್ಯಕ್ತಿವಿಶಿಷ್ಟತೆಯೆಡೆಗಿನ ಅಸ್ಪಷ್ಟ ಹೆಜ್ಜೆಗಳು

ಚಿಂತನಶೀಲರಾದ ಹೊಸ ತಲೆಮಾರಿನ ಯುವಜನರನ್ನು ರೂಪಿಸುವ ನಿಟ್ಟಿನಲ್ಲಿ ಸದಾ ಚಟುವಟಿಕೆಯಿಂದ ಇದ್ದ ಜಿ. ರಾಜಶೇಖರ್‌ ಅವರು ತೀರಿಕೊಂಡಿದ್ದಾರೆ. ಉಡುಪಿ ಎಂದರೆ ಜಿ.ರಾಜಶೇಖರ್‌ ಎಂದು ಹೇಳುವಷ್ಟು ಪ್ರಖರವಾಗಿ ತಮ್ಮ ವಿಚಾರಗಳನ್ನು ಮಂಡಿಸುತ್ತಿದ್ದ ಅವರು ಹೊಸವಿಚಾರಗಳಿಗೆ ಸಂಬಂಧಿಸಿದ ಚರ್ಚೆಗಳಿಗೆ ಸದಾ ಮುಕ್ತರಾಗಿದ್ದರು. ಸಿದ್ಧಾಂತಗಳು ಮತ್ತು ಆದರ್ಶ, ಅವುಗಳನ್ನು ವಾಸ್ತವವಾಗಿ ಕಾಣುವಲ್ಲಿ ಎದುರಾಗುವ ಸವಾಲುಗಳ ಕುರಿತು ತಮ್ಮದೇ ಆದ ನಿಲುವುಗಳನ್ನು ಪ್ರಾಮಾಣಿಕವಾಗಿ ಮಂಡಿಸುತ್ತಿದ್ದರು. ಅವರೊಂದಿಗಿನ ಸಹಮತ  – ಭಿನ್ನಮತಗಳ ನಡುವೆ ಸ್ನೇಹದ ದಾರಿ ಸವೆಸಿದವರು ಡಿ.ಎಸ್.‌ ನಾಗಭೂಷಣ್.‌  ರಾಜಶೇಖರ್‌ ಅವರ ಅಭಿನಂದನಾ ಗ್ರಂಥಕ್ಕೆ ಅವರು ಬರೆದಿದ್ದ ಲೇಖನವೊಂದು ನಿಮ್ಮ ಓದಿಗಾಗಿ ಇಲ್ಲಿದೆ.

Read More

ಎ.ಎನ್. ಮುಕುಂದ ಅವರ ಎರಡು ಭೇಟಿಗಳ ನೆನಪು

ಪ್ರೀತಿಯನ್ನು ಪರಿಮಳದಂತೆ ತಮ್ಮ ಸುತ್ತಲಿರುವವರಿಗೆ ಷರತ್ತೇ ಇಲ್ಲದೆ ಹಂಚಿದ ಎ.ಎನ್. ಮುಕುಂದ ಅವರು ಇಂದು ಅಗಲಿದ್ದಾರೆ. ತಾವು ಪ್ರೀತಿಸಿದ ಕಸುಬನ್ನು ಇನ್ನಷ್ಟು ಚಂದಗೊಳಿಸುತ್ತ , ತನ್ನ ಒಡನಾಡಿಗಳ ಜೊತೆ ಅದಮ್ಯ ಜೀವನ ಪ್ರೀತಿ ಹಂಚುತ್ತಾ ಬಾಳಿದವರು ಅವರು. ಲೇಖಕರಿಗೆ ಕವಿಭಾವ ಕವಿಸಮಯ ಎಂಬುದೊಂದಿರುತ್ತದೆ, ಅದನ್ನು ಕವಿಗಳು ಅಕ್ಷರಬೀಜಗಳಾಗಿಸಿ ನೆಡುತ್ತಾರೆ. ಅಂತೆಯೇ ಈ ಫೋಟೋಗ್ರಾಫರ್ ಕವಿಗಳದೇ ಆದ ಒಂದು ಭಾವ ಕ್ಷಣವನ್ನು ನೆರಳು ಬೆಳಕು ಮತ್ತು ಬಣ್ಣಗಳ ಅಪೂರ್ವ ಸಂಗಮದಲ್ಲಿ ಸೆರೆಯಾಗಿಸುತ್ತಾರೇನೋ ಅನಿಸುತ್ತದೆ ಎನ್ನುವ ಜಯಶಂಕರ ಹಲಗೂರು ಅವರು ಮುಕುಂದ ಅವರೊಡನೆ ಒಡನಾಡಿದ ಕ್ಷಣಗಳನ್ನು ಹೆಕ್ಕಿ ಲೇಖನವೊಂದನ್ನು ಬರೆದಿದ್ದಾರೆ

Read More

ಮತನಿರಪೇಕ್ಷ ಪ್ರಾಜ್ಞ ಸಾಧು ಕರೀಮುದ್ದೀನ್

ತೊಂಬತ್ತು ವರುಷದ ಪ್ರೊ. ಕರಿಮುದ್ದೀನ್ ಅವರು ಅಪಾರ ಜ್ಞಾನ ಭಂಡಾರದ ಮೇರುವಿನಂತೆ ನೆಟ್ಟಗೆ‌ ಕುತೂಹಲದಿಂದ ಕುಳಿತಿದ್ದರು.ಅವರ ಕಣ್ಣುಗಳಲ್ಲಿ ಸಾತ್ವಿಕತೆಯ ಪ್ರಖರತೆಯಿದೆ. ಮಕ್ಕಳಿಗೆ ಮಾನವೀಯತೆಯ ಶಿಕ್ಷಣ ಕೊಡಬೇಕು ಎಂದು ಆಗ್ರಹಿಸುತ್ತಾರೆ ಅವರು. ಮೂಲಭೂತವಾದವನ್ನು ಖಂಡತುಂಡವಾಗಿ ನಿರಾಕರಿಸುವವರು. ಶ್ರೀರಂಗಪಟ್ಟಣದ ಪ್ರಸಿದ್ಧ “ಗಂಜಾಂ”  ಬಡಾವಣೆಯಲ್ಲಿ ತಲೆತಲಾಂತರದ ಒಂದು ಹಳ್ಳಿ ಮನೆಯ ಪುಟ್ಟ ಕೋಣೆಯಲ್ಲಿ, ಅಣ್ಣನ ಮಕ್ಕಳ ನಿಗಾದಲ್ಲಿ ವಾಸ ಮಾಡುತ್ತಿರುವ ಅವರನ್ನು ಕಂಡುಬಂದು ಬರೆದಿದ್ದಾರೆ ಗಿರಿಜಾ ಶಾಸ್ತ್ರಿ

Read More

ಗಾಂಧಿ ಕಥನ ಕುರಿತು ನಾಗಭೂಷಣ ಕಥನ

ನಿನ್ನೆ ಇರುಳು ತೀರಿಹೋದ ನಿಷ್ಠುರ ಮನಸಿನ ಕನ್ನಡದ ವಿಮರ್ಶಕ ಡಿ.ಎಸ್.ನಾಗಭೂಷಣ ಕೈಗೆತ್ತಿಕೊಂಡ ಕೆಲಸವನ್ನು ತಪಸ್ಸಿನಂತೆ ಕುಳಿತು ಮುಗಿಸುತ್ತಿದ್ದ ಶ್ರಮಜೀವಿ ಬರಹಗಾರರಾಗಿದ್ದರು. ತುರ್ತು ಪರಿಸ್ಥಿತಿಯ ಕಾಲದಲ್ಲಿ ಆಕಾಶವಾಣಿ ದೆಹಲಿಯಿಂದ ಬರುತ್ತಿದ್ದ ಕನ್ನಡ ವಾರ್ತೆಗಳ ಪರಿಚಿತ ಮತ್ತು ಜನಪ್ರಿಯ ರೇಡಿಯೋ ಧ್ವನಿಯಾಗಿದ್ದರು.. ಮಹಾ ಜಗಳಗಂಟರೂ ಮತ್ತು ಅಷ್ಟೇ ಮುಗ್ಧರೂ ಆಗಿದ್ದ ನಾಗಭೂಷಣರು ತಮ್ಮ ರೇಡಿಯೋ ಕಾರ್ಯಕ್ರಮ, ಪತ್ರಿಕಾ ಸಂಪಾದಕೀಯ ಬರಹಗಳು ಮತ್ತು ಸಾರ್ವಜನಿಕ ಭಾಷಣಗಳಿಂದ ಬಹಳ ಕಾಲ ನೆನಪಿನಲ್ಲಿ ಉಳಿಯಬಲ್ಲವರು. ಈ ಸಲದ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಪುಸ್ತಕದ ಕುರಿತು ಈ ಹಿಂದೆ ಅವರು ಬರೆದಿದ್ದ ಲೇಖನವೊಂದು ಅವರ ನೆನಪಿಗಾಗಿ ಇಲ್ಲಿದೆ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ