ರೇಷ್ಮೆಯ ಮಾಂತ್ರಿಕ ಚಿಟ್ಟೆಗಳ ಅಸುಖ
ನಾನೂ ನನ್ನ ತಾಯಿಯೂ ಅಪ್ಪನ ಆದೇಶಗಳಿಗೆ ಸದಾ ಸಿದ್ಧವಾಗಿರಲೇಬೇಕಿತ್ತು. ಆಗಿನ್ನೂ ಆತ ಪೇಟೆಯ ಎಂಡದ ದಾಸನಾಗಿರಲಿಲ್ಲಾ. ಖಡಕ್ ಆದ ಮನುಷ್ಯ. ಅತ್ಯುಗ್ರ ಸ್ವಾಭಿಮಾನಿ. ಆ ಕ್ಷಣವೇ ಅಲ್ಲೇ ಮರಣವಾದರೂ ಚಿಂತೆ ಇಲ್ಲಾ ಎಂದು ಅನ್ಯಾಯದ ವಿರುದ್ಧ ಪ್ರತಿಭಟಿಸಿ ಇಡೀ ಊರಿಗೆ ಊರನ್ನೇ ಎದುರು ಹಾಕಿಕೊಂಡು ದಂಗೆ ಏಳುತ್ತಿದ್ದ. ಅವನ ರೇಷಿಮೆಯ ಮನಸ್ಸೇ ತಿಳಿಯುತ್ತಿರಲಿಲ್ಲ. ಅತ್ತ ತಾತ ತನ್ನ ಹೋಟೆಲ್ ಕಾಯಕದಲ್ಲಿ ಮುಳುಗಿರುತ್ತಿದ್ದ. ಎಷ್ಟೋ ಬಡವರಿಗೆ ಸುಮ್ಮನೆ ಸಾಲದ ಲೆಕ್ಕದಲ್ಲಿ ಅನ್ನಹಾಕುತಿದ್ದ ಎಂದೂ ಸಾಲ ಕೇಳಿರಲಿಲ್ಲ ಯಾರನ್ನೂ ತಾತ.
Read More

