Advertisement

Category: ಸರಣಿ

ಓದೋ ಜರ್ನಿಯಲಿ ಅಡ್ಡಿಯಾದ ಸಮಸ್ಯೆಗಳ ‘ಹಂಪ್ಸ್’ಗಳು!!: ಬಸವನಗೌಡ ಹೆಬ್ಬಳಗೆರೆ ಸರಣಿ

ಪಿಯುಸಿಯಲ್ಲಿ ಇದ್ದ 24 ವಿದ್ಯಾರ್ಥಿಗಳು ಅಷ್ಟೇನೂ ಸೀರಿಯಸ್ಸಾಗಿ ಓದುತ್ತಿರಲಿಲ್ಲ. ಇವರೊಡನೆ ನಾನು ಸೇರಿದ ಕಾರಣ ಹೇಸಿಗೆ ತಿನ್ನೋ ಎಮ್ಮೆ ಜೊತೆ ಆಕಳು ಸೇರಿ ಆಕಳೂ ಸಹ ಹೇಸಿಗೆ ತಿನ್ನೋದನ್ನ ಕಲೀತಂತೆ ಅನ್ನೋ ಹಾಗೆ ನಾನೂ ಸಹ ಓದುವುದನ್ನು ಕಮ್ಮಿ ಮಾಡಿದೆ. ನಾನು ತುಂಬಾ ಕ್ಲೋಸ್ ಆಗಿದ್ದು ಲಿಂಗರಾಜ ಹಾಗೂ ಸುಧಾಕರ ಜೊತೆ. ಲಿಂಗರಾಜ ನಮ್ಮದೇ ಕಾಲೇಜು ಆದರೆ ಸುಧಾಕರ ಮಾತ್ರ ಡಿಆರ್ ಎಂ ಕಾಲೇಜು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಇಪ್ಪತ್ತಾರನೆಯ ಕಂತು ನಿಮ್ಮ ಓದಿಗೆ

Read More

ಮಹೋನ್ನತ ಮಾನವ: ರಂಜಾನ್‌ ದರ್ಗಾ ಸರಣಿ

ಅವರೊಮ್ಮೆ ಸಸ್ಯಶಾಸ್ತ್ರದ ಪ್ರಯೋಗಾಲಯಕ್ಕೆ ಭೇಟಿ ನೀಡಿದಾಗ, ಪ್ರಯೋಗಕ್ಕಾಗಿ ಎಲ್ಲಿಂದಲೋ ತಂದ ಕಮಲದ ಹೂ ನೋಡಿದರು. ಮತಗೆ ಅದನ್ನೆತ್ತಿ ಖಲಿಲ್ ಗಿಬ್ರಾನನ ಕವನದ ಸಾಲೊಂದನ್ನು ಉಸುರಿದರು. ಅದರ ಪಕಳೆಗಳನ್ನು ಕಿತ್ತು ಪರೀಕ್ಷಿಸುವುದು ಅವರಿಗೆ ಹಿಂಸೆ ಎನಿಸಿತ್ತು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 89ನೇ ಕಂತು ನಿಮ್ಮ ಓದಿಗೆ

Read More

ಎಂ.ಎಸ್.‌ ರಾಮಯ್ಯ ಕಾಲದ ಬೆಂಗಳೂರು: ಎಚ್. ಗೋಪಾಲಕೃಷ್ಣ ಸರಣಿ

ಈ ರಸ್ತೆಯಲ್ಲಿ ಮಿಲಿಟರಿಗೆ ಸಂಬಂಧಿಸಿದ ಕೆಲವು ಕಚೇರಿಗಳು ಇದ್ದವು. ಇಲ್ಲೂ ಸಹ ಒಂದು ರೈಲ್ವೇ ಗೇಟ್ ಇತ್ತು. ತೀರಾ ಈಚೆಗೆ ಒಂದು ಅಂಡರ್ ಪಾಸ್ ನಿರ್ಮಾಣವಾಗಿ ರೈಲು ಅದರ ತಳಗೆ ಹೋಗುತ್ತದೆ. ಮಿಲಿಟರಿ ಕಚೇರಿಗಳಿಗೆ ಸೇರಿದ ಹಾಗೆ ಒಂದು ಕಾರ್ಖಾನೆ ಇತ್ತು. ಅದರ ಹೆಸರು ಸಿಗ್ ಫಿಲ್ ಎಂದು. ಸಿಗರೇಟ್ ಫಿಲ್ಟರ್‌ನ ಕಂದು ಬಣ್ಣದ ಬೊಂಬೆ ಅದರ ಮುಖ್ಯ ಫಲಕದ ಮೇಲೆ ಬಿಂಬಿತವಾಗಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ತಾರನೆಯ ಕಂತು ನಿಮ್ಮ ಓದಿಗೆ

Read More

ಊರ ಅಭಿವೃದ್ಧಿಯಲ್ಲಿ ಅಪ್ಪನ ಶ್ರಮ…: ಸುಮಾ ಸತೀಶ್ ಸರಣಿ

ಇಲ್ಲೂ ಒಂದು ವಿಸೇಸ ಐತೆ. ಇಡೀ ಮಧುಗಿರಿ ತಾಲೂಕಿನಾಗೆ ಮಧುಗಿರಿ ಟೌನ್ ನಾಗೆ ಮಾತ್ರವೇ ಸರ್ಕಾರಿ ಹೈಸ್ಕೂಲು ಇದ್ದಿದ್ದು. ಪ್ರವೀಟು ಇಸ್ಕೂಲ್‌ಗಳು ಹೋಬಳಿ ಕೇಂದ್ರ ಕೊಡಿಗೇನಹಳ್ಳೀನಾಗೂ ಸೇರಿ ಐದಾರು ಇದ್ವು ಆಟೇಯಾ. ಅಂಗಾಗಿ ಚಿಕ್ಕಮಾಲೂರು ಹೈಸ್ಕೂಲು ವಿಶೇಷವಾಗಿತ್ತು. ಅದ್ರಾಗೂ ಆ ವರ್ಸ ಇಡೀ ತುಮಕೂರು ಜಿಲ್ಲೇನಾಗೆ ಅದೊಂದೇ ಹೈಸ್ಕೂಲು ಮಂಜೂರಾಗಿದ್ದು ಅನ್ನೋದು ಇನ್ನೊಂದು ಕೋಡು ಸಿಗಿಸಿತ್ತು. ಇನ್ನಾ ಏಸೊಂದು ಕೆಲ್ಸಾ ಮಾಡವ್ರೆ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯ ಬರಹ ಇಲ್ಲಿದೆ

Read More

ಡಾಗ್ ಡೆಂಟಿಸ್ಟ್ಸ್!…: ಪೂರ್ಣೇಶ್‌ ಮತ್ತಾವರ ಸರಣಿ

ಏಕೆಂದರೆ, ನಾವು ಆರಂಭದಲ್ಲಿ ಅದರ ಕಣ್ಣು, ಕಿಡ್ನಿ, ಹೃದಯ,ಶ್ವಾಸಕೋಶ ಹೀಗೆ ದೇಹದ ಎಲ್ಲಾ ಭಾಗಗಳನ್ನು ಪಾರ್ಟ್ ಬೈ ಪಾರ್ಟ್ ಡಿಸೆಕ್ಷನ್ ಮಾಡಿ, ಅವುಗಳನ್ನು ಫಾರ್ಮಲಿನ್ ದ್ರಾವಣ ಹಾಕಿ ಗಾಜಿನ ಜಾರಿನಲ್ಲಿ ಪ್ಯಾಕ್ ಮಾಡಿ, ಮಣಿಪಾಲದಲ್ಲಿ ಮನುಷ್ಯರ ದೇಹದ ಭಾಗಗಳನ್ನು ಪ್ರದರ್ಶನಕ್ಕಿಟ್ಟಂತೆ ಲ್ಯಾಬ್‌ನಲ್ಲಿ ಪ್ರದರ್ಶನಕ್ಕಿಡಬೇಕೆಂದು ಆಸೆಪಟ್ಟಿದ್ದೆವು. ನೋಡಿದರೆ, ನಮ್ಮ ಪುಣ್ಯಕ್ಕೋ ಅಥವಾ ನಾಯಿಯ ಪುಣ್ಯಕ್ಕೋ ಅದರ ಬೋಟಿ ಖಲೀಜಾಗಳೊಂದೂ ಇರದೆ ಅದರ ಮುಖದ ಸ್ವಲ್ಪ ಭಾಗ ಬಿಟ್ಟರೆ ಉಳಿದ ಭಾಗವೆಲ್ಲಾ ಉಪ್ಪು ಮೀನು ಒಣಗಿದಂತೆ ಒಣಗಿದ ಸ್ಥಿತಿಯಲ್ಲಿತ್ತು!
ಪೂರ್ಣೇಶ್‌ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ