Advertisement

Category: ಸಂಪಿಗೆ ಸ್ಪೆಷಲ್

ನೀರಿನ ನೆರಳು:‌ ಪ್ರಕಾಶ್‌ ಪೊನ್ನಾಚಿ ಬರಹ

ಅಗಲಿಕೆ ಆರಂಭದಷ್ಟೇ ನೋವನ್ನು ಅಂತ್ಯಕ್ಕೂ ಉಳಿಸಿಕೊಳ್ಳುತ್ತದೆನ್ನುವ ಸೂತ್ರ ಅವಳಿಂದ ನನಗೀಗ ನಿಧಾನಕ್ಕೆ ಅರ್ಥವಾಗತೊಡಗಿತ್ತು. ಮತ್ತೆ ಮರುಜನ್ಮವಿದ್ದರೆ ನನ್ನಾಣೆ ನೀನೆ ನನಗೆ ಸಿಗಬೇಕು. ಈ ಮಡಿಲು ಸದಾ ನನ್ನ ತಲೆಗೆ ಜೋಪಡಿಯಾಗಬೇಕು. ನಿನ್ನ ಕುರುಚಲು ಗಡ್ಡದ ಕೂದಲು ಸದಾ ನನ್ನ ಕೆನ್ನೆಗೆ ಕಚಗುಳಿ ಇಡುತ್ತಿರಬೇಕು. ನನ್ನ ಎಲ್ಲಾ ಖುಷಿಗಳಿಗೂ ನೀನೇ ಕಾರಣಬೇಕು… ಏನೆಲ್ಲಾ ಹೇಳಿದ್ದಳು ಅವಳು. ಪ್ರೀತಿಸುವುದರಲ್ಲಿ ನಾನೇ ಹುಚ್ಚ ಎಂದುಕೊಂಡ ನನ್ನನ್ನೇ ಸೋಲಿಸಿ ಹುಚ್ಚಿಯಷ್ಟೇ ಪ್ರೀತಿಸುತ್ತಿದ್ದಳು.
ಪ್ರಕಾಶ್‌ ಪೊನ್ನಾಚಿ ಬರಹ ನಿಮ್ಮ ಓದಿಗೆ

Read More

ಬಚ್ಚಲಿನ ಬಗೆಗೊಂದು ಭಾವಸ್ಫುರಣ: ವಿಶ್ವನಾಥ ಎನ್‌ ನೇರಳಕಟ್ಟೆ ಬರಹ

ಹಾಗೆ ನೋಡಿದರೆ ಮನೆಯ ಉಳಿದ ಎಲ್ಲಾ ಅಂಗಗಳಿಗಿಂತ ಮಿಗಿಲಾಗಿ ಬಚ್ಚಲುಮನೆ ರಾಜಮರ್ಯಾದೆಯನ್ನು ಪಡೆದುಕೊಳ್ಳುತ್ತದೆ. ಅಡುಗೆ ಕೋಣೆ ಎನ್ನುತ್ತೇವೆ. ಮಲಗುವ ಕೋಣೆ ಎನ್ನುತ್ತೇವೆ. ದೇವರ ಕೋಣೆ ಎನ್ನುತ್ತೇವೆ. ಆದರೆ ಬಚ್ಚಲನ್ನು ಬಚ್ಚಲು ಮನೆ ಎನ್ನುತ್ತೇವೆ. ಮನೆಯ ಒಂದು ಭಾಗವಾಗಿರುವ ಬಚ್ಚಲನ್ನು ಇನ್ನೊಂದು ಮನೆಯೇ ಎಂಬಂತೆ ಪರಿಗಣಿಸುತ್ತೇವೆ. ಮನೆಯ ಬೇರಾವ ಕೋಣೆಗಳಿಗೂ ಸಿಗದ ಪ್ರಾಶಸ್ತ್ಯ ಬಚ್ಚಲುಮನೆಗಿದೆ. ಉಳಿದ ಕೋಣೆಗಳು ಈ ತಾರತಮ್ಯವನ್ನು ಒಪ್ಪಿಕೊಳ್ಳದೆ ಪ್ರತಿಭಟಿಸದಿರುವುದೇ ಆಶ್ಚರ್ಯ!
ಬಚ್ಚಲಿನ ಕುರಿತ ಹಲವು ವಿಚಾರಗಳನ್ನು ಬರೆದಿದ್ದಾರೆ ವಿಶ್ವನಾಥ ಎನ್‌ ನೇರಳಕಟ್ಟೆ

Read More

ಪಿಕ್ ನಿಕ್‍ ಎಂದು ಯಾಮಾರಿಸಿದ್ದು!!!: ಬಸವನಗೌಡ ಹೆಬ್ಬಳಗೆರೆ ಬರಹ

ಊರಿಂದ ಇನ್ನೇನು ಸ್ವಲ್ಪ ದೂರ ಹೋಗಿರಲಿಲ್ಲ, ಅವನ ವಿರೋಧಿಗಳು ಕೈಯಲ್ಲಿ ಕಣಿಗೆ (ಮರದ ಬಡಿಗೆ) ಹಿಡಿದು ನಮ್ಮ ರಸ್ತೆಗೆ ಅಡ್ಡವಾಗಿ ನಿಂತಿದ್ದರು. ವ್ಯಾನು ನಿಲ್ಲಿಸಿ ‘ಯಾಕೆ?’ಎಂದು ಕೇಳಿದಾಗ ಅವರು ವ್ಯಾನಿನ ಸುತ್ತಲೂ ನಿಂತು ‘ನೋಡಲು ನರಪೇತಲ ನಾರಾಯಣರಂತೆ ಇದೀರ ಬೋ… ಮಕ್ಕಳಾ.. ರೌಡಿಗಳೇನ್ರೂ ನೀವು, ತಲೆ ಸೀಳಿ ಬಿಡ್ತೀವಿ’ ಎಂದು ಸಿಟ್ಟಾಗಿ ಕಣಿಗೆ ಎತ್ತುತ್ತಾ ಬೈಗುಳ ಶುರು ಮಾಡಿದರು. ಆಗ ನಾವು ನಡುಗುತ್ತಾ ಕಣ್ಣೀರಿಡುತ್ತಾ ನಮ್ಮ ಹಿನ್ನೆಲೆ ತಿಳಿಸಿದೆವು. ತಾಳ್ಮೆಯಿಂದ ನಮ್ಮ ಮಾತನ್ನು ಅವರು ಕೇಳಿದ್ದರಿಂದಲೋ ಏನೋ ಅವರು ನಮಗೇನೂ ಮಾಡದೇ, ಹೋಗಲು ಸುಮ್ಮನೆ ಬಿಟ್ಟರು!
ಬಸವನಗೌಡ ಹೆಬ್ಬಳಗೆರೆ ಬರಹ ನಿಮ್ಮ ಓದಿಗೆ

Read More

ಚಂದವಳ್ಳಿ ತೋಟದ ನೆನಪುಗಳು: ಡಾ. ಸದಾಶಿವ ದೊಡಮನಿ ಬರಹ

ಭೀಮವ್ವ ಆಯಿ ಮಲ್ಲಪ್ಪ ಮುತ್ಯಾನ ಮಾತು, ಮೀರುವಂಗ ಇರಲಿಲ್ಲ. ನನ್ನ ಕೈಯೊಳಗಿನ ಗಂಗಾಳ ತೊಗೊಂಡು, ಬಾ ಅಂತ ಒಳಗ ಕರ್ದು, ವಣಗಿ ಹಾಕಿ ನನ್ನ ಕೈಯಾಗ ಗಂಗಾಳ ಕೊಡುವುದರೊಳಗ ಮಲ್ಲಪ್ಪ ಮುತ್ಯಾ ತಾನ ಎದ್ದು ಬಂದು, ನನ್ನ ಕೈಯೊಳಗಿನ ಗಂಗಾಳ ಇಸಗೊಂಡು, ಒಳಗೆ ಹೋಗಿ, ಇಡೀ ಗಡಗೀನ ಗಂಗಾಳಕ್ಕ ಸುರುವಿ, ‘ತೊಗೊಂಡು ಹೋಗ’ ಅಂತ ಕೊಟ್ಟು ಕಳಿಸಿ ಬಿಡುತ್ತಿದ್ದ.
ತಮ್ಮ ಬಾಲ್ಯಕಾಲದ ನೆನಪನ್ನು ಹಂಚಿಕೊಂಡಿದ್ದಾರೆ ಡಾ. ಸದಾಶಿವ ದೊಡಮನಿ

Read More

ಮನಸ್ಸೆಂಬೊ ಮಾಯಾವಿ..: ವಿಶ್ವನಾಥ ನೇರಳೆಕಟ್ಟೆ ಬರಹ

ಮನಸ್ಸು ಎನ್ನುವುದೇ ಹಾಗೆ, ಅನೂಹ್ಯವಾದದ್ದು, ಅಸದೃಶವಾದದ್ದು. ಮನುಷ್ಯನಲ್ಲಿರುವ ಅತ್ಯಂತ ಶಕ್ತಿಶಾಲಿ ಹಾಗೂ ಅತೀ ದುರ್ಬಲ ಅಸ್ತ್ರವೆಂದರೆ ಅದು ಮನಸ್ಸು. ನಮ್ಮ ಬದುಕಿನಲ್ಲಿ ಯಾವತ್ತೋ ನಡೆದ ಘಟನೆಗಳು, ನೋಡಿದ ಸನ್ನಿವೇಶಗಳು ಬದುಕಿನ ಇನ್ಯಾವುದೋ ಕಾಲಘಟ್ಟದಲ್ಲಿ ನಮ್ಮ ಮನಸ್ಸನ್ನು ನಿಯಂತ್ರಿಸುವ ಬಗೆಯಂತೂ ಅತ್ಯದ್ಭುತ. ಮನಸ್ಸನ್ನು ನಿಭಾಯಿಸುವ ಕಲೆಯನ್ನು ಕಲಿತುಕೊಂಡರೆ ಮನುಷ್ಯ ಯಶಸ್ಸನ್ನು ಗಳಿಸಿಕೊಳ್ಳುವುದು ಸುಲಭವಾಗುತ್ತದೆ. ಹಾಗೆಂದು ಈ ಪ್ರಯತ್ನದಲ್ಲಿ ಎಡವಿದರೆ ಬದುಕು ಸಮಸ್ಯೆಗಳ ಗೂಡಾಗುತ್ತದೆ.
ನೇರಳೆಕಟ್ಟೆ ಅವರು ಮನಸ್ಸಿನ ಅಗಾಧತೆಯ ಕುರಿತು ಬರೆದ ಲೇಖನ ಇಂದಿನ ಓದಿಗಾಗಿ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ