ರೂಪಾ ರವೀಂದ್ರ ಜೋಶಿ ಹೊಸ ಸರಣಿ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಇಂದಿನಿಂದ
ಏನೇ ಹೇಳಿ, ಆ ಕಾಡು ಮಧ್ಯದ ಪುಟ್ಟ ಶಾಲೆಯಲ್ಲಿ ಓದುವಾಗಿನ ಆ ನೆನಪುಗಳು ನಿಜಕ್ಕೂ ಚಿರಸ್ಮರಣೀಯ. ನಮ್ಮನೆಯಿಂದ ಶಾಲೆ ಸುಮಾರು ಎರಡು ಕಿ.ಮೀ. ನಷ್ಟು ದೂರವಿತ್ತು. ಎರಡು ಸೊಪ್ಪಿನ ಬೆಟ್ಟ ದಾಟಿ, ಒಂದು ಗುಡ್ಡ ಏರಿಳಿದರೆ, ನಮ್ಮ ಶಾಲೆ. ಮಳೆಗಾಲದಲ್ಲಿ ಒಂದು ಪುಟ್ಟ ಕಾಲುವೆ ದಾಟಬೇಕಾಗುತ್ತಿತ್ತು. ಹೆಚ್ಚು ಕಮ್ಮಿ ಮಾರಗಲವಿದ್ದ ಆ ಕಾಲುವೆ, ಅಂಥ ಭಯಂಕರ ಕಾಲುವೆಯೇನೂ ಆಗಿರಲಿಲ್ಲ. ಅದೂ ಕೂಡಾ ನಮ್ಮ ಬಾಲ್ಯದ ಸಂಗಾತಿಯಂತೇ ನಮ್ಮ ಖುಶಿಯಲ್ಲಿ ಪಾಲು ಪಡೆದಿತ್ತು.
ರೂಪಾ ರವೀಂದ್ರ ಜೋಶಿ ಹೊಸ ಸರಣಿ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಇಂದಿನಿಂದ
