Advertisement

Category: ವ್ಯಕ್ತಿ ವಿಶೇಷ

ಸಾತ್ವಿಕ ಆತ್ಮವಿಶ್ವಾಸದ ಪ್ರತೀಕ

ರಾಜೇಶ್ವರಿ ತೇಜಸ್ವಿ ಜೀವನೋತ್ಸಾಹದ, ಲವಲವಿಕೆಯ ಮಹಿಳೆ.  ಒಬ್ಬರೇ ಇದ್ದಾಗಲೂ ಅಡಿಗೆ ಮಾಡಲು ಅವರಿಗೆ ಎಂದಿನ ಉತ್ಸಾಹವೇ ಇರುತ್ತಿತ್ತು. ಸಾಮಾನ್ಯ ವಾಗಿ ಅವರ ಮೆನು ವಿನಲ್ಲಿ ಮೂರು ತರಕಾರಿ ಐಟಂಗಳು. ಪಲ್ಯ ಚಟ್ನಿ , ಸಾರು ಅಥವಾ ಸಾಂಬಾರು. ಕೆಸುವಿನ ಸೊಪ್ಪನ್ನು ಗಂಟು ಕಟ್ಟಿ ಮಾಡುವ ಸಾಂಬಾರು, ಹೀರೆ ಸಿಪ್ಪೆಯ ಚಟ್ನಿ, ಪತ್ರೊಡೆ, ಪಕೋಡಗಳು ಹೀಗೆ. ಮಲೆನಾಡಿನ ವಿಶೇಷಗಳು. ಎಂಬತ್ನಾಲ್ಕರ ಪ್ರಾಯದಲ್ಲಿ ಸದೃಢವಾದ ಹಲ್ಲುಗಳನ್ನು ಹೊಂದಿದ್ದ ಅವರು ಎಂದೂ ಯಾರ ಬಗ್ಗೆಯೂ ಕಟಕಿಯಾಡಿದ್ದಿಲ್ಲ. ತುಂಬು ಬದುಕನ್ನು ಸವಿದು ಅವರೀಗ ಹೊರಟು ಹೋಗಿದ್ದಾರೆ.

Read More

ಮಾಯವಾದ ಬೆಟ್ಟದಹೂವಿನ ಪರಿಮಳ

ಪವರ್ ಸ್ಟಾರ್ ಎಂಬ ಬಿರುದಿದ್ದರೂ ವಿನಯ ಮತ್ತು ಸಜ್ಜನಿಕೆಯನ್ನು ಮೈಗೂಡಿಸಿಕೊಂಡಿಸಿದ್ದ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಹೋಗಿದ್ದಾರೆ.  ತಮ್ಮ ಹಾರ್ದಿಕ ನಗುವಿನಿಂದಲೇ ಎಲ್ಲರ ಮನಗೆಲ್ಲುತ್ತಿದ್ದ ಅವರು ಮಕ್ಕಳ ಪಾಲಿಗೆ ಪ್ರೀತಿಯ ಅಪ್ಪು.  ಹಾಗೆ ನೋಡಿದರೆ ಮಕ್ಕಳಿಗೆ ಮಾದರಿಯಾಗಿದ್ದ ಹೀರೋ ಅವರಾಗಿದ್ದರು. ರಿಯಾಲಿಟಿ ಶೋಗಳಲ್ಲಿ ಅವರು ಆಗೀಗ ಹೇಳುತ್ತಿದ್ದ ಮಾತುಗಳ ಹಿಂದೆ ಒಳ್ಳೆಯತನ, ಪ್ರಾಮಾಣಿಕತೆ….

Read More

‘ಕಾವ್ಯದ ಕನ್ನಡಿಯಲ್ಲಿ ಕಂಡ ಜೀವನಪಥ’

ಅನುಭವಕ್ಕೆ ಸ್ವತಃ ಯಾವುದೇ ರೀತಿಯ ಆಕೃತಿ ಇಲ್ಲ. ಆದರೆ ನಾವು ಮಾತ್ರ ಇದು ಸುಖದ ಅನುಭವ, ಇದು ದುಃಖದ ಅನುಭವ, ಇದು ವಿಹ್ವಲತೆ, ತಲ್ಲಣ, ಇದು ವಿಷಾದದ ಅನುಭವ ಎಂದೆಲ್ಲ ಹೆಸರಿಡುತ್ತೇವೆ ಎಂದು  ಹೇಳುವ ಆನಂದ ಝುಂಜರವಾಡ ಮೂಲತಃ ಕಾವ್ಯಶಕ್ತಿಯನ್ನು ಒಲಿಸಿಕೊಂಡ ಕವಿ. ಇತ್ತೀಚೆಗೆ ಅವರ ಹೊಸ ಕವನ ಸಂಕಲನ ಶಬ್ದ ಸುಪಾರಿ ಬಿಡುಗಡೆಯಾಯಿತು.

Read More

ತೀರಿಹೋದ ಗೋವಿಂದ ರಾವ್ ಕುರಿತು…

ಸಾಮಾಜಿಕ ವ್ಯವಸ್ಥೆಯ ಕಡೆಗೆ ಚಿಕಿತ್ಸಕ ನೋಟ ಹೊಂದಿದ್ದ, ತಪ್ಪುಗಳ ಕಂಡರೆ ಮನೆಯ ಹಿರಿಯರಂತೆ ಗದರುತ್ತಿದ್ದ ಜಿ.ಕೆ. ಗೋವಿಂದ ರಾವ್ ಇಂದು ತೀರಿಕೊಂಡರು. ಇಂಗ್ಲಿಷ್ ಪ್ರಾಧ್ಯಾಪಕರಾದ ಅವರು ನಾಟಕ, ಸಿನಿಮಾ, ಬರಹಗಳ ಜೊತೆ ಒಡನಾಟ ಹೊಂದಿದ್ದವರು‌. ಅದಕ್ಕೂ ಮಿಗಿಲಾಗಿ ಯುವಜನತೆಯ ಜೊತೆಗೆ ಸದಾ ಬೆರೆಯುತ್ತಿದ್ದವರು. ಚಿಂತಕ ಡಾ. ರಾಜೇಂದ್ರ ಚೆನ್ನಿ ತಮ್ಮ ಗೆಳೆಯನ ಕುರಿತ ನೆನಪುಗಳನ್ನು ಬರೆದಿದ್ದಾರೆ. ‌

Read More

ಸಾರಾ ಉಮ್ಮಾಗೆ ಈಗ ಎಂಭತ್ತೈದು

‘ಚಂದ್ರಗಿರಿಯ ತೀರದಲ್ಲಿ’ ಕೃತಿಯ ಮೂಲಕ ಸಾಹಿತ್ಯ ಪಯಣ ಆರಂಭಿಸಿದ ಹಿರಿಯ ಲೇಖಕಿ ಸಾರಾ ಅಬೂಬಕ್ಕರ್ ತಮ್ಮ ಎಂಭತ್ತೈದರ ಹರೆಯಲ್ಲಿದ್ದಾರೆ. ಕತೆ, ಕಾದಂಬರಿ, ಅನುವಾದ, ಪ್ರಬಂಧ ಮುಂತಾಗಿ ಅನೇಕ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದ ಅವರು ತಮ್ಮ ನಿಲುವಿಗೆ ಎದುರಾದ ಹಲವು ಪ್ರತಿರೋಧಗಳ ನಡುವೆ ಜೀವನ್ಮುಖಿ ಚಿಂತನೆಗಳನ್ನು ಉಳಿಸಿಕೊಂಡವರು. ಈಗ ಸೊಸೆಯ ಆರೈಕೆಯಲ್ಲಿ ಸಮುದ್ರವನ್ನು ನೆನಪಿಸಿಕೊಳ್ಳುತ್ತಾ ಇರುವ ಸಾರಾ ಅವರ ಕುರಿತು ಕೋಡಿಬೆಟ್ಟು ರಾಜಲಕ್ಷ್ಮಿ ಬರೆದ ಬರಹ ಇಲ್ಲಿದೆ. 

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ