Advertisement

Category: ಸರಣಿ

ಕೊನೆಯ ಸಿಖ್ ದೊರೆಯ ಹತಾಶ ಚರಿತೆ

ತಾಯಿಯಿಂದ ದೂರವಾಗಿ ಕೆಲವು ವರ್ಷಗಳ ನಂತರ, ನೇಪಾಳದಲ್ಲಿ ಆಕೆ ತಲೆಮರೆಸಿಕೊಂಡಿರುವುದು ಗೊತ್ತಾಗಿತ್ತು. ದುಲೀಪ್ ಸಿಂಗ್ ಅಮ್ಮನಿಗೆ ಹಲವು ಪತ್ರಗಳನ್ನು ಬರೆದಿದ್ದ. ನಿರಂತರ ಕೋರಿಕೆಯ ನಂತರ ಕೊಲ್ಕತ್ತಾದಲ್ಲಿ ತಾಯಿ-ಮಗನ ಭೇಟಿಗೆ ವ್ಯವಸ್ಥೆ ಮಾಡಲಾಯಿತು. 13 ವರ್ಷಗಳ ನಂತರ ಕಾಣಸಿಕ್ಕ ಮಗ ನಯವಾಗಿ ಮುಖ ಕ್ಷೌರ ಮಾಡಿಕೊಂಡು “ಜಂಟಲ್ಲ್ಮ್ಯಾನ್” ಆಗಿದ್ದನ್ನು ನೋಡಿ, ಸಿಖ್ ಸಾಮ್ರಾಜ್ಯ ಕಳೆದುಕೊಂಡದ್ದಕ್ಕಿಂತ ಹೆಚ್ಚಿನ ದುಃಖ ಪಂಜಾಬಿ ಅಸ್ಮಿತೆಯನ್ನು ಅಳಿಸಿಕೊಂಡ ಮಗನಿಂದ ಆಯಿತು ಎಂದಿದ್ದಳಂತೆ ಜಿಂದಾ ಕೌರ್.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಕೊನೆಯ ಸಿಖ್ ದೊರೆ ದುಲೀಪ್ ಸಿಂಗ್ ಜೀವನದ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ

Read More

ನಾಲ್ಕಾಣೆಯಿಂದ ಒಂದು ಪ್ರಾಣ ಉಳಿಯಿತು!

ಆಕೆ ಅಗಸಿಯ ಕಡೆಗೆ ಹೋಗುತ್ತಿರುವುದರಿಂದ ಏನಾಗಿದೆ ಎಂದು ಕೇಳಿಯೆಬಿಟ್ಟೆ. ಅಡುಗೆಯಲ್ಲಿ ಉಪ್ಪಿಲ್ಲವೆಂದು ಗಂಡ ಹೊಡೆದಿರುವುದಾಗಿ ತಿಳಿಸಿದಳು. ‘ಆತ ಹಣ ಕೊಡದಿದ್ದರೆ ಉಪ್ಪು ಎಲ್ಲಿಂದ ತರಲಿ’ ಎಂದು ಕೇಳಿದಳು. ಈ ರೀತಿ ಬದುಕುವುದಕ್ಕಿಂತ ಸಾಯುವುದೇ ಮೇಲು ಎಂದು ಬಾವಿಗೆ ಹಾರುವುದಾಗಿ ಹೊರಟೇಬಿಟ್ಟಳು. ಮತ್ತೆ ತಡೆದೆ. ಬಿಗಿ ಮುಷ್ಟಿಯಲ್ಲಿದ್ದ ನಾಲ್ಕಾಣೆಯನ್ನು ತೋರಿಸುತ್ತ ‘ಇದನ್ನು ಕೊಟ್ಟರೆ ವಾಪಸ್ ಹೋಗುವೆಯಾ’ ಎಂದು ಕೇಳಿದೆ. ಆಕೆ ಕೃತಜ್ಞತೆಯಿಂದ ತೆಗೆದುಕೊಂಡು ಮನೆಯ ದಾರಿ ಹಿಡಿದಳು. ಆ ನಾಲ್ಕಾಣೆಯನ್ನು ಖರ್ಚು ಮಾಡಿದೆನೆಂದು ಭಾವಿಸಿ ತಾಯಿ ಬಡಿದದ್ದು ನೋವೆನಿಸಲಿಲ್ಲ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 58ನೇ ಕಂತು ನಿಮ್ಮ ಓದಿಗೆ.

Read More

ನಾನೇಕೆ ಜಾತಿವಾದಿಯಲ್ಲ?

ನಾವೆಲ್ಲರೂ ಮನುಷ್ಯರೇ ತಾನೆ? ಈವತ್ತು ಸಮತೋಲಿತ ಮನಸ್ಸಿನಿಂದ ಕೂಡಿರುವವನು ಮುಂದೆ ಜಾತಿವಾದಿಯಾಗಬಹುದು. ಅಂತಹ ಪ್ರಲೋಭನೆ, ಒತ್ತಡಗಳು ಬರಬಹುದು. ಅಥವಾ ನಾವೇ ಅದನ್ನೆಲ್ಲ ಸೃಷ್ಟಿಸಿಕೊಂಡು ಈಗ ನಾನೇನು ಮಾಡಲಿ ಎಂದು ಅಸಹಾಯಕತೆ ನಟಿಸಿ ಜಾತಿವಾದಿಯಾಗಬಹುದು. ನಮ್ಮ ಆಪ್ತರೇ ಬಹಿರಂಗದಲ್ಲಿ ಸಮಾನಭಾವದವರಾಗಿದ್ದು, ಒಳಗಡೆ ತಮ್ಮ ಜಾತಿಯ ಬಗ್ಗೆ ಅನುಕೂಲವಾಗಿ ಭಾವಿಸುತ್ತಿರಬಹುದು, ನಡೆದುಕೊಳ್ಳುತ್ತಿರಬಹುದು.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಏಳನೆಯ ಪ್ರಬಂಧ ನಿಮ್ಮ ಓದಿಗೆ

Read More

ಇಳಿ ವಯಸ್ಸಿನ ಕಾಠಿಣ್ಯ ಸ್ವಾರ್ಥ ಇತ್ಯಾದಿ

ಜಗತ್ತಿನಲ್ಲಿ ಮನುಷ್ಯ ಬಂದಿರುವುದು, ಇರುವುದು, ಮಾಗಬೇಕಾದದ್ದು ಕೇವಲ ನಾಲ್ಕು ದಿನದ ಅತಿಥಿಯಾಗಿ ಮಾತ್ರ. ಸದಾ ಕಾಲದ ಜಹಗೀರ್‌ದಾರಿ ಅವನಿಗಿಲ್ಲ. ಇದು ಎಲ್ಲರಿಗೂ ಗೊತ್ತಾಗಲೆಂದೇ ಸಾವಿನ ಸಮಯದಲ್ಲಿ ಸೃಷ್ಟಿ ಒಂದು ಉಪಾಯ ಮಾಡಿದೆ. ಮನುಷ್ಯನಿಗೆ ಪ್ರಾಣ ಹೋಗಿದೆ ಎಂದು ಗೊತ್ತಾದ ಮೇಲೂ ಯಾರಿಗೂ ಗೊತ್ತಾಗದಂತೆ ಕೆಲಕಾಲ ಕ್ಷೀಣವಾಗಿ ಪ್ರಾಣ ಇರುತ್ತದೆ. ದೇಹದಲ್ಲಿ ಶಾಖ ಕೂಡ ಇರುತ್ತದೆ.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಆರನೆಯ ಪ್ರಬಂಧ ನಿಮ್ಮ ಓದಿಗೆ

Read More

ಉಗಿಬಂಡಿ ಯುಗದ ಫಾರ್ಸಿ ಇಂಜಿನಿಯರ್

ಲಂಡನ್‌ನಲ್ಲಿ ಮೊದಲ ಬಾರಿ ಕಳೆದದ್ದು ಒಂದು ವರ್ಷವಾದರೂ, ಉತ್ಸಾಹ ಪ್ರತಿಭೆ ಕೌಶಲಗಳಿಂದ ಬ್ರಿಟಿಷ್‌ ತಂತ್ರಜ್ಞರ ಗಮನ ಸೆಳೆದು, ಇಂಜಿನೀಯರುಗಳ ಸಮುದಾಯದಲ್ಲಿ ಅರ್ದೆಶೀರ್ ಪರಿಚಯ ಹೆಚ್ಚಿತು. ರಾಣಿ ವಿಕ್ಟೋರಿಯಾಳನ್ನು ಭೇಟಿ ಆಗುವ ಅವಕಾಶ ಒದಗಿಸಿತು. ಪ್ರಭಾವಿ ಪರಿಚಯಗಳೇ ಇನ್ಸ್ಟಿಟ್ಯೂಷನ್ ಆಫ್ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಅಸೋಸಿಯೇಟ್ ಹುದ್ದೆಗೆ ಆಯ್ಕೆಯಾಗಲೂ ಕಾರಣ ಆಯಿತು.
ಯೋಗೀಂದ್ರ ಮರವಂತೆ ಬರೆಯುವ ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ